ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ಗ್ರಾಮ ಪಂಚಾಯತ್ ನೌಕರರ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸುವಂತೆ ವಿಧಾನ ಪರಿಷತ್ ಶಾಸಕ ಡಿ.ಎಸ್. ಅರುಣ್ MLA D S Arun ಒತ್ತಾಯಿಸಿದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಶೂನ್ಯ ವೇಳೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಅವರು, ಗ್ರಾಮಪಂಚಾಯತ್ ನೌಕರರ ಬೇಡಿಕೆಗಳ ಬಗ್ಗೆ ಸದನದಲ್ಲಿ ಬೆಳಕು ಚೆಲ್ಲುವ ಪ್ರಯತ್ನ ಮಾಡಿದರು.
ಗ್ರಾಮಪಂಚಾಯತ್ ಕಛೇರಿಗಳಲ್ಲಿ ಕಾ ರ್ಯನಿರ್ವಹಿಸುತ್ತಿರುವ ಕ್ಲರ್ಕ್/ಕ್ಲರ್ಕ್‌ಕಂ. ಡಿಇಓ, ಬಿಲ್‌ಕಲೆಕ್ಟರ್ ಹಾಗೂ ಡಾಟಎಂಟ್ರಿ ಆಪರೇಟರ್‌ಗಳನ್ನು ʼಸಿʼದರ್ಜೆಗೆ ಮೇಲ್ದರ್ಜೆಗೇರಿಸುವುದು ಹಾಗೆಯೇ ಅಟೆಂಡರ್, ಕ್ಲೀನರ್, ವಾಟರ್‌ಮ್ಯಾನ್/ಪಂಪು ಚಾಲಕ ಇತ್ಯಾದಿ ವೃಂದದವರನ್ನು ʼಡಿʼದರ್ಜೆಗೆ ಮೇಲ್ದರ್ಜೆಗೇರಿಸುವ ಮೂಲಕ ನಗರ ಮತ್ತು ಪಟ್ಟಣ ಪಂಚಾಯತ್‌ನಲ್ಲಿರುವಂತೆ ಪಂಚಾಯತ್ ನೌಕರರಿಗೂ ಕನಿಷ್ಠ ವೇತನ ಬದಲು ವೇತನ ಶ್ರೇಣಿ ನಿಗದಿಪಡಿಸುವುದು, ನೌಕರರು ಮತ್ತು ನೌಕರರ ಅವಲಂಬಿತರಿಗೆ ಸರಕಾರದಿಂದಲೇ ಸೂಕ್ತ ಆರೋಗ್ಯ ಭದ್ರತೆಯೊಂದಿಗೆ ಮುಂದಿನ ನಿವೃತ್ತಿ ಜೀವನಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸುವುದು ಸೇರಿದಂತೆ ಪ್ರಮುಖ ಬೇಡಿಕೆಗಳಿಗೆ ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಇವರುಗಳ ಬೇಡಿಕೆ ನ್ಯಾಯಯುತವಾಗಿದ್ದು ಕಳೆದ ಹತ್ತಾರು ವರ್ಷಗಳಿಗಿಂತ ಹೆಚ್ಚುಕಾಲ ಗ್ರಾಮಪಂಚಾಯತ್ ನೌಕರರರಾಗಿ ಸೇವೆಸಲ್ಲಿಸುತ್ತಿರುವ ಇವರಿಗೆ ಕನಿಷ್ಠವೇತನ ಭದ್ರತೆಯೂ ಸೇರಿದಂತೆ ಆರೋಗ್ಯ ಮತ್ತು ನಿವೃತ್ತಿ ಜೀವನದ ಆರ್ಥಿಕ ಭದ್ರತೆಯನ್ನು ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸರ್ಕಾರದಲ್ಲಿ ಮನವಿ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post