ಕಲ್ಪ ಮೀಡಿಯಾ ಹೌಸ್ | ಕೊಚ್ಚಿ |
ಬ್ಯೂಟಿ ಪಾರ್ಲರ್ ಹೆಸರಿನಲ್ಲಿ ಸಿಂಥೆಟಿಕ್ ಡ್ರಗ್ ಮತ್ತು ಸ್ಟ್ಯಾಂಪ್ ಮಾರಾಟ ಮಾಡುತ್ತಿದ್ದ ಹಿನ್ನೆಲೆ ಅಬಕಾರಿ ಇಲಾಖೆಯ ಅಧಿಕಾರಿಗಳು ಮಹಿಳೆಯನ್ನು ಬಂಧನ ಮಾಡಿರುವ ಘಟನೆ ಕೇರಳದಲ್ಲಿ ನಡೆದಿದೆ.
ತ್ರಿಸ್ಸೂರ್ ಜಿಲ್ಲೆಯ ನಾಯರಂಗಡಿ ನಿವಾಸಿ ಶೀಲಾ ಸನ್ನಿ (51) ಬಂಧಿತ ಮಹಿಳೆ ಎಂದು ಗುರುತಿಸಲಾಗಿದ್ದು, ಚಲಕುಡಿಯಲ್ಲಿ ಬ್ಯೂಟಿ ಪಾರ್ಲರ್ ಇಟ್ಟುಕೊಂಡು ಅಲ್ಲಿಯೇ ಡ್ರಗ್ಸ್ ಮತ್ತು ಸ್ಟ್ಯಾಂಪ್ ಮಾರಾಟದಂತಹ ಅಕ್ರಮ ವ್ಯವಹಾರ ನಡೆಸುತ್ತಿದ್ದಳು. ಇರಿಂಜಲಕುಡ ವೃತ್ತದ ಕಚೇರಿಯಲ್ಲಿ ದೊರೆತ ರಹಸ್ಯ ಮಾಹಿತಿ ಮೇರೆಗೆ ಅಬಕಾರಿ ನಿರೀಕ್ಷಕ ಕೆ.ಸತೀಶನ್ ನೇತೃತ್ವದ ತಂಡ ಪಾರ್ಲರ್ ಮೇಲೆ ಧಾಳಿ ನಡೆಸಿ ಆಕೆಯನ್ನು ಬಂಧಿಸಿದೆ.

ತನಿಖಾ ತಂಡದಲ್ಲಿ ಪ್ರಿವೆಂಟಿವ್ ಆಫೀಸರ್ ಜಯದೇವನ್, ಶಿಜು ವರ್ಗೀಸ್, ಮಹಿಳಾ ಸಿವಿಲ್ ಅಬಕಾರಿ ಅಧಿಕಾರಿಗಳಾದ ಪಿ ಎಸ್ ರಜಿತಾ, ಸಿ ಎನ್ ಸಿಜಿ ಮತ್ತು ಡ್ರೈವರ್ ಶಾನ್ ಇದ್ದರು.












Discussion about this post