ಕಲ್ಪ ಮೀಡಿಯಾ ಹೌಸ್ | ಅಂಕಾರ |
ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ ಮಾರಕ ಭೂಕಂಪನಕ್ಕೆ ನಗರಗಳು ಅಕ್ಷರಶಃ ಸ್ಮಶಾನ ಸದೃಶ್ಯವಾಗಿದ್ದು, ಸಾವಿನ ಸಂಖ್ಯೆ 8 ಸಾವಿರಕ್ಕೆ ಏರಿಕೆಯಾಗಿದೆ.
ಅವಶೇಷಗಳ ಅಡಿಯಲ್ಲಿ ಸಿಲುಕಿ ನರಳುತ್ತಿರುವವರ ಚಿತ್ಕಾರ ಕರಳು ಹಿಂಡುವಂತಿದ್ದು, ರಕ್ಷಣಾ ಕಾರ್ಯಾಚರಣೆ ನಿರಂತರವಾಗಿ ಮುಂದುವರೆದಿದೆ. ಪರಿಸ್ಥಿತಿಯನ್ನು ಅವಲೋಕಿಸಿದ ತಜ್ಞರು ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು, ಮನೆಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿರುವ ಜನರು ಕೊರೆಯುವ ಚಳಿಯಿಂದ ನರಳುತ್ತಿದ್ದು, ರಕ್ಷಣಾ ಸಿಬ್ಬಂದಿಗಳೂ ಸಹ ಇದೇ ಸಮಸ್ಯೆ ಎದುರಿಸುತ್ತಿದ್ದಾರೆ.
Also read: ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಕಾರ್ಯಕಾರಿ ಸಮಿತಿ ಮಹಿಳಾ ಪ್ರತಿನಿಧಿಯಾಗಿ ಶ್ರೀರಂಜಿನಿ ದತ್ತಾತ್ರಿ ಆಯ್ಕೆ
ಕಟ್ಟಡಗಳ ಅವಶೇಷಗಳಡಿ ಸಿಲುಕಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿ ಮೃತಪಟ್ಟಿದ್ದು, ಅದೃಷ್ಟವಶಾತ್ ನವಜಾತ ಶಿಶು ಬದುಕುಳಿದಿತ್ತು. ರಕ್ಷಣೆ ವೇಳೆ ಮಗುವಿನ ಹೊಕ್ಕುಳಬಳ್ಳಿ ತಾಯಿಯ ಕರುಳಿಗೆ ಹಾಗೆಯೇ ಕಟ್ಟಿಕೊಂಡಿತ್ತು. ತಾಯಿ ಸಾವಿಗೀಡಾಗಿದ್ದು, ಮಗುವನ್ನು ರಕ್ಷಣೆ ಮಾಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post