ಕಲ್ಪ ಮೀಡಿಯಾ ಹೌಸ್ | ಮೈಸೂರು |
ನಾಗರಿಕರ ಬೇಡಿಕೆಯಂತೆ ಇಲ್ಲಿನ ರಿಂಗ್ ರಸ್ತೆಯಲ್ಲಿ ಲೈಟ್’ಗಳನ್ನು ಅಳವಡಿಸಿದ ಎರಡೇ ದಿನಕ್ಕೆ ಕಳ್ಳರು ಸ್ವಿಚ್ಸ್ ಕಳವು ಮಾಡಿರುವ ಘಟನೆ ನಡೆದಿದೆ.
ಸಾತಗಳ್ಳಿ ಬಳಿಯಲ್ಲಿ ಈ ಘಟನೆ ನಡೆದಿದ್ದು, ಸಂಸದ ಪ್ರತಾಪ್ ಸಿಂಹ ಅವರ ಪ್ರಯತ್ನದಿಂದಾಗಿ ಈ ಭಾಗದ ರಿಂಗ್ ರಸ್ತೆಯಲ್ಲಿ ಪ್ರಕಾಶಮಾನವಾದ ಲೈಟ್’ಗಳನ್ನು ಅಳವಡಿಸಿ, ಎರಡು ದಿನದ ಹಿಂದೆ ಸ್ವತಃ ಅವರೇ ಖುದ್ಧು ಆನ್ ಮಾಡಿಸಿದ್ದರು. ಆದರೆ, ನಿನ್ನೆ ರಾತ್ರಿ ಡಿಪಿ ಸ್ವಿಚ್’ಗಳನ್ನು ಕದ್ದಿರುವ ಕಳ್ಳರು, ಲೈಟ್ ಸಂಪರ್ಕವನ್ನೂ ಸಹ ತೆಗೆದಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಸಂಸದರು, ಇಂದಿನಿಂದ ರಾತ್ರಿ ಗಸ್ತು ಆರಂಭಿಸುತ್ತಿದ್ದೇನೆ. ಈ ಭಾಗದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಇಂಡಿಯನ್ ಬ್ಯಾಂಕ್’ನಿಂದ 5 ಲಕ್ಷ ಡಿಡಿ ಕೊಡಿಸಿದ್ದೇನೆ ಎಂದಿದ್ದಾರೆ.
Also read: ಉಡುಪಿ ಪುತ್ತಿಗೆ ಶ್ರೀಗಳಿಂದ ಪರ್ಯಾಯ ಪೂರ್ವ ಬಾಳೆ ಮುಹೂರ್ತ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post