Read - 2 minutes
ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರಿನ ಜಯನಗರ 4ನೇ ಬ್ಲಾಕ್ ವಿಜಯ ಸಂಜೆ ಪದವಿಪೂರ್ವ ಕಾಲೇಜಿನ ಆವರಣದ ರಾಮಸ್ವಾಮಿ ಸಭಾಂಗಣದಲ್ಲಿ ಡಿ.3ರ ಶನಿವಾರ ಸಂಜೆ 4:30ಕ್ಕೆಪ್ರಾಧ್ಯಾಪಕ ಸಂಶೋಧಕ ಡಾ. ಆರ್. ವಾದಿರಾಜು ಸಂಪಾದಿಸಿರುವ ‘ವಚನ -ದಾಸ -ಸಂಭ್ರಮ’ ಕೃತಿ ಲೋಕಾರ್ಪಣೆ ಹಾಗೂ ದಾಸ ಸಾಹಿತ್ಯ ವಿಚಾರಗೋಷ್ಠಿ ಆಯೋಜಿಸಲಾಗಿದೆ.
67ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಸಾಹಿತ್ಯ ವಿಚಾರ ವೇದಿಕೆ ಮತ್ತು ವಿಜಯ ಸಂಜೆ ಪದವಿ ಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಹಿರಿಯ ದಾಸ ಸಾಹಿತ್ಯ ಸಂಶೋಧಕ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಕೃತಿ ಲೋಕಾರ್ಪಣೆ ಮಾಡುವರು.
ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ, ಕಾಲೇಜಿನ ಪ್ರಾಂಶುಪಾಲ ಪಿ.ಸಿ ನಾಗರಾಜು, ಕೆಕೆ ಪ್ರಿಂಟರ್ಸ್ ಅಂಡ್ ಪಬ್ಲಿಷರ್ಸ್ ಶಿವರಾಮ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಕನ್ನಡ ಪ್ರಾಧ್ಯಾಪಕ ಡಾ.ಎಸ್ ಎಲ್ ಮಂಜುನಾಥ ಕೃತಿ ಕುರಿತು ಮಾತನಾಡುವರು. ಇದೇ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲ ಪ್ರೊ. ಚಂದ್ರಶೇಖರ್ ರವರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಂತರ ನಡೆಯುವ ದಾಸ ಸಾಹಿತ್ಯ ವಿಚಾರಗೋಷ್ಠಿಯಲ್ಲಿ ಡಾ. ವಿದ್ಯಾ ಕಸಬೇರವರ ಅಧ್ಯಕ್ಷತೆಯಲ್ಲಿ ಡಾ. ವಾದಿರಾಜ ಅಗ್ನಿ ಹೋತ್ರಿರವರು ‘ಹರಿದಾಸರ ಛಂದೋ ಮಾಲಿಕೆ’ ಕುರಿತು ಡಾ. ವಿದ್ಯಾ ರಾವ್ ರವರು ‘ಶ್ರೀ ವ್ಯಾಸರಾಯರ ಸುಳಾದಿಯ ಅಂಕಿತ ಸಂದಿಗ್ಧ ಸ್ಪಷ್ಟೀಕರಣ’ ಬಗ್ಗೆ ,ಡಾ.ಎಲ್ ಸುಧಾ ಅವರು’ ಪಾಠ ಪರಿಷ್ಕರಣೆ ‘ವಿಷಯ ಮಂಡನೆ ಮಾಡುವರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
Discussion about this post