ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಹುನಿರೀಕ್ಷಿತ ಶಿವಮೊಗ್ಗ ವಿಮಾನ ನಿಲ್ದಾಣ ಫೆ.27ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದು, ಸ್ವತಃ ಅವರ ವಿಮಾನವೇ ಮೊಟ್ಟ ಮೊದಲು ಲ್ಯಾಂಡ್ ಆಗುವ ಮೂಲಕ ಇತಿಹಾಸ ಬರೆಯಲಿದೆ.
ಈ ಕುರಿತಂತೆ ಮಾತನಾಡಿರುವ ಸಂಸದ ಬಿ.ವೈ. ರಾಘವೇಂದ್ರ, ಫೆ.27ಕ್ಕೆ ಪ್ರಧಾನಿಯವರು ಆಗಮಿಸುವುದು ನಿಶ್ಚಯವಾಗಿದ್ದು, ಇಲ್ಲಿ ಲ್ಯಾಂಡ್ ಆಗುವ ಮೊದಲ ವಿಮಾನ ಅವರದ್ದೇ ಆಗಿದೆ. ಪ್ರಧಾನಿಯವರ ತಮ್ಮ ವಿಶೇಷ ವಿಮಾನದ ಮೂಲಕ ನೂತನ ವಿಮಾನ ನಿಲ್ದಾಣದಲ್ಲೇ ಲ್ಯಾಂಡ್ ಆಗಲಿದ್ದಾರೆ ಎಂದರು.
ವಿಮಾನ ನಿಲ್ದಾಣದ ಆವರಣದಲ್ಲಿಯೇ ಎಲ್ಲ ಕಾರ್ಯಕ್ರಮಗಳನ್ನು ನಡೆಸಲು ಚಿಂತಿಸಲಾಗಿದ್ದು, ಈ ಕುರಿತಂತೆ ಚರ್ಚೆ ನಡೆಯುತ್ತಿದ್ದು, ಕಾರ್ಯಕ್ರಮಗಳು ಇನ್ನೂ ನಿಗದಿಯಾಗಬೇಕಿದೆ ಎಂದರು.
ಫೆ.27ರಂದು ಬಹುತೇಕ ಮಧ್ಯಾಹ್ನ 12.30ರ ವೇಳೆಗೆ ಪ್ರಧಾನಿಯವರ ವಿಮಾನ ಲ್ಯಾಂಡ್ ಆಗುವ ನಿರೀಕ್ಷೆಯಿದ್ದು, ಸಂಜೆ 4.30ರ ಒಳಗಾಗಿ ಎಲ್ಲ ಕಾರ್ಯಕ್ರಮಗಳನ್ನು ಮುಕ್ತಾಯಗೊಳಿಸುವ ಕುರಿತಾಗಿ ಯೋಚನೆಯಿದೆ. ಎಲ್ಲ ಉದ್ಘಾಟನೆ ಹಾಗೂ ಶಂಕು ಸ್ಥಾಪನಾ ಕಾರ್ಯಕ್ರಮಗಳು ಒಂದೇ ಕಡೆಯಲ್ಲಿ ನಡೆಯಲಿವೆ ಎಂದರು.
ವಿಮಾನ ಹಾರಾಟ ಎಂದಿನಿಂದ?
ಇನ್ನು, ಫೆ.27ಕ್ಕೆ ವಿಮಾನ ನಿಲ್ದಾಣ ಉದ್ಘಾಟನೆಯಾದ 20-30 ದಿನಗಳ ಒಳಗಾಗಿ ದೈನಂದಿನ ಹಾರಾಟ ಆರಂಭವಾಗುವ ಸಾಧ್ಯತೆಯಿದೆ ಎಂದು ಸಂಸದರು ತಿಳಿಸಿದ್ದಾರೆ.
ವಿಮಾನ ಕಂಪೆನಿಗಳ ಜೊತೆಯಲ್ಲಿ ಈಗಾಗಲೇ ಮಾತುಕತೆಗಳು ಅಂತಿಮ ಹಂತದಲ್ಲಿದ್ದು, ಗರಿಷ್ಠ ಒಂದು ತಿಂಗಳ ಒಳಗಾಗಿ ಹಾರಾಟ ಆರಂಭಿಸಿ, ಸಾರ್ವಜನಿಕರ ಸೇವೆಗೆ ಮುಕ್ತವಾಗಲಿದೆ. ಬಹುತೇಕ ಪ್ರಧಾನಿಯವರೇ ವಿಮಾನ ಹಾರಾಟದ ದಿನಾಂಕವನ್ನು ಅಂದು ಘೋಷಣೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post