ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಶುಕ್ರವಾರ ತಾಲೂಕಿನಲ್ಲಿ ನಾಲ್ಕು ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗುವ ಮೂಲಕ ತಾಲೂಕಿನಲ್ಲಿ ಈವರೆಗೆ ಒಟ್ಟು 56 ಕೊರೋನಾ ಪಾಸಿಟಿವ್ ಪ್ರಕರಣದಾಖಲಾಗಿದ್ದು ಸೋಂಕಿತರ ಸಂಖ್ಯೆ ಅರ್ಧಶತಕ ದಾಟಿದಂತಾಗಿದೆ.
ದೇವರ ನರಸಿಪುರದಲ್ಲಿ 38ವರ್ಷದ ವ್ಯಕ್ತಿಗೆ ಕೊರೋನಾ ಸೋಂಕು ತಗುಲಿದ್ದು ಶುಕ್ರವಾರ ಸಂಜೆ ಪತ್ತೆಯಾಗಿದೆ.
ಆರ್.ಎಂ.ಸಿ ಸಮೀಪವಿರುವ ಅಣ್ಣಾನಗರದಲ್ಲಿನ 65 ವರ್ಷದ ವೃದ್ಧನಿಗೆ ಪಾಸಿಟಿವ್ ದೃಢಪಟ್ಟಿದ್ದು, ಸೀಗೆಬಾಗಿಯ ನಿವಾಸಿ 27 ವರ್ಷದ ವ್ಯಕಿಗೆ ಸೋಂಕುಯಿರುವುದು ಧೃಢಪಟ್ಟಿದೆ. ಕೆಎಸ್ಆರ್ಟಿಸಿ ಬಸ್ ಡಿಪೋ ಹಿಂಭಾಗದಲ್ಲಿರುವ ಪ್ರದೇಶದ ನಿವಾಸಿ 49 ವರ್ಷದ ವ್ಯಕಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಈತ ಉಡುಪಿಗೆ ಹೋಗಿ ಬಂದಿದ್ದನೆನ್ನಲಾಗಿದೆ.
ಹಳೇನಗರದ ಖಾಸಗಿ ಆಸ್ಪತ್ರೆಯ ನರ್ಸ್ ವೃತ್ತಿಯ ಮಹಿಳೆಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಆಕೆಯ ಶೂಶ್ರುಶೆಯನ್ನು ಸದರಿ ಆಸ್ಪತ್ರೆಯಲ್ಲಿಯೇ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಸೋಂಕಿತ ವ್ಯಕ್ತಿಗಳ ವಾಸದ ಪ್ರದೇಶದ ಸ್ಥಳಕ್ಕೆ ನಗರಸಭಾ ಆಯುಕ್ತ ಮನೋಹರ್, ತಾಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ, ಆರೋಗ್ಯ ಇಲಾಖೆ ಸಿಬ್ಬಂದಿ ನೀಲೇಶ್ ರಾಜ್ ಹಾಗೂ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ ಆ ಎಲ್ಲಾ ಪ್ರದೇಶಗಳನ್ನು ಸೀಲ್ ಡೌನ್ ಮಾಡಿ, ಸೋಂಕಿತ ವ್ಯಕ್ತಿಗಳನ್ನು ಕೋವಿಡ್ ಆಸ್ಪತ್ರೆಗೆ ರವಾನಿಸಿದರು.
Get In Touch With Us info@kalpa.news Whatsapp: 9481252093
Discussion about this post