ಕಲ್ಪ ಮೀಡಿಯಾ ಹೌಸ್ | ಹೊಸನಗರ |
ಒಂದು ವರ್ಷದ ಮಗು ನೀರು ತುಂಬಿದ ಬಕೆಟ್‌ಗೆ ಬಿದ್ದು ಮೃತಪಟ್ಟಿರುವ ಘಟನೆ ತಾಲೂಕಿನ ಸೊನಲೆ ಗ್ರಾಪಂ ವ್ಯಾಪ್ತಿಯ ಹೊಸಕೊಪ್ಪದಲ್ಲಿ ನಡೆದಿದೆ.
ಕೂಲಿ ಕೆಲಸಗಾರರಾದ ಹರೀಶ್ ಹಾಗೂ ವೀಣಾ ದಂಪತಿಗಳ ಒಂದು ವರ್ಷದ ಮಗು ಸಂಕೇತ್ ಮೃತಪಟ್ಟಿದ್ದು,, ಪೋಷಕರು ಬಕೆಟ್‌ನಲ್ಲಿ ನೀರು ಹಾಕಿ ಆಗಾಗ ಮಗುವಿಗೆ ಆಟವಾಡಿಸುವ ಅಭ್ಯಾಸ ಹೊಂದಿದ್ದರು ಎನ್ನಲಾಗಿದೆ.
ತೋಟದ ಕೆಲಸಕ್ಕೆ ಪೋಷಕರು ಹೋದಾಗ ದನಗಳಿಗೆ ಕುಡಿಯಲು ಇಟ್ಟಿದ್ದ ಅರ್ಧ ಬಕೆಟ್ ನೀರಿನಲ್ಲಿ ಮಗು ತಲೆಕೆಳಗಾಗಿ ಬಿದ್ದು ಉಸಿರುಗಟ್ಟಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದ್ದು, ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post