ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಉತ್ತರ ಭಾರತ ಹಾಗೂ ವಾಯವ್ಯ ರಾಜ್ಯದ ಬಹಳಷ್ಟು ಕಡೆಗಳಲ್ಲಿ ತಾಪಮಾನ ಇಳಿಕೆಯಾಗಿದ್ದು, ಚಳಿಗೆ ಅಕ್ಷರಃ ಈ ಪ್ರದೇಶಗಳು ತತ್ತರಿಸಿ ಹೋಗುತ್ತಿವೆ.
ಜಮ್ಮು ಕಾಶ್ಮೀರ, ಪಂಜಾಬ್, ಹರಿಯಾಣ, ರಾಜಸ್ಥಾನ, ದೆಹಲಿ ಸೇರಿದಂತೆ ಬಹಳಷ್ಟು ರಾಜ್ಯಗಳಲ್ಲಿ ತಾಪಮಾನ ಭಾರೀ ಪ್ರಮಾಣದಲ್ಲಿ ಕುಸಿದಿದ್ದು, ಅಕ್ಷರಶಃ ಚಳಿಗೆ ಜನರು ತತ್ತರಿಸುತ್ತಿದ್ದಾರೆ.
ಒಂದೇ ದಿನದಲ್ಲಿ ಉಷ್ಣಾಂಶದಲ್ಲಿ 6 ಡಿಗ್ರಿ ಸೆಲ್ಸಿಯಸ್ನಷ್ಟುಇಳಿಕೆ ಕಂಡಿದ್ದು, ಈ ಭಾಗದ ಹಲವು ನಗರಗಳಲ್ಲಿ ಭಾರೀ ಮಂಜು ಮುಸುಕಿ ಜನಜೀವನ ಅಸ್ತವ್ಯಸ್ತವಾಗಿದೆ. ಜಮ್ಮು ಕಾಶ್ಮೀರದ ಗುಲ್ಮಾರ್ಗ್’ನಲ್ಲಿ ಈ ವರ್ಷ ಕನಿಷ್ಠ ತಾಪಮಾನ ದಾಖಲಾಗಿದೆ.
Also read: ದ್ವಿಚಕ್ರ ವಾಹನ ಡಿಕ್ಕಿ: 26 ವರ್ಷದ ಪಾದಚಾರಿ ಸಾವು
ಕಣಿವೆ ರಾಜ್ಯದ ಹಲವು ಭಾಗಗಳಲ್ಲಿ ಭಾರಿ ಪ್ರಮಾಣದ ಹಿಮಪಾತವಾಗುತ್ತಿದ್ದು, ಪ್ರವಾಸಿಗರು ಪ್ರವಾಸಿ ತಾಣಗಳಿಗೆ ಲಗ್ಗೆ ಇಟ್ಟಿದ್ದಾರೆ.
ರಾಜಧಾನಿ ನವದೆಹಲಿಯಲ್ಲಿ ಗರಿಷ್ಠ 16.2 ಡಿಗ್ರಿ ಸೆಲ್ಸೀಯಸ್ ಮತ್ತು ಕನಿಷ್ಠ ತಾಪಮಾನ 5.3 ಡಿಗ್ರಿ ಸೆಲ್ಸೀಯಸ್’ಗೆ ಇಳಿದಿದೆ.
ಎಲ್ಲೆಲ್ಲಿ ಎಷ್ಟು ತಾಪಮಾನ?
ಕಾಶ್ಮೀರದ ಪಹಲಾಗಮ್: ಮೈನಸ್ 7 ಡಿಗ್ರಿ ಸೆಲ್ಸೀಯಸ್
ಶ್ರೀನಗರ: ಮೈನಸ್ 5.8 ಡಿಗ್ರಿ ಸೆಲ್ಸೀಯಸ್
ಗುಲ್ಮಾರ್ಗ್: ಮೈನಸ್ 5.6 ಡಿಗ್ರಿ ಸೆಲ್ಸೀಯಸ್
ರಾಜಸ್ಥಾನದ ಸಿಕಾರ್: 0.5 ಡಿಗ್ರಿ ಸೆಲ್ಸೀಯಸ್
ಕರೌಲಿ: 0.7 ಡಿಗ್ರಿ ಸೆಲ್ಸೀಯಸ್
ನಗೌರ್: 1.7 ಡಿಗ್ರಿ ಸೆಲ್ಸೀಯಸ್
ಚುರು: 2.5 ಡಿಗ್ರಿ ಸೆಲ್ಸೀಯಸ್
ಹರಿಯಾಣದ ಭಠಿಂಡಾ: 3 ಡಿಗ್ರಿ ಸೆಲ್ಸೀಯಸ್
ಪಠಾಣ್’ಕೋಟ್: 6 ಡಿಗ್ರಿ ಸೆಲ್ಸೀಯಸ್
ಫರೀದ್’ಕೋಟ್: 4.6 ಡಿಗ್ರಿ ಸೆಲ್ಸೀಯಸ್


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















