ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತಮಹೋತ್ಸವದ ಪ್ರಯುಕ್ತ ಶಿವಮೊಗ್ಗ ಜಿಲ್ಲಾ ಸರ್ವೋದಯ ಮಂಡಲದ ಸಹಯೋಗದಲ್ಲಿ ಜ.30ರ ಸೋಮವಾರ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನಲ್ಲಿ ಸರ್ವೋದಯ ದಿನಾಚರಣೆ ರಾಜ್ಯ ಮಟ್ಟದ ಸಮಾವೇಶ ಏರ್ಪಡಿಸಲಾಗಿದೆ.
ಅಂದು ಬೆಳಗ್ಗೆ 11:00 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ ಉದ್ಘಾಟಿಸಲಿದ್ದು, ಎನ್.ಇ.ಎಸ್ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಮೇಲುಕೋಟೆಯ ಜನಪರ ಸೇವಾ ಟ್ರಸ್ಟ್‌ನ ಸುಮನಸ್ ಕೌಲಗಿ ದಿಕ್ಸೂಚಿ ಮಾತುಗಳನ್ನಾಡಲಿದ್ದಾರೆ. ಸರ್ವೋದಯ ಮಂಡಲದ ಜಿಲ್ಲಾಧ್ಯಕ್ಷರಾದ ಭಗವಂತರಾವ್ ಉಪಸ್ಥಿತರಿರುವರು.

ನಂತರ ನಡೆಯುವ ವಿವಿಧ ಗೋಷ್ಟಿಗಳಲ್ಲಿ ವಿದ್ಯಾರ್ಥಿಗಳು ತಮ್ಮ ವಿಷಯವನ್ನು ಮಂಡಿಸಲಿದ್ದಾರೆ. ‘ಸ್ವದೇಶಿ ಶಿಕ್ಷಣದ ಪರಿಕಲ್ಪನೆ ಏನು, ಏಕೆ, ಹೇಗೆ?’ ಕುರಿತು ಎಸ್.ವಿ.ಕೃಷ್ಣಮೂರ್ತಿರಾವ್ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿನಿ ಹೆಚ್.ಆರ್.ಮೇಘಶ್ರೀ ವಿಷಯ ಮಂಡಿಸಲಿದ್ದು, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನ ವಿದ್ಯಾರ್ಥಿನಿ ಸುಪ್ರದಾ ಅಧ್ಯಕ್ಷತೆ ವಹಿಸಲಿದ್ದಾರೆ.
Also read: ವ್ಯಾಸತೀರ್ಥ ವಿದ್ಯಾಪೀಠದಲ್ಲಿ ಮಧ್ವನವಮಿ ಉತ್ಸವ: ವಿವಿಧ ವಿದ್ವಾಂಸರಿಂದ ಉಪನ್ಯಾಸ
‘ಸರ್ವೋದಯ ತತ್ವದ ಅನುಷ್ಟಾನ ಹೇಗೆ? ನನ್ನಲ್ಲಿ, ಸಮುದಾಯದಲ್ಲಿ, ಆಡಳಿತದಲ್ಲಿ’ ಕುರಿತು ಎಸ್.ಆರ್.ಎನ್.ಎಂ ಕಾಲೇಜಿನ ವಿದ್ಯಾರ್ಥಿನಿ ನಿಸರ್ಗ ವಿಷಯ ಮಂಡಿಸಲಿದ್ದು, ನ್ಯಾಷನಲ್ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿನಿ ಜಯಶ್ರೀ ಹಳ್ಳೂರು ಅಧ್ಯಕ್ಷತೆ ವಹಿಸಲಿದ್ದಾರೆ. ‘ಯುವಜನರಲ್ಲಿ ಸಮಾಜಿಕ ಹೊಣೆಗಾರಿಕೆ ಏಕೆ, ಹೇಗೆ?’ ಕುರಿತು ಎ.ಟಿ.ಎನ್.ಸಿ ಕಾಲೇಜಿನ ಎಸ್.ಶಾಲಿನಿ ವಿಷಯ ಮಂಡಿಸಲಿದ್ದು, ಭೀಮಸೇನರಾವ್ ರಾಷ್ಟ್ರೀಯ ಕಾನೂನು ಕಾಲೇಜಿನ ವಿದ್ಯಾರ್ಥಿ ರಂಜನ್ ಕುಮಾರ್.ಆರ್ ಅಧ್ಯಕ್ಷತೆ ವಹಿಸಲಿದ್ದಾರೆ. ‘ಸಾಮರಸ್ಯಕ್ಕಾಗಿ ಜಾಲತಾಣಗಳ ಬಳಕೆ’ ಕುರಿತು ಜೆಎನ್ಎನ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಅನನ್ಯ ವಿಷಯ ಮಂಡಿಸಲಿದ್ದು, ಕಮಲಾ ನೆಹರು ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ದಿವ್ಯ ಅಧ್ಯಕ್ಷತೆ ವಹಿಸಲಿದ್ದಾರೆ.