ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕೊಪ್ಪಳ: ಶತಮಾನದ ಅಪರೂಪದ ಸೂರ್ಯಗ್ರಹಣ ನಗರದಲ್ಲಿ ಸುಮಾರು ಶೇ.60ರಷ್ಟು ಗೋಚರವಾಗಿದ್ದು, ಜಿಲ್ಲೆಯಾದ್ಯಂತ ಖಗೋಳಾಸಕ್ತರು ಹಾಗೂ ಸಾರ್ವಜನಿಕರ ಇದನ್ನು ಕಣ್ತುಂಬಿಕೊಂಡರು.
ಮುಂಜಾನೆ 8 ಗಂಟೆ 5 ನಿಮಿಷಕ್ಕೆ ಸ್ಪರ್ಷವಾದ ಗ್ರಹಣ ಸುಮಾರು 9 ಗಂಟೆ ಸಮಯಕ್ಕೆ ಶೇ.40ರಷ್ಟು ಕಾಣಿಸಿಕೊಂಡಿತ್ತು. ನಂತರ 9:30 ನಿಮಿಷದ ವೇಳೆಗೆ ಶೇ.60ರಷ್ಟು ಕತ್ತಲಾಗಿತ್ತು.
ಈ ವೇಳೆಯಲ್ಲಿ ಕಿರ್ಲೋಸ್ಕರ್ ಕಾರ್ಖಾನೆಯ ಆವರಣದಲ್ಲಿ ಉದ್ಯೋಗಿಗಳು ಕಪ್ಪು ಗ್ಲಾಸಿನ ಮೂಲಕ ಸೂರ್ಯನನ್ನು ನೋಡಿದಾಗ ಸೂರ್ಯನು ಸುಮಾರು ಶೇ.60ರಷ್ಟು ಭಾಗ ಕತ್ತಲಾಗಿತ್ತು.
ಇನ್ನು, ಅಪರೂಪದ ಈ ಸೂರ್ಯಗ್ರಹಣವನ್ನು ಕೊಪ್ಪಳ ನಗರದ ಸಾರ್ವಜನಿಕರು ಕಪ್ಪು ಕನ್ನಡಗಳ ಮೂಲಕ ನೋಡಿ ಕಣ್ತುಂಬಿಕೊಂಡರು.
(ವರದಿ: ಮುರಳೀಧರ ನಾಡಿಗೇರ್, ಕೊಪ್ಪಳ)
Get in Touch With Us info@kalpa.news Whatsapp: 9481252093
Discussion about this post