ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘದ ವತಿಯಿಂದ ಮುಖ್ಯಮಂತ್ರಿಗಳ ಕೋವಿಡ್19 ಪರಿಹಾರ ನಿಧಿಗೆ 50 ಲಕ್ಷ ರೂ.ಗಳ ವಂತಿಗೆಯನ್ನು ನೀಡಿದ್ದಾರೆ.
ಐದು ಲಕ್ಷ ರೂ.ಗಳ ಚೆಕ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಸಂಘದ ಉಪಾಧ್ಯಕ್ಷ ಶ್ರೀ ಸುಬ್ರಹ್ಮಣ್ಯ ಯಡಗೆರೆ ಅವರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷ ಕೆ.ಈ. ಕಾಂತೇಶ್, ಸಂಸ್ಥೆಯ ನಿರ್ದೇಶಕರಾದ ಜಿ.ಈ. ವಿರೂಪಾಕ್ಷಪ್ಪ, ಬಿ.ಸಿ. ನರೇಂದ್ರ, ಎಚ್.ಎಂ. ಬಡಿಯಣ್ಣ, ಆರ್. ಭೀಮರಾಜ್, ಕೀರ್ತಿರಾಜ್, ಬಿ.ಜಿ. ದಿನೇಶ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ನಗರ ಬಿಜೆಪಿ ಅಧ್ಯಕ್ಷ ಜಗದೀಶ್ ಹಾಗೂ ಸಿಬ್ಬಂದಿಗಳು ಇದ್ದರು.
Get in Touch With Us info@kalpa.news Whatsapp: 9481252093
















