ಕಲ್ಪ ಮೀಡಿಯಾ ಹೌಸ್ | ಮೈಸೂರು |
ಜಿಲ್ಲೆಯ ಟಿ. ನರಸೀಪುರ ತಾಲೂಕಿನಲ್ಲಿ ಯುವಕನೊಬ್ಬನನ್ನು ಬಲಿ ಪಡೆದಿದ್ದ ಚಿರತೆ, ಈಗ ಯುವತಿಯೊಬ್ಬಳನ್ನು ತಿಂದು ತೇಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಎಂ.ಎಲ್. ಹುಂಡಿಯಲ್ಲಿ ಯುವಕನೊಬ್ಬನನ್ನು ಚಿರತೆ ಬಲಿಪಡೆದಿತ್ತು. ಈ ಘಟನೆಯ ಬೆನ್ನಲ್ಲೇ ತಾಲೂಕಿನ ಎಸ್. ಕೆಬ್ಬೆಹುಂಡಿ ಗ್ರಾಮದ ರಮೇಶ್ ನಾಯಕ ಎಂಬುವರ ಪುತ್ರಿ ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಮೇಘನಾ (22) ಚಿರತೆ ದಾಳಿಗೆ ತುತ್ತಾಗಿದ್ದಾಳೆ.
ಯುವತಿ ಬಹಿರ್ದೆಸೆ ಹೋಗಿದ್ದ ಸಮಯದಲ್ಲಿ ಚಿರತೆ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ಯುವತಿಯನ್ನು ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಮೃತಪಟ್ಟಿದ್ದಾಳೆ.
Also read: ಬ್ರಾಹ್ಮಣರೇ ಭಾರತ ಬಿಟ್ಟು ತೊಲಗಿ: ಜೆಎನ್’ಯು ಕ್ಯಾಂಪಸ್ ಗೋಡೆ ಮೇಲೆ ವಿವಾದಾತ್ಮಕ ಬರಹ
ಘಟನೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಚಿರತೆಯನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲಲು ಅರಣ್ಯ ಇಲಾಖೆ ಆದೇಶಿಸಿದೆ.
ಇನ್ನು, ಜೊತೆಗೆ ಚಿರತೆ ದಾಳಿಯಿಂದ ಮೃತಪಟ್ಟ ಯುವತಿಯ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ, ಕುಟುಂಬಕ್ಕೆ 5 ವರ್ಷಗಳ ಕಾಲ 2 ಸಾವಿರ ರೂ. ಮಾಸಾಶನ. ಕುಟುಂಬದ ಒಬ್ಬ ಸದಸ್ಯರಿಗೆ ಹೊರ ಗುತ್ತಿಗೆ ಆಧಾರದಡಿ ಕೆಲಸ ನೀಡಲು ಅರಣ್ಯ ಇಲಾಖೆ ಮುಂದಾಗಿದೆ. ಅಲ್ಲದೇ ಟಿ. ನರಸೀಪುರ ಆರ್’ಎಫ್’ಓಗೆ ಕಡ್ಡಾಯ ರಜೆ ನೀಡಿ ಈ ಬಗ್ಗೆ ತನಿಖೆ ನಡೆಸಲು ಆದೇಶ ಹೊರಡಿಸಲಾಗಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















