ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಗರದ ಶ್ರೀ ದೇವಗಿರಿ ಲಕ್ಷ್ಮೀಕಾಂತ ಸಂಘದ ವತಿಯಿಂದ ಫೆ.20ರ ಸೋಮವಾರ ಜಯನಗರ 8ನೇ ಬ್ಲಾಕ್‌ನ ಬೆಳಗೋಡು ಕಲಾ ಮಂಟಪದಲ್ಲಿ ಪುರಂದರದಾಸರ ಸಂಸ್ಮರಣೋತ್ಸವ ಹಮ್ಮಿಕೊಳ್ಳಲಾಗಿದೆ.
ತಿರುಮಲ ತಿರುಪತಿ ದೇವಸ್ಥಾನದ ದಾಸಸಾಹಿತ್ಯ ಪ್ರಾಜೆಕ್ಟ್ ಹಾಗೂ ಮಂತ್ರಾಲಯ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಸಹಯೋಗದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಶ್ರೀ ಸುವಿದ್ಯೇಂದ್ರ ತೀರ್ಥ ಶ್ರೀಪಾದರು ಚಾಲನೆ ನೀಡುವರು.
ನಂತರ ಕೆ.ಅಪ್ಪಣ್ಣಾಚಾರ್ಯರಿಂದ ಅನುಗ್ರಹ ವಚನ ನಡೆಯಲಿದ್ದು, ಡಾ. ಅರಳುಮಲ್ಲಿಗೆ ಪಾರ್ಥಸಾರಥಿ, ಡಾ. ಅನಂತಪದ್ಮನಾಭ ರಾವ್, ಡಾ ಸುಭಾಷ್ ಕಾಖಂಡಕಿ, ವೆಂಕಟೇಶ ಮೂರ್ತಿ, ಡಾ.ಎನ್. ವಾದಿರಾಜಾಚಾರ್, ಕರ್ನೂಲ್ ಶ್ರೀನಿವಾಸಾಚಾರ್, ಡಾ. ವಾದಿರಾಜ ಅಗ್ನಿಹೋತ್ರಿ, ಕಲ್ಲಾಪುರ ಪವಮಾನಚಾರ್‍ಯರು. ಡಾ.ಹ.ರಾ. ನಾಗರಾಜಾಚಾರ್‍ಯರು, ಡಾ. ಪರಶುರಾಮ ಬೆಟಗೇರಿ, ಡಾ. ವಾದಿರಾಜ ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ ವಿದ್ವಾನ್ ಬ್ರಹ್ಮಣ್ಯಾಚಾರ್‍ಯ ಮತ್ತು ಪ್ರಸಿದ್ಧ ಗಾಯಕ ಪುತ್ತೂರು ನರಸಿಂಹ ನಾಯಕ ರವರಿಗೆ ಸನ್ಮಾನ ನಡೆಯಲಿದ್ದು, ದೇವಗಿರಿ ಲಕ್ಷ್ಮೀಕಾಂತ ಸಂಘದ ಅಧ್ಯಕ್ಷ ಜಿ.ವಿ ಶಾಂತಾಬಾಯಿ ರವರ ಶ್ರೀ ಜಗನ್ನಾಥದಾಸರಿಂದ ವಿರಚಿತವಾದ ಶ್ರೀಹರಿಕಥಾಮೃತಸಾರ ತಾತ್ಪರ್ಯಾರ್ಥ ಸಿ.ಪಿ. ವೇದವತಿ ರವರ ಕಥಾಮೃತಧಾರೆ ಪುಸ್ತಕ ಬಿಡುಗಡೆಗೊಳ್ಳಲಿದೆ.
ಡಾ. ರಾಜಲಕ್ಷ್ಮಿ ಪಾರ್ಥಸಾರಥಿ , ಡಾ.ವಾರುಣಿ ಜಯತೀರ್ಥ ಮುಂತಾದ ಮಹಿಳಾ ಹರಿದಾಸಿಣಿಯರಿಗೆ ಸನ್ಮಾನ , ವಿಶೇಷ ಆಹ್ವಾನಿತರಾಗಿ ಚಾಮರಾಜ ಪೇಟೆ ಮಧ್ವ ಸಂಘದ ಅಧ್ಯಕ್ಷ ನಾಗೇಶ್ , ಡಾ. ಗುರುರಾಜ ಪೋಶೆಟ್ಟಿಹಳ್ಳಿ ಭಾಗವಹಿಸುವರು. ಸಂಜೆ ದೇವಗಿರಿ ಲಕ್ಷ್ಮೀ ಕಾಂತ ಸಂಘದವರು ನಡೆಸಿದ ಸಾಹಿತ್ಯಕ- ಸಾಂಸ್ಕೃತಿಕ ಆಟಗಳ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು.
ಲಕ್ಷ್ಮಿನರಸಿಂಹ ಭಜನಾ ಮಂಡಲಿ ಮೈಸೂರು ರವರಿಂದ ಹನುಮ-ಭೀಮ-ಮಧ್ವ ನಾಟಕ ಆಯೋಜಿಸಲಾಗಿದೆ. ವಿವರಗಳಿಗೆ : 9741840330

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















