ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮುಂಬರುವ ವಿಧಾನ ಸಭಾ ಸಾರ್ವರ್ತಿಕ ಚುನಾವಣೆ ಹಿನ್ನೆಲೆ ಶಿವಮೊಗ್ಗ-ಬಿ ಉಪ ವಿಭಾಗ ಡಿವೈಎಸ್.ಪಿ ಬಾಲರಾಜ್ ಮತ್ತು RAF ಡೆಪ್ಯುಟಿ ಕಮಾಂಡೆಂಟ್ ನಯನ ನಂದಿ ಅವರ ನೇತೃತ್ವದಲ್ಲಿ ಇಂದು Rapid Action Force (RAF) ಕಂಪನಿಗಳಿಗೆ ಜಿಲ್ಲೆಯ ಪ್ರಮುಖ ಮತ್ತು ಸೂಕ್ಷ್ಮ ಸ್ಥಳಗಳ ಪರಿಚಯ (Area Familiarization)ಕ್ಕಾಗಿ Familiarization Exercises ಪಥಸಂಚಲನ ನಡೆಸಲಾಯಿತು.
ಶಿವಮೊಗ್ಗ ನಗರದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಳಗಿನ ತುಂಗಾನಗರದಿಂದ ಪ್ರಾರಂಭಿಸಿ ಕೆ.ಕೆ. ಶೆಡ್, ಪದ್ಮಾ ಟಾಕೀಸ್, ಟಿಪ್ಪೂನಗರ ಹಾಗೂ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ವಿಜಯಾ ಗ್ಯಾರೇಜ್, ಗಜಾನನ ಗೇಟ್, ಸೀಗೇಹಟ್ಟಿ, ಕುಂಬಾರ ಬೀದಿ, ಕೆಆರ್ ಪುರಂ, ಸಿದ್ಯಯ್ಯ ಸರ್ಕಲ್, ಎಂಕೆಕೆ ರಸ್ತೆ, ಎಎ ಸರ್ಕಲ್ ಮತ್ತು ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್ ಎನ್ ಸರ್ಕಲ್, ಗಾಂಧಿ ಬಜಾರ್, ಅಶೋಕಾ ರಸ್ತೆ, ಶಿವಾಜಿ ರಸ್ತೆ, ಲಕ್ಷರ್ ಮೊಹಲ್ಲಾ, ಓಲ್ಡ್ ಬಾರ್ ಲೈನ್ ರಸ್ತೆ ಮುಖಾಂತರ ಬಂದು ಕೋಟೆ ಪೊಲೀಸ್ ಠಾಣೆಯ ಹತ್ತಿರ ಮುಕ್ತಾಯವಾಯಿತು.
ಪಥಸಂಚಲನದಲ್ಲಿ RAF ಅಸಿಸ್ಟೆಂಟ್ ಕಮಾಂಡೆಂಟ್ ನವೀನ್ ಕುಮಾರ್, ಪಿಐ ತುಂಗಾನಗರ, ಪಿಐ ದೊಡ್ಡಪೇಟೆ ಮತ್ತು ಪಿಐ ಕೋಟೆ ಹಾಗೂ ಪಿಎಸ್ಐ ಮತ್ತು ಸಿಬ್ಬಂದಿಗಳು ಹಾಗೂ Rapid Action Force (RAF)ನ ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಿದ್ದರು.














Discussion about this post