ಕಲ್ಪ ಮೀಡಿಯಾ ಹೌಸ್ | ಧಾರವಾಡ |
1994ರ ಕ್ಯಾರಕೊಪ್ಪ ಗ್ರಾಮ ಪಂಚಾಯತ ಚುನಾವಣೆ ಸಂದರ್ಭದಲ್ಲಿ ವಿವಿಧ ಕಲಂಗಳಡಿ ಅಪರಾದ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು 28ವರ್ಷಗಳ ನಂತರ ಸೆರೆ ಹಿಡಿಯುವಲ್ಲಿ ಧಾರವಾಡ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿತ ಕ್ಯಾರಕೊಪ್ಪ ಗ್ರಾಮದ ಚಂದ್ರಪ್ಪ ಎಂಬ ವ್ಯಕ್ತಿ 28 ವರ್ಷಗಳಿಂದ ತಲೆಮರೆಸಿಕೊಂಡಿದ್ದನು. ಈತನ ಪತ್ತೆಗಾಗಿ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ರವರ ನೇತೃತ್ವದಲ್ಲಿ ಒಂದು ವಿಶೇಷ ತನಿಖಾ ತಂಡವನ್ನು ರಚನೆ ಮಾಡಿ, ಪತ್ತೆ ಕಾರ್ಯ ಕೈಗೊಳ್ಳಲಾಗಿತ್ತು. ಆರೋಪಿತನು ಸದ್ಯ ಮೈಸೂರಿನಲ್ಲಿ ಇರುವ ಬಗ್ಗೆ ಮಾಹಿತಿ ಕಲೆಹಾಕಿ, ಮೈಸೂರಿಗೆ ತೆರಳಿ ಚಾಮುಂಡಿ ಬೆಟ್ಟ ರಸ್ತೆಯ ಕೆ.ಆರ್.ಮಿಲ್ ಗೆಸ್ಟ್ ಹೌಸ್ ಹತ್ತಿರ ಆರೋಪಿತ ಚಂದ್ರಪ್ಪ ಅಶ್ವತಪ್ಪ ಹುರಳಿಯನ್ನು ಹಿಡಿದು ಡಿಸೆಂಬರ್ 20 ರಂದು ಠಾಣೆಗೆ ಕರೆದುಕೊಂಡು ಬಂದು, ನ್ಯಾಯಾಲಯಕ್ಕೆ ಹಾಜರ ಪಡಿಸಲಾಗಿದೆ. ನ್ಯಾಯಾಲಯದ ಆದೇಶದಂತೆ ಸದ್ಯ ಆರೋಪಿತನು ನ್ಯಾಯಾಂಗ ಬಂದನದಲ್ಲಿದ್ದಾನೆ.
Also read: ಪರಿಸರ ಸ್ನೇಹಿ ಇವಿ ಸೈಕಲ್‌ನಲ್ಲಿ ಅಧಿವೇಶನಕ್ಕೆ ಆಗಮಿಸಿದ ಶಾಸಕ ಡಿ.ಎಸ್. ಅರುಣ್
ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ಪಿಐ ಮಂಜುನಾಥ ಕುಸುಗಲ್ ಅವರ ನೇತೃತ್ವದಲ್ಲಿ ಠಾಣೆಯ ಸಿಬ್ಬಂದಿಗಳಾದ ಕೆ.ಎಚ್. ಕಾಂಬಳೆ, ಕೃಷ್ಣಾ ವಿಭೂತಿ, ಮಾರುತಿ ಕುಂಬಾರ ಹಾಗೂ ಇತರೆ ಸಿಬ್ಬಂದಿಯವರು ಈ ಪ್ರಕರಣವನ್ನು ಬೇಧಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ತಂಡದ ಕಾರ್ಯವನ್ನು ಶ್ಲಾಘಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬಹುಮಾನವನ್ನು ಘೋಷಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post