ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಣಾದ ಯೋಗ ಮತ್ತು ರಿಸರ್ಚ್ ಫೌಂಡೇಷನ್ ವತಿಯಿಂದ, ಸರ್ಜಿ ಫೌಂಡೇಷನ್, ಪರೋಪಕಾರಂ, ಯೋಗಶಿಕ್ಷಣ ಸಹಕಾರದೊಂದಿಗೆ ಜ.29ರಂದು ಬೆಳಿಗ್ಗೆ 5:30ರಿಂದ 8:30ರವರೆಗೆ ಆದಚುಂಚನಗಿರಿ ಶಾಲಾ ಆವರಣದಲ್ಲಿ ರಥಸಪ್ತಮಿ ಅಂಗವಾಗಿ 8ನೇ ಸೂರ್ಯಥಾನ್‌ನ 108 ಸೂರ್ಯ ನಮಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಯೋಗಾಚಾರ್ಯ ಅನಿಲ್‌ಕುಮಾರ್ ಹೆಚ್ ಶೆಟ್ಟರ್ ಹೇಳಿದರು.
ಅವರು ಇಂದು ಹೋಟೆಲ್ ಮಥುರಾ ಪ್ಯಾರಾಡೈಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯುವಜನರಲ್ಲಿ ಯೋಗ, ಆರೋಗ್ಯ, ದೇಹಭಕ್ತಿ, ಮತ್ತು ದೇಶಭಕ್ತಿ ಜಾಗೃತಿಗಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದೊಂದು ಸಾಮೂಹಿಕ ಸೂರ್ಯ ನಮಸ್ಕಾರವಾಗಿದ್ದು, ೧೫೦೦ಕ್ಕೂ ಹೆಚ್ಚು ಯೋಗಪಟುಗಳು ಭಾವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಕೆ.ಎಸ್. ಈಶ್ವರಪ್ಪ, ವಿಧಾನಪರಿಷತ್ ಸದಸ್ಯರಾದ ರುದ್ರೇಗೌಡರು, ಡಿ.ಎಸ್. ಅರುಣ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಸೂರ್ಯಥಾನ್ ಅಂಗವಾಗಿ ಜ.22ರಂದು ವಿವಿಧ ಯೋಗಸ್ಫರ್ದೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ವಿಜೇತರಾದವರಿಗೆ ಸೂರ್ಯನಮಸ್ಕಾರ ಕಾರ್ಯಕ್ರಮದಲ್ಲಿ ನಗದು ಬಹುಮಾನ ವಿತರಿಸಲಾಗುವುದು. ಒಟ್ಟು 6 ರೀತಿಯ ಸ್ಪರ್ಧೆಗಳು ನಡೆದಿವೆ. ಪ್ರತಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕ್ರಮವಾಗಿ 1000, 750, 500ರೂ. ನೀಡಲಾಗುತ್ತದೆ. ಹಾಗೆಯೇ ತಂಡ ಸೂರ್ಯನಮಸ್ಕಾರ ವಿಭಾಗದಲ್ಲಿ ವಿಜೇತರಾದವರಿಗೆ ಕ್ರಮವಾಗಿ 3000, 2000 ಹಾಗೂ 1000ರೂ. ನೀಡಲಾಗುತ್ತದೆ ಎಂದರು.
ಸೂರ್ಯಥಾನ್‌ನಲ್ಲಿ ಭಾಗವಹಿಸುವ ಯೋಗಪಟುಗಳಿಗೆ ಪ್ರವೇಶ ಉಚಿತವಾಗಿರುತ್ತದೆ. ಅವರು ಬಿಳಿ ಟೀಷರ್ಟ್ ಧರಿಸಿ 5 ನಿಮಿಷ ಮುಂಚಿತವಾಗಿ ಹಾಜರಿರಬೇಕು. ಭಾಗವಹಿಸುವ ಎಲ್ಲರಿಗೂ ಪ್ರಮಾಣಪತ್ರ ಹಾಗೂ ಉಪಾಹಾರ ವ್ಯವಸ್ಥೆ ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪರೋಪಕಾರಂನ ಎನ್.ಎಂ. ಶ್ರೀಧರ್, ಯೋಗ ಫೌಂಡೇಷನ್ನಿನ ಬೆಲಗೂರು ಮಂಜುನಾಥ್, ಮಂಜು ಕರ್ನಲಿ, ರವೀಂದ್ರ ಇದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















