ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು ಆರು ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 129ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಸಮುದಾಯಕ್ಕೆ ಹಬ್ಬಿರುವ ಆತಂಕ ಎದುರಾಗುತ್ತಿದೆ.
10826 ರೋಗಿ ಸಂಖ್ಯೆ 35 ವರ್ಷದ ಪುರುಷ, 10828 ರೋಗಿ ಸಂಖ್ಯೆ 38 ವರ್ಷದ ಪುರುಷ ಹಾಗೂ 10830ರ ರೋಗಿ ಸಂಖ್ಯೆ 30 ವರ್ಷದ ಮಹಿಳೆಯಲ್ಲಿ ಐಎಲ್’ಐ ಕಾಣಿಸಿಕೊಂಡಿದೆ. ಉಳಿದಂತೆ, ಇಬ್ಬರಿಗೆ ಹಳೆಯ ರೋಗಿ ಸಂಪರ್ಕವಿದ್ದು, ಇನ್ನೊಬ್ಬ ರೋಗಿ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಇನ್ನು, ಇಬ್ಬರಿಗೆ ಇಂದು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Get In Touch With Us info@kalpa.news Whatsapp: 9481252093
















