ಕಲ್ಪ ಮೀಡಿಯಾ ಹೌಸ್ | ಮಂಗಳೂರು |
ದಕ್ಷಿಣ ಕನ್ನಡ #DakshinaKannada ತೆಂಗು ರೈತ ಉತ್ಪಾದಕರ ಸಂಸ್ಥೆಯು ತನ್ನ ಕಾರ್ಯಕ್ಷೇತ್ರವನ್ನು ರಾಜ್ಯದಾದ್ಯಂತ ವಿಸ್ತರಿಸುವ ಭಾಗವಾಗಿ 247 ಫ್ರ್ಯಾಂಚೈಸಿಗಳನ್ನು ನೀಡಲು ತೀರ್ಮಾನಿಸಿದೆ.
ಫ್ರ್ಯಾಂಚೈಸಿಗಳನ್ನು ನೀಡುವ ಮೂಲಕ ಉದ್ಯಮಶೀಲರಿಗೆ ಮತ್ತು ಸಂಘಸಂಸ್ಥೆಗಳಿಗೆ ಸ್ವ-ಉದ್ಯೋಗ ಕಲ್ಪಿಸುವ ಉದ್ದೇಶ ಹೊಂದಿದೆ.
ಶಿವಮೊಗ್ಗ #Shivamogga ಜಿಲ್ಲೆಯಲ್ಲಿ 7 ಫ್ರ್ಯಾಂಚೈಸಿಗಳು ಸೇರಿದಂತೆ, ರಾಜ್ಯದ ಪ್ರತಿ ತಾಲೂಕಿನಲ್ಲಿ ವಿತರಣಾ ಕೇಂದ್ರಗಳನ್ನು ತೆರೆಯಲು ಸಂಸ್ಥೆ ಯೋಜಿಸಿದೆ. ಈ ಕೇಂದ್ರಗಳ ಮೂಲಕ ತೆಂಗಿನ ಐಸ್ಕ್ರೀಂ, ತೆಂಗಿನಹಾಲಿನ ಜ್ಯೂಸ್, ತೆಂಗಿನಎಣ್ಣೆ, ಗೊಬ್ಬರಗಳು, ಟರ್ಪಾಲಿನ್ ಉತ್ಪನ್ನಗಳು, ಪೀಠೋಪಕರಣಗಳು ಸೇರಿದಂತೆ 32ಕ್ಕೂ ಹೆಚ್ಚು ಉತ್ಪನ್ನಗಳು ಮತ್ತು 24 ವಿವಿಧ ತಳಿಯ ತೆಂಗಿನಸಸಿಗಳು ಈ ಕೇಂದ್ರದಲ್ಲಿ ದೊರೆಯಲಿವೆ.
ಅರ್ಜಿ ಸಲ್ಲಿಸುವುದು ಹೇಗೆ?
ಫ್ರ್ಯಾಂಚೈಸಿ ಪಡೆಯಲು ಆಸಕ್ತರು ಸಂಸ್ಥೆಯ ವೆಬ್’ಸೈಟ್ www.coconutfarmers.in ಮೂಲಕ online ಅರ್ಜಿಯನ್ನು ಸಲ್ಲಿಸಬಹುದು ಅಥವಾ ಸಂಸ್ಥೆಯಿಂದ ಅರ್ಜಿಯನ್ನು ಪಡೆದು, ಭರ್ತಿ ಮಾಡಿ ಕೆವೈಸಿ ಜೊತೆಗೆ 65,000/-ರೂ.ಗಳ DD /CHEQUE / ಬ್ಯಾಂಕ್ ವರ್ಗಾವಣೆ ದಾಖಲೆಯನ್ನು ಲಗತ್ತಿಸಿ, ಸಂಸ್ಥೆಯ ಪ್ರಾದೇಶಿಕ ಕಚೇರಿಗೆ ಕಳುಹಿಸತಕ್ಕದ್ದು.
ಆಯ್ಕೆಯಾದ ಫ್ರ್ಯಾಂಚೈಸಿಗಳಿಗೆ ಉತ್ಪನ್ನಗಳ ಬಗ್ಗೆ ಮಾಹಿತಿ, ತರಬೇತಿ, ಮತ್ತು ರಾಷ್ಟ್ರೀಕೃತ ಬ್ಯಾಂಕ್ ಮೂಲಕ ಹಣಕಾಸಿನ ನೆರವು ಒದಗಿಸಲಾಗುವುದು.
Also Read>> ಭೂ ಸ್ವಾಧೀನ ಕೈಬಿಡುವಂತೆ ಚನ್ನರಾಯಪಟ್ಟಣ ರೈತ ನಿಯೋಗ ಸಿಎಂಗೆ ಮನವಿ
ದೇಶದಲ್ಲೇ ಮಾದರಿ ರೈತರ ಸಂಸ್ಥೆ
ರೈತರಿಂದಲೇ ಸ್ಥಾಪಿತವಾದ ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯು ರೈತರಿಂದ ತೆಂಗಿನಕಾಯಿಗಳನ್ನು ನೇರವಾಗಿ ಸ್ಪರ್ಧಾತ್ಮಕ ದರದಲ್ಲಿ ಖರೀದಿಸುತ್ತದೆ. ತೆಂಗಿನ ಎಲ್ಲಾ ಭಾಗಗಳನ್ನು ಮೌಲ್ಯವರ್ಧಿಸಿ, ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುತ್ತಿದೆ.
ಪ್ರತಿಷ್ಠಿತ CPCRI (ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ) ಅನುಮೋದಿತ ತಂತ್ರಜ್ಞಾನವನ್ನು ಬಳಸಿಕೊಂಡು, ಸಂಸ್ಥೆಯು ತೆಂಗು ಕೃಷಿಯ ಪ್ರಯೋಜನವನ್ನು ರೈತರಿಗೆ ಮತ್ತು ಗ್ರಾಹಕರಿಗೆ ತಲುಪಿಸುವ ಮೂಲಕ ದೇಶದಲ್ಲೇ ಮಾದರಿಯಾಗ ಬಲ್ಲ ರೈತರ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.
ಸಂಪರ್ಕ ಮಾಹಿತಿ: ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆ, ಸೂರ್ಯನಾರಾಯಣ ದೇವಸ್ಥಾನದ ಹತ್ತಿರ, ಮರೋಳಿ, ಮಂಗಳೂರು-575005
ದೂರವಾಣಿ: 8105487763 ಟೋಲ್ ಫ್ರೀ: 1800-203-0129 ಇಮೇಲ್: contact@coconutfarmers.in www.coconutfarmers.in
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post