ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಎಎಪಿ ಪಕ್ಷದ ಜಿಲ್ಲಾಧ್ಯಕ್ಷರಾಗಿ ಕೆ.ಕಿರಣ್ ಆಯ್ಕೆಯಾಗಿದ್ದು, ನಗರ ಮಟ್ಟದಲ್ಲಿ ಪಕ್ಷದ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಂತಾಗಿದೆ ಎಂದು ಎಎಪಿ ಪಕ್ಷದ ಮುಖಂಡ ಮನೋಹರ ಗೌಡ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಎಪಿ ಪಕ್ಷ ದಿನದಿಂದ ದಿನಕ್ಕೆ ಸಂಘಟನೆಯಾಗುತ್ತಿದೆ. ಪ್ರಾರಂಭದ ದಿನಗಳಲ್ಲಿ ಎಲ್ಲರೂ ನಾಯಕರೇ ಆಗಿದ್ದರು. ಪಕ್ಷದ ಮುಖಂಡರು ಕೂಡ ಎಲ್ಲಾ ಸೇರಿಕೊಂಡು ಕೆಲಸ ಮಾಡಲಿ ಎಂದುಕೊಂಡು ಸುಮ್ಮನಿದ್ದರು. ಸಂಘಟನೆ ಒಂದು ಹಂತಕ್ಕೆ ಬಂದಾಗ ಈಗ ಪಕ್ಷದ ಜಿಲ್ಲಾ ಸಮಿತಿಯನ್ನು ರಾಜ್ಯಾದ್ಯಂತ ರಚಿಸಲಾಗಿದೆ. ರಾಜ್ಯ ಸಮಿತಿಯೂ ಆಗಿದೆ. ಹಾಗಾಗಿ ಇನ್ನುಮುಂದೆ ಬಣಗಳು ಇರುವುದಿಲ್ಲ ಎಂದರು.

ನೂತನ ಜಿಲ್ಲಾಧ್ಯಕ್ಷ ಕೆ. ಕಿರಣ್ ಮಾತನಾಡಿ, ಎಎಪಿ ಶಿಸ್ತು ಮತ್ತು ಪ್ರಾಮಾಣಿಕ ಪಕ್ಷವಾಗಿದೆ. ನಮ್ಮ ಪಕ್ಷದ ಮುಖ್ಯ ಗುರಿಯೇ ಪ್ರಾಮಾಣಿಕತನ. ಹಾಗಾಗಿಯೇ ಪಕ್ಷ ಪ್ರಾಮಾಣಿಕರನ್ನು ಗುರುತಿಸಿ ಟಿಕೆಟ್ ನೀಡಲಿದೆ. ಶಿವಮೊಗ್ಗ ನಗರದಲ್ಲಿ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಈ ಪೈಪೋಟಿ ಆರೋಗ್ಯಕರವಾಗಿದೆ. ಯಾರಿಗೆ ಟಿಕೆಟ್ ಕೊಡಬೇಕು ಎಂಬುದನ್ನು ಪಕ್ಷ ನಿರ್ಧರಿಸುತ್ತದೆ. ಯಾರಿಗೆ ಸಿಕ್ಕರೂಕೂಡ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರವಿಕಿಶನ್, ಶಿವಕುಮಾರ್, ನಜೀರ್ ಅಹ್ಮದ್, ಸುರೇಶ್ ಕೌಟಿಕರ್, ಹರೀಶ್ ಮತ್ತಿತರರಿದ್ದರು.











Discussion about this post