ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಂಸದ ಬಿ.ವೈ. ರಾಘವೇಂದ್ರ ಅವರ ಅಚ್ಚುಮೆಚ್ಚಿನ ಫೋಟೋ ಗ್ರಾಫರ್ ಆಗಿದ್ದ ಪ್ರಸನ್ನ ಭಟ್ ಈಜಲು ತೆರಳಿದ್ದ ವೇಳೆ ನೀರನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಮೃತದೇಹ ಪತ್ತೆಯಾಗಿದೆ.
ಪ್ರವಾಸ ಹೊರಟಿದ್ದ ಇವರು ರಾಮನಗರ ಜಿಲ್ಲೆಯ ಕನಕಪುರ ಕೆರೆಯಲ್ಲಿ ಈಜುವ ಸಲುವಾಗಿ ಪ್ರಸನ್ನ ಹಾಗೂ ಅವರಸಹೋದರ ಕೌಶಿಕ್ ತೆರಳಿದ್ದರು. ಪ್ರಸನ್ನ ನೀರಿಗೆ ಇಳಿದಿದ್ದು, ಈಜು ಬಾರದ ಕೌಶಿಕ್ ಇಳಿದಿರಲಿಲ್ಲ. ನೀರಿಗೆ ಇಳಿದ ಪ್ರಸನ್ನ ಮುಳುಗಿ ಸಾವನ್ನಪ್ಪಿದ್ದು, ಮೃತದೇಹ ಪತ್ತೆಯಾಗಿದೆ.

ಹೊಸನಗರ ಕಾರಣಗಿರಿಯ ಗಣಪತಿ ದೇವಸ್ಥಾನದ ಹಿಂಭಾಗ ಪ್ರಸನ್ನ ರವರ ಹುಟ್ಟೂರಾಗಿದೆ. ಅಲ್ಲದೇ ಆರ್’ಎಸ್’ಎಸ್ ಕಾರ್ಯಕರ್ತರಾಗಿಯೂ ಸಹ ಸೇವೆ ಸಲ್ಲಿಸುತ್ತಿದ್ದರು. ಮರಣೋತ್ತರ ಪರೀಕ್ಷೆಯ ನಂತರ ಪ್ರಸನ್ನ ಅವರ ಮೃತದೇಹವನ್ನು ಹುಟ್ಟೂರಿಗೆ ಇಂದು ತರಲಾಗುತ್ತಿದೆ ಎಂದು ವರದಿಯಾಗಿದೆ.
ಕನಕಪುರ ಗಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.












Discussion about this post