No Result
View All Result
Deeksha Brahmavara | A Divine Synergy of Artistic Excellence and Intellectual Brilliance
English Articles

Deeksha Brahmavara | A Divine Synergy of Artistic Excellence and Intellectual Brilliance

by ಕಲ್ಪ ನ್ಯೂಸ್
February 10, 2026
0

Kalpa Media House  |  Special Article: Satish Shetty Cherkadi Doddamane  | The coastal soil of Karnataka is fertile with art, but...

Read moreDetails
ಬೇಸಿಗೆಯಲ್ಲಿ ಗಂಟಲು ಒಣಗುತ್ತಿದೆಯೇ? ಧ್ವನಿ ಗರಗರಿಸುತ್ತಿದೆಯೇ? ಹಾಗಾದರೆ ಹೀಗೆ ಮಾಡಿ | ತಜ್ಞರ ಸಲಹೆ

Stay Hydrated to Protect Your Voice This Summer: ENT Expert Advice

February 10, 2026
Mysore – Shivamogga Express Big Update on this Date | Must Read

Mysore – Shivamogga Express Big Update on this Date | Must Read

February 9, 2026
Union Minister V. Somanna Flagged Off New Demu Train Services Between Dandeli – Alnavar

Union Minister V. Somanna Flagged Off New Demu Train Services Between Dandeli – Alnavar

February 9, 2026
ಡಯಾಲಿಸಿಸ್ ಅಂತಿಮವಲ್ಲ | ಮೃತ ದಾನಿದಾರ ಕಿಡ್ನಿಯಿಂದ ರೋಗಿಗೆ ಹೊಸ ಬದುಕು

A Second Chance at Life Through Deceased Organ Donation

February 3, 2026
  • Advertise With Us
  • Grievances
  • About Us
  • Contact Us
Wednesday, February 11, 2026
Follow Us
kalpa.news
">
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಮೈಸೂರು

ಸನಾತನ ಯೋಗ ವಿದ್ಯೆ, ಧ್ಯಾನ ಕ್ರಿಯೆಗೆ ವಿಶ್ವ ಮಾನ್ಯತೆಯಿದೆ: ಬಾದರಾಯಣಾಚಾರ್ಯ ಅಭಿಮತ

ಭಾಗವತ ವಿಶ್ವಮಾನ್ಯ ಗ್ರಂಥ | ನಮ್ಮ ಹಿರಿಯರು ತಂತ್ರಜ್ಞಾನವೇ ಇಲ್ಲದೇ ದೇಹದ ಅನಾಟಮಿ ಅರಿತಿದ್ದರು

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
December 28, 2022
in ಮೈಸೂರು
0
ಸನಾತನ ಯೋಗ ವಿದ್ಯೆ, ಧ್ಯಾನ ಕ್ರಿಯೆಗೆ ವಿಶ್ವ ಮಾನ್ಯತೆಯಿದೆ: ಬಾದರಾಯಣಾಚಾರ್ಯ ಅಭಿಮತ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಮೈಸೂರು  |  ಸಾರ ಸಂಗ್ರಹ: ರಘುರಾಮ  |

ಶ್ರೀಮದ್ ಭಾಗವತ ಕೇವಲ ಪಂಡಿತರ ಅಧ್ಯಯನ ಗ್ರಂಥವಲ್ಲ, ಅದು ವಿಶ್ವದ ಪ್ರತಿಯೊಬ್ಬರ ಬದುಕನ್ನು ಸಮಗ್ರವಾಗಿ ಸಾರ್ಥಕ್ಯಗೊಳಿಸುವ ಮಹೋನ್ನತ ಕೃತಿಯಾಗಿದೆ ಎಂದು ಪಂಡಿತ ಬಾದರಾಯಣಾಚಾರ್ಯ ಹೇಳಿದರು.

ಅವರು ಚಾಮರಾಜ ಜೋಡಿರಸ್ತೆ ವೆಂಕಟಾಚಲಧಾಮ ಆವರಣದ `ಪೂರ್ಣಪ್ರಜ್ಞ’ದಲ್ಲಿ ಭಾಗವತ ಪ್ರವಚನ ಸಪ್ತಾಹದಲ್ಲಿ ಬುಧವಾರ ಮಾತನಾಡಿದರು.

ಭಾಗವತ ಗ್ರಂಥ ದೇಹ, ಮಹತ್ತು, ಮನಸ್ಸುಗಳ ಆರೋಗ್ಯದ ಬಗ್ಗೆ ಸಮಗ್ರವಾಗಿ ಹೇಳಿದೆ. ಜೀವಿತವಾಗಿ ಇರುವಷ್ಟು ದಿನ ಸ್ವಧರ್ಮ ಆಚರಿಸಿ. ಪರ ಧರ್ಮದ ಕಡೆಗೆ ಯಾವತ್ತೂ ನೋಡದಿರಿ. ಮಿತವಾದ, ಮೇಧ್ಯವಾದ ಆಹಾರಗಳನ್ನೇ ಸೇವಿಸಿ. ಸದಾ ಸುಖಾಸನದಲ್ಲೇ ಕೂಡಿ, ಪ್ರಾಣಾಯಾಮ ಮತ್ತು ಧ್ಯಾನಗಳನ್ನು ಅನುಷ್ಠಾನ ಮಾಡಿಕೊಳ್ಳಿ ಎಂಬುದನ್ನು ತಿಳಿಸಿದೆ ಎಂದರು.
ನಮ್ಮ ಇಂದ್ರಿಯಗಳೆಲ್ಲವೂ ಹೊರಮುಖಿಯಾಗಿವೆ. ಅವೆಲ್ಲವೂ ಸದಾ ಹೊರಗಿನ ಪ್ರಪಂಚವನ್ನೇ ನೋಡುತ್ತಾ ಬಹಿರ್ಮುಖಿ ಆಗಿರುತ್ತವೆ. ಹೇಗೆ ಒಂದು ಆಮೆ ತನ್ನ ಎಲ್ಲ ಇಂದ್ರಿಯಗಳನ್ನು ಒಳಗೆ ಎಳೆದುಕೊಂಡು ಸುರಕ್ಷಿತವಾಗಿರುವುದೋ ಹಾಗೆ ನಾವು ನಮ್ಮ ಇಂದ್ರಿಯಗಳನ್ನು ನಿಗ್ರಹ ಮಾಡಿಕೊಂಡು ಅಂತರ್ಮುಖಿಗಳಾಗಬೇಕು. ಜ್ಞಾನಿಯಾದವನು ಮಾತ್ರ ಈ ಸಾಧನೆ ಮಾಡಲು ಸಾಧ್ಯ. ಹಾಗಾಗಿ ನಾವು ಸದಾ ಅಪರೋಕ್ಷ ಜ್ಞಾನದ ಕಡೆ ಮುಖ ಮಾಡಬೇಕು ಎಂಬುದನ್ನು ಭಾಗವತ ಹೇಳಿದೆ ಎಂದರು.

ಭಾರತೀಯರು ಸಾವಿರಾರು ವರ್ಷಗಳಿಂದ ಯೋಗ ಸಾಧಕರಾಗಿಯೇ ಇದ್ದಾರೆ. ಯಾವುದೇ ಸ್ಕಾನಿಂಗ್ ಇಲ್ಲದೇ, ಎಂಆರ್‌ಐ ನಂತರ ಆಧುನಿಕ ತಂತ್ರಜ್ಞಾನದ ಪರೀಕ್ಷಾ ಯಂತ್ರಗಳಿಲ್ಲದೇ ನಮ್ಮವರು ಇಡೀ ದೇಹದ ಅನಾಟಮಿಯನ್ನು ಅರಿತಿದ್ದರು. ಹಾಗಾಗಿಯೇ ಸನಾತನ ಭಾರತೀಯ ಮೂಲದ ಯೋಗ ವಿದ್ಯೆ ಮತ್ತು ಧ್ಯಾನ ಕ್ರಿಯೆಗಳಿಗೆ ವಿಶ್ವ ಮಾನ್ಯತೆ ಇದೆ ಇದೆ ಎಂದು ಪಂಡಿತ ಬಾದರಾಯಣಾಚಾರ್ಯರು ಹೇಳಿದರು.

ಯೋಗ ಮತ್ತು ಧ್ಯಾನ ಎಂದು ನೆನಪಿಸಿಕೊಂಡರೆ ನಮ್ಮ ಯತಿವರೇಣ್ಯರು ಕಣ್ಣೆದುರು ಬರುತ್ತಾರೆ. ಪ್ರತಿ ನಿತ್ಯದ ಧ್ಯಾನದಿಂದ ಜೀವನವು ಹೇಗೆ ವಿಶೇಷ ಸಾಧನೆಗಳಿಗೆ ಸ್ಪಂದಿಸುತ್ತದೆ ಎಂಬುದನ್ನು ಶ್ರೀ ಸತ್ಯನಾಥ ತೀರ್ಥರು, ಶ್ರೀ ವಿಷ್ಣುತೀರ್ಥರು ಸಾಧಿಸಿ ತೋರಿಸಿದ್ದಾರೆ. ಗೀತೆ ಹೇಳಿದ ಯೋಗ ಮಾರ್ಗದಲ್ಲಿ ಇವರು ಮಹತ್ವದ ಹೆಜ್ಜೆಗಳನ್ನು ಇರಿಸಿ ನಮಗೆ ಮಾರ್ಗದರ್ಶಿಯಾಗಿದ್ದಾರೆ ಎಂದು ಬಾದರಾಯಣಾಚಾರ್ಯರು ಸಾಂದರ್ಭಿಕವಾಗಿ ಉಲ್ಲೇಖಿಸಿದರು.

ದೇವಹೂತಿಯ ಕತೆಯನ್ನು ವಿವರಿಸಿದ ಆಚಾರ್ಯರು, `ಮೌನ’ ದ ಅಭ್ಯಾಸ ಮಾಡಿಕೊಳ್ಳುವುದು ಆತ್ಮಸೈರ್ಯ ಹೆಚ್ಚಿಸುತ್ತದೆ ಎಂದರು. ಉಪವಾಸ, ವನವಾಸ, ಕಷ್ಟ ಸಹಿಷ್ಣುತೆಗಳನ್ನು ನಾವು ಭಾಗವತದಿಂದ ಕಲಿಯಬೇಕು ಎಂದರು.
ಖಿನ್ನತೆಗೆ ಒಳಗಾಗದಿರಿ
ಇಂದಿನ ವಿದ್ಯಾರ್ಥಿಗಳು, ಯುವಕರು ಸಣ್ಣಪುಟ್ಟ ಸಂಗತಿಗಳನ್ನು ಎದುರಿಸಲಾಗದೇ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಅದನ್ನೂ ಮೀರಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದು ಅತ್ಯಂತ ಖೇದನೀಯ ಸಂಗತಿ. ಬದುಕನ್ನು ಎದುರಿಸುವ ಸಾಮರ್ಥ್ಯ ಮಾತೆಯಿಂದ, ಮನೆಯಿಂದ ಮತ್ತು ಪುರಾಣ ಗ್ರಂಥಗಳಿಂದ ಕಲಿಯಬೇಕು. ಯಾರಿಗೆ ಈ ಸಂಸ್ಕಾರ, ಸಂಸ್ಕೃತಿ ಇಲ್ಲವೋ ಅವರು ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇಂತಹಾ ಸಂದರ್ಭದಲ್ಲಿ ಭಾಗವತ ನಮ್ಮ ಬದುಕನ್ನು ಸಮರ್ಥವಾಗಿ ಕಟ್ಟಿಕೊಡುವ ನಿಟ್ಟಿನಲ್ಲಿ ಮಹದುಪಕಾರ ಮಾಡುವ ಮಹೋನ್ನತ ಗ್ರಂಥವಾಗಿದೆ ಎಂದರು.

ಹಿರಿಯರ ತಪ್ಪುಗಳನ್ನೂ ತಿದ್ದಿ
ದಕ್ಷ ಪ್ರಜಾಪತಿ, ಉಮಾದೇವಿ ಮತ್ತು ರುದ್ರದೇವರ ಕಥಾ ಪ್ರಸಂಗ ವಿವರಿಸಿದ ಆಚಾರ್ಯರು (ದಕ್ಷಯಜ್ಞದ ಸಂದರ್ಭ) ಹಿರಿಯರು ತಪ್ಪು ಮಾಡಿದರೂ ಅದನ್ನು ಸಹನೆ ಮಾಡುವ ಗುಣ ರೂಢಿಸಿಕೊಳ್ಳಬೇಕು. ತಿತಿಕ್ಷಾ ಗುಣ ನಮ್ಮನ್ನು ಎತ್ತರಕ್ಕೆ ಬೆಳೆಸುತ್ತದೆ. ಒಂದು ಪಕ್ಷ ಹಿರಿಯರು ತಪ್ಪು ಮಾಡಿದರೂ ಅದನ್ನು ಸೂಕ್ತವಾಗಿ ತಿದ್ದಿ ಹೇಳಬೇಕು ಎಂದು ಭಾಗವತ ಸಂದೇಶ ನೀಡಿದೆ ಎಂದರು.
ಧ್ರುವನಂತಹ ಮಕ್ಕಳು ಜನಿಸಲಿ
ಉತ್ಥಾನಪಾದ ರಾಜ, ಆತನ ಪತ್ನಿಯರಾದ ಸುರುಚಿ ಮತ್ತು ಸುನೀತಿಯರ ಕಥಾನಕವನ್ನು ಸೋದಾಹರಣವಾಗಿ ವಿವರಿಸಿದ ಬಾದರಾಯಣಾಚಾರ್ಯರು, ನಾವು ಬದುಕಿನಲ್ಲಿ ನೀತಿ (ಸುನೀತಿ)ಗೆ ಬೆಲೆ ಕೊಟ್ಟರೆ `ಧ್ರುವ’ ನಂತಹಾ ಸಾಧಕ ಮಕ್ಕಳನ್ನು ಪಡೆಯಬಹುದು ಎಂದರು. ಅವರು ದೇವರನ್ನು ಕಂಡು, ದೇಶವನ್ನು ಆಳಿ, ವಿಶ್ವಖ್ಯಾತರಾಗಿ ಮುಂದೆ ಮೋಕ್ಷಕ್ಕೂ ಅರ್ಹರಾಗುತ್ತಾರೆ. ನಾವು ರುಚಿ (ಸುರುಚಿ)ಗೆ ಮಾರುಹೋದರೆ ಕೇವಲ `ಉತ್ತಮ’ ಮಕ್ಕಳು ಜನಿಸುತ್ತಾರೆ. ಆಯ್ಕೆಯನ್ನು ಭಾಗವತ ನಮಗೆ ಬಿಟ್ಟಿದೆ ಎಂದರು.

ನಂತರ ಪೃಥು ಮಹಾರಾಜನ ಕಥೆಯನ್ನು ಸೋದಾಹರಣವಾಗಿ ವಿವರಿಸಿದರು. ಕುಟುಂಬದ ಪ್ರತಿಯೊಬ್ಬ ಹಿರಿಯರು, ಯಜಮಾನರು ಪೃಥುವಿನಂತೆ ಇರಬೇಕು. ಪ್ರತಿ ಗೃಹವೂ ಧರ್ಮಾಚರಣೆಗಳ ಆಲಯವಾಗಬೇಕು. ಆಗ ರಾಮರಾಜ್ಯ ನಿರ್ಮಾಣವಾಗುತ್ತದೆ ಎಂದು ಭಾಗವತ ಹೇಳಿದೆ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Bhagavata PravachanaBhagavata PuranaDhyanaKannada News WebsiteLatest News KannadameditationmysorePandit BadarayanacharyaYogaಧ್ಯಾನಪಂಡಿತ ಬಾದರಾಯಣಾಚಾರ್ಯಪೂರ್ಣಪ್ರಜ್ಞ'ಭಾಗವತ ಪ್ರವಚನಮೈಸೂರುಯೋಗಶ್ರೀಮದ್ ಭಾಗವತ
Share203Tweet123Send
Previous Post

ಸಾರಿಗೆ ಬಸ್-ಕಾರು ಮುಖಾಮುಖಿ ಢಿಕ್ಕಿ: ಇಬ್ಬರು ಸಾವು, ನಾಲ್ವರಿಗೆ ಗಾಯ

Next Post

ಸದೃಢ ಆರೋಗ್ಯವಂತ ಯುವ ಸಮುದಾಯ ನಿರ್ಮಾಣ ನಮ್ಮೆಲ್ಲರ ಗುರಿ: ಸಂಸದ ರಾಘವೇಂದ್ರ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಪ್ರಧಾನಿ ಮೋದಿ ಜನ್ಮದಿನ: ಶಿವಮೊಗ್ಗದಲ್ಲಿ ಏನೆಲ್ಲಾ ವಿಶೇಷ ಕಾರ್ಯಕ್ರಮ ನಡೆಯಲಿದೆ ಗೊತ್ತಾ?

ಸದೃಢ ಆರೋಗ್ಯವಂತ ಯುವ ಸಮುದಾಯ ನಿರ್ಮಾಣ ನಮ್ಮೆಲ್ಲರ ಗುರಿ: ಸಂಸದ ರಾಘವೇಂದ್ರ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

January 12, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ನಮ್ಮೂರ ಬಳಗ ರಾಷ್ಟ್ರಮಟ್ಟದ ಟಗರು ಕಾಳಗ ಅಂಕಣ ಪೂಜೆ | ಪ್ರಚಾರ ವಾಹನಕ್ಕೆ ಚಾಲನೆ

ನಮ್ಮೂರ ಬಳಗ ರಾಷ್ಟ್ರಮಟ್ಟದ ಟಗರು ಕಾಳಗ ಅಂಕಣ ಪೂಜೆ | ಪ್ರಚಾರ ವಾಹನಕ್ಕೆ ಚಾಲನೆ

February 11, 2026
ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಭ್ರಷ್ಟಾಚಾರ ಆರೋಪ | ನಿಷ್ಪಕ್ಷಪಾತ ತನಿಖೆಗೆ ಜೆಡಿಎಸ್ ಆಗ್ರಹ

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಭ್ರಷ್ಟಾಚಾರ ಆರೋಪ | ನಿಷ್ಪಕ್ಷಪಾತ ತನಿಖೆಗೆ ಜೆಡಿಎಸ್ ಆಗ್ರಹ

February 11, 2026
ಮಕ್ಕಳ ಅನೈತಿಕ ಸಾಗಾಣಿಕೆ ಅತ್ಯಂತ ನೋವಿನ ಸಂಗತಿ: ನ್ಯಾ. ಸಂತೋಷ್

ಮಕ್ಕಳ ಅನೈತಿಕ ಸಾಗಾಣಿಕೆ ಅತ್ಯಂತ ನೋವಿನ ಸಂಗತಿ: ನ್ಯಾ. ಸಂತೋಷ್

February 11, 2026
ಸರಿಗಮಪ ಲಿಟ್ಲ್ ಚಾಂಪ್ಸ್ | ಕರ್ನಾಟಕದ 31 ಜಿಲ್ಲೆಗಳಲ್ಲಿ ಆಡಿಷನ್ | ಎಲ್ಲಿ? ಯಾವಾಗ?

ಸರಿಗಮಪ ಲಿಟ್ಲ್ ಚಾಂಪ್ಸ್ | ಕರ್ನಾಟಕದ 31 ಜಿಲ್ಲೆಗಳಲ್ಲಿ ಆಡಿಷನ್ | ಎಲ್ಲಿ? ಯಾವಾಗ?

February 11, 2026
ಪಿ-ಕ್ಯಾಪ್ ಪೊಲೀಸರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ: ಜಿಲ್ಲಾರಕ್ಷಣಾಧಿಕಾರಿ ನಿಖಿಲ್

ಪಿ-ಕ್ಯಾಪ್ ಪೊಲೀಸರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ: ಜಿಲ್ಲಾರಕ್ಷಣಾಧಿಕಾರಿ ನಿಖಿಲ್

February 11, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL