ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಇಡಿಯ ವಿಶ್ವವೇ ಒಂದು ಕ್ಷಣ ಬೆಚ್ಚಿ ಬೀಳುವಂತೆ ತನ್ನ ಪ್ರೇಯಸಿಯನ್ನು ಹತ್ಯೆ ಮಾಡಿ, ಆಕೆಯ ದೇಹವನ್ನು ಫ್ರಿಡ್ಜ್’ನಲ್ಲಿಟ್ಟಿದ್ದ ಅಫ್ತಾಬ್ ವಿರುದ್ಧ ಬರೋಬ್ಬರಿ 6,629 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ಅದರಲ್ಲಿ ಶಾಕಿಂಗ್ ಅಂಶಗಳು ಉಲ್ಲೇಖವಾಗಿವೆ ಎಂದು ವರದಿಯಾಗಿದೆ.
ತನ್ನ ಲಿವ್ ಇನ್ ಪಾಟ್ನರ್ ಶ್ರದ್ಧಾಳನ್ನು ಕೊಂದು ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ರಾಷ್ಟ್ರ ರಾಜಧಾನಿಯ ವಿವಿಧ ಭಾಗಗಳಲ್ಲಿ ವಿಲೇವಾರಿ ಮಾಡಿದ್ದು ಅಲ್ಲದೆ ಆಕೆಯ ದೇಹದ ಭಾಗಗಳನ್ನು ಶೇಖರಣೆ ಮಾಡಲು ಫ್ರಿಡ್ಜ್ ಖರೀದಿ ಮಾಡಿದ್ದು ಸದ್ಯ ಎಲ್ಲರಿಗೂ ತಿಳಿದಿರುವ ವಿಚಾರ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 6,629 ಪುಟಗಳ ಚಾರ್ಜ್ ಶೀಟ್ ಅನ್ನು ಈತನ ವಿರುದ್ಧ ಸಾಕೇತ್ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ. ಈ ಪ್ರಕರಣದ ಕುರಿತಾಗಿ ತನಿಖೆ ನಡೆಸುತ್ತಿರುವ ಖಾಕಿ ಪಡೆಗೆ ಇದೀಗ ಬೆಚ್ಚಿ ಬೀಳಿಸುವ ಸಂಗತಿಯೊಂದು ಬಯಲಾಗಿದೆ.
ಮೂಳೆಯನ್ನು ಮಿಕ್ಸಿ, ಗ್ರೈಂಡರ್’ನಲ್ಲಿ ಪುಡಿ ಮಾಡಿದ್ದ
ಪ್ರೇಯಸಿಯನ್ನು ಕೊಂದು ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ದ ಅಫ್ತಾಬ್ ಮೂಳೆಗಳನ್ನು ಮಿಕ್ಸಿ ಹಾಗೂ ಗ್ರೈಂಡರ್’ನಲ್ಲಿ ಸ್ವಲ್ಪ ಸ್ವಲ್ಪವಾಗಿ ಹಾಕಿ ಅದನ್ನು ಪುಡಿ ಮಾಡಿ ಆನಂತರ ವಿಲೇವರಿ ಮಾಡಿದ್ದ ಎಂಬ ಅಂಶ ಈಗ ಬೆಳಕಿಗೆ ಬಂದಿದೆ.
Also read: ಸಾಗರ ಮಾರಿಕಾಂಬಾ ಜಾತ್ರೆ: ಅದ್ಧೂರಿ ರಾಜಬೀದಿ ಉತ್ಸವಕ್ಕೆ ಹರಿದು ಬಂದ ಜನಸಾಗರ
ಶ್ರದ್ಧಾ ಹತ್ಯೆ ಬಳಿಕ ಆತ ಎಸೆದ ಕೊನೆಯ ಭಾಗ ಆಕೆಯ ತಲೆಯಾಗಿತ್ತು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಡಿಜಿಟಲ್ ಮೂಲಕ ಮಾಹಿತಿ ಟ್ರಾಕ್
ಆರೋಪಿ ಅಫ್ತಾಬ್ ನನ್ನು ನಾರ್ಕೋ ಮತ್ತು ಪಾಲಿಗ್ರಾಫಿಕ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ವೇಳೆ ಹಲವು ರೀತಿಯ ಪ್ರಶ್ನೆಗಳನ್ನು ಕೇಳಲಾಗಿದೆ. ತನಿಖೆಯಲ್ಲಿ ವೈಜ್ಞಾನಿಕ ವಿಧಾನಗಳನ್ನು ಬಳಕೆ ಮಾಡಲಾಗಿದ್ದು, ಸಾಮಾಜಿಕ ಮಾಧ್ಯಮ ಮತ್ತು ಜಿಪಿಎಸ್ ಸ್ಥಳಗಳನ್ನು ಡಿಜಿಟಲ್ ವ್ಯವಸ್ಥೆ ಮೂಲಕ ಟ್ರ್ಯಾಕ್ ಮಾಡಲಾಗಿದೆ.
ಚಿಕನ್ ರೋಲ್ ತಿಂದಿದ್ದ
ಮೇ 18 ರಂದು ಶ್ರದ್ಧಾಳನ್ನು ಬರ್ಬರವಾಗಿ ಹತ್ಯೆ ಮಾಡಿದ ಬಳಿಕ, ಆರೋಪಿಯು ಜೊಮ್ಯಾಟೊ ಚಿಕನ್ ರೋಲ್ ಆರ್ಡರ್ ಮಾಡಿ ತಿಂದಿದ್ದನೆಂದು ಹೇಳಲಾಗಿದೆ. ಮೊದಲಿಗೆ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ವಿಲೇವಾರಿ ಮಾಡಲು ಪ್ಲಾನ್ ಹಾಕಿದ್ದ. ಅದಕ್ಕಾಗಿ ಅವನು ಒಂದು ಚೀಲವನ್ನು ಸಹ ಖರೀದಿಸಿದ್ದ. ಆದರೆ ತಕ್ಷಣ ಸಿಕ್ಕಿಬೀಳುತ್ತೇನೆಂದು ಭಾವಿಸಿ ಆ ಆಲೋಚನೆಯನ್ನು ಕೈಬಿಟ್ಟಿದ್ದಾಗಿ ಚಾರ್ಜ್ ಶೀಟ್’ನಲ್ಲಿ ತಿಳಿಸಲಾಗಿದೆ.
ಶ್ರದ್ಧಾ ದೇಹವನ್ನು ತುಂಡು ತುಂಡಾಗಿ ಕತ್ತರಿಸಲು ನಿರ್ಧರಿಸಿ ಅದಕ್ಕಾಗಿ ಬೇಕಾದ ಎಲ್ಲಾ ಸಲಕರಣೆಗಳನ್ನು ಗರಗಸ, ಸುತ್ತಿಗೆ ಮತ್ತು ಮೂರು ಚಾಕುಗಳನ್ನು ಆರೋಪಿ ಖರೀದಿಸಿದ್ದ.
ಬೆರಳುಗಳನ್ನು ಬೇರ್ಪಡಿಸಲು ಬ್ಲೊ ಟಾರ್ಚ್ ಅನ್ನು ಬಳಸಿದ್ದ ಎನ್ನಲಾಗಿದೆ. ಬಳಿಕ 35 ತುಂಡುಗಳಾಗಿ ಕತ್ತರಿಸಿದ ದೇಹವನ್ನು ಫ್ರಿಡ್ಜ್ನಲ್ಲಿ ಇರಿಸಲಾಗಿತ್ತು. ಆತನ ಗೆಳತಿಯರು ಭೇಟಿ ನೀಡಿದಾಗಲೆಲ್ಲ ಫ್ರಿಡ್ಜ್’ನಿಂದ ಪೊಟ್ಟಣಗಳನ್ನು ತೆಗೆದುಕೊಂಡು ಅಡುಗೆ ಮನೆಯಲ್ಲಿ ಇಡುತ್ತಿದ್ದ ಎಂಬ ಆರೋಪವನ್ನು ಪಟ್ಟಿಯಲ್ಲಿ ತಿಳಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post