ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು 56 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 541ಕ್ಕೆ ಏರಿಕೆಯಾಗಿದೆ.
ಈ ಕುರಿತಂತೆ ಆರೋಗ್ಯ ಇಲಾಖೆ ಬುಲೆಟಿನ್ ಬಿಡುಗಡೆ ಮಾಡಿದ್ದು, ಜಿಲ್ಲೆಯಲ್ಲಿ ಈವರೆಗೂ ಒಂದೇ ದಿನ ದಾಖಲಾದ ಅತಿಹೆಚ್ಚಿನ ಪ್ರಕರಣ ಇಂದಾಗಿದೆ.
ಇಂದು ದೃಢಪಟ್ಟಿರುವ ಬಹುತೇಕ ಸೋಂಕಿತರ ಮೂಲ ಪತ್ತೆಯಾಗಿಲ್ಲ. ಇನ್ನೂ ಪತ್ತೆ ಹಚ್ಚಲಾಗುತ್ತಿದ್ದು, ಇದು ಸೋಂಕು ಸಮುದಾಯದ ಹಂತವನ್ನು ತಲುಪುತ್ತಿದೆಯೇ ಎಂಬ ಆತಂಕಕ್ಕೆ ಕಾರಣವಾಗಿದೆ.
ಇನ್ನುಳಿದಂತೆ ಐಎಲ್’ಐ, ಅಂತರ ಜಿಲ್ಲಾ ಪ್ರಯಾಣದ ಹಿನ್ನೆಲೆಯುಳ್ಳವರೂ ಇದ್ದರೆ, ಇನ್ನು ಕೆಲವರ ಸೋಂಕಿನ ಸಂಪರ್ಕ ಮೂಲವೇ ಪತ್ತೆಯಾಗಿಲ್ಲ. ಅಲ್ಲದೇ, ಈಗಾಗಲೇ ದೃಢಪಟ್ಟಿರುವ ಹಳೆಯ ಸೋಂಕಿತರ ಸಂಪರ್ಕವೇ ಆಗಿದೆ ಎಂದು ವರದಿಯಾಗಿದೆ.
ಈವರೆಗೂ 124 ಕಂಟೈನ್ಮೆಂಟ್ ಝೋನ್’ಗಳನ್ನು ಮಾಡಲಾಗಿದ್ದು, ಡಿ ನೋಟಿಫೈಡ್ ಝೋನ್’ಗಳ ಸಂಖ್ಯೆ 18 ಆಗಿದೆ. ಈವರೆಗೂ 9 ಮಂದಿ ಕೋವಿಡ್19ಗೆ ಮೃತರಾಗಿದ್ದಾರೆ ಎಂದು ಬುಲೆಟಿನ್ ತಿಳಿಸಿದೆ.
Get In Touch With Us info@kalpa.news Whatsapp: 9481252093

















