ಕಲ್ಪ ಮೀಡಿಯಾ ಹೌಸ್ | ಕೂಡ್ಲಿಗೆರೆ(ಭದ್ರಾವತಿ) |
ಇಲ್ಲಿನ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರ ಸ್ಥಾನಕ್ಕೆ ರುದ್ರೇಶ್ ಆರ್.ಎನ್. ಕೂಡ್ಲಿಗೆರೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಿಂದಿನ ಉಪಾಧ್ಯಕ್ಷರಾದ ನಗರಾಜ ಗೌಡ್ರು ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಇಂದು ಚುನಾವಣೆ ನಡೆದಿದ್ದು, ರುದ್ರೇಶ್ ಆಯ್ಕೆಯಾಗಿದ್ದಾರೆ.
ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಅವರು ಚುನಾವಣೆ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಪಾರ್ವತಿ ಬಾಯಿ, ಮಾಜಿ ಅಧ್ಯಕ್ಷರಾದ ಜಯಣ್ಣ, ಮಲ್ಲಕ್ ಬಿ ವೀರಪ್ಪನ್, ಉಮಾದೇವಿ ತಿಪ್ಪೇಶ್, ಮಾಜಿ ಉಪಾಧ್ಯಕ್ಷರಾದ ಕುಬೇರ್ ನಾಯ್ಕ, ನಾಗರಾಜ್ ಗೌಡ್ರು, ಸದಸ್ಯರಾದ ವಿಶ್ವನಾಥ, ಸ್ವಾಮೀನಾಥನ್, ಸಿದ್ದಮ್ಮ ನಾಗೇಶ್, ಗೌರಮ್ಮ ಮಹಾದೇವ, ನೀಲಬಾಯಿ ಚಂದ್ರನಾಯಕ್, ಭಾಗ್ಯಮ್ಮ ರಾಮಚಂದ್ರ, ಅರಕೆರೆ ಲಕ್ಷ್ಮೀಪತಿ, ವಿಎಸ್ ಎಸ್ ಎನ್ ಅಧ್ಯಕ್ಷರಾದ ಎನ್.ಎಚ್. ಮಹೇಶ್ವರಪ್ಪ, ಪರಮೇಶ್ವರಪ್ಪ, ಕೂಡ್ಲಿಗೆರೆ ಕಲ್ಪನಹಳ್ಳಿ ಕೋಡಿಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು. ಅಪಾರ ಸ್ನೇಹಿತರು ಈ ಸಂದರ್ಭದಲ್ಲಿ ಶುಭ ಕೋರಿದರು.
Also read: ಚಳಿಗೆ ಉತ್ತರ ಭಾರತ ಗಡಗಡ: ಕಾಶ್ಮೀರದಲ್ಲಿ ಮೈನಸ್ 7 ಡಿಗ್ರಿ ತಾಪಮಾನ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















