ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ: ಮಹಾನಗರ ಪಾಲಿಕೆ ಬಿ.ಜೆ.ಪಿ. ಆಡಳಿತದಿಂದ ಗೋ-ಸಂರಕ್ಷಣಾ ವಿರೋಧಿ ದೋರಣೆ ಖಂಡಿಸಿ ಪಾಲಿಕೆ ಎದುರು ಪಾಲಿಕೆ ಕಾಂಗ್ರೆಸ್ ಸದಸ್ಯರು ಮತ್ತು ಮುಖಂಡರು ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ನೇತೃತ್ವದಲ್ಲಿ ಇಂದು ಗೋಪೂಜೆ ಸಲ್ಲಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ 2019ರಲ್ಲಿ ಗೋ- ಸಂರಕ್ಷಣೆ ಮಾಡುವುದಾಗಿ ಭರವಸೆ ನೀಡಿ ಆಡಳಿತಕ್ಕೆ ಬಂದ ಬಿ.ಜೆ.ಪಿ. ನೇತೃತ್ವದ ಪಾಲಿಕೆ ಆಡಳಿತ 2019ರಿಂದ 2023ರವರೆಗೆ ಮಂಡಿಸಿದ 5 ವರ್ಷಗಳ ಆಯವ್ಯಯದಲ್ಲಿ ( ಬಜೆಟ್ ) 50 ಲಕ್ಷ ರೂಗಳನ್ನು ಗೋ- ಸಂರಕ್ಷಣ ಯೋಜನೆಗೆ ಅನುದಾನ ಘೋಷಿಸಿದ್ದು, ಆದರೆ ಈ ಯೋಜನೆ ಅಡಿಯಲ್ಲಿ ಮೇಲ್ಕಂಡ ಯೋಜನೆಗೆ ನಯಾಪೈಸೆಯನ್ನು ವಿನಿಯೋಗಿಸದೆ, ಗೋ- ಮಾತೆಗೆ ಅವಮಾನ ಮಾಡಿರುತ್ತಾರೆ ಎಂದು ಪ್ರತಿಭಟನಕಾರರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೇಖಾ ರಂಗನಾಥ್, ಬಿಜೆಪಿಯ ನಾಯಕರು ಚುನಾವಣೆ ಸಂದರ್ಭದಲ್ಲಿ ನಾವು ಗೋ ರಕ್ಷಕರು ಗೋಸಂರಕ್ಷಣೆ ಮಾಡುವುದಕ್ಕಾಗಿ ನಾವು ಅಧಿಕಾರಕ್ಕೆ ಬರುವುದೆಂದು ಸುಳ್ಳು ಹೇಳಿ, ಅಧಿಕಾರಕ್ಕೆ ಬಂದ ನಂತರ 2019 ರಿಂದ 2023ನೇ ಬಜೆಟ್ ವರೆಗೂ ಗೋ ಸಂರಕ್ಷಣೆಗೆ 50 ಲಕ್ಷ ಎಂಬ ಮುದ್ರಣ ಮಾತ್ರ ತೋರಿಸುತ್ತಿದ್ದು, ಗೋವುಗಳಿಗೆ ಸಂಬಂಧಿಸಿದಂತೆ ಯಾವುದೇ ಕಾರ್ಯಕ್ರಮಗಳನ್ನು ರೂಪಿಸದೆ ಸುಳ್ಳು ಹೇಳಿ ಕಾಲ ಕಳೆಯುತ್ತಿದ್ದಾರೆ. ಕೂಡಲೇ ಬಜೆಟ್ ನಲ್ಲಿ ತೆಗೆದಿಟ್ಟಂತ 50 ಲಕ್ಷ ಹಣವನ್ನು ಗೋ ಸಂರಕ್ಷಣೆ ಕಾರ್ಯಕ್ರಮಕ್ಕೆ ಬಿಡುಗಡೆ ಮಾಡದಿದ್ದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಮಹಾನಗರದ ಜನತೆಯಿಂದ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು
ಈ ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯರಾದ ಹೆಚ್.ಸಿ.ಯೋಗೇಶ್, ಬಿ.ಎ.ರಮೇಶ್ ಹೆಗ್ಡೆ, ಆರ್.ಸಿ.ನಾಯ್ಕ್, ಮೆಹೆಕ್ ?ರೀಫ್, ಹಾಗೂ ಮುಖಂಡರಾದ ಕೆ.ರಂಗನಾಥ್, ಎಂ.ಪ್ರವೀಣ್ ಕುಮಾರ್ , ಹೆಚ್.ಪಿ.ಗಿರೀಶ್, ಎಸ್.ಕುಮರೇಶ್, ಮಾಲ್ತೇಶ್ ,ಇರ್ಫಾನ್ ಹಾಗೂ ಇತರರು ಉಸ್ಥಿತರಿದ್ದರು
Also read: ಲೋಕಾಯುಕ್ತರ ಬಲೆಯಲ್ಲಿ ಶಾಸಕರ ಪುತ್ರ, ಗೃಹ ಸಚಿವರ ಪ್ರತಿಕ್ರಿಯೆ ಏನು ಗೊತ್ತಾ?


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















