ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮನುಷ್ಯ ಹುಟ್ಟಿದ ಮೇಲೆ ಸಾವು ಸಾಮಾನ್ಯ. ಆದರೆ ಈ ಸಾವು ಯಾವಾಗ, ಹೇಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಮನುಷ್ಯ ತಾನು ಸತ್ತ ಮೇಲೂ ಬದುಕಲು ಹಲವು ಮಾರ್ಗಗಳಿವೆ. ಅದರಲ್ಲಿ ಈ ನೇತ್ರದಾನವೂ ಒಂದು. ಕಣ್ಣು ಸೇರಿದಂತೆ ಅಂಗ ಹಾಗೂ ಅಂಗಾಂಗ ದಾನದ ಮಹತ್ವವನ್ನು ಅರಿತಾಗ ಮಾತ್ರ ಮನುಷ್ಯ ತನ್ನ ಸಾವನ್ನೂ ಸಾರ್ಥಕಗೊಳಿಸಿಕೊಳ್ಳಬಹುದು ಎಂದು ಡಾ. ಧನಂಜಯ ಸರ್ಜಿ ಹೇಳಿದರು.
ಸ್ವಚ್ಛ ಸುಂದರ ಸ್ವಸ್ಥ್ಯ ಶಿಕಾರಿಪುರಕ್ಕಾಗಿ, ಪರಸ್ಪರ ಸಹಕಾರಕ್ಕಾಗಿ ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಪರೋಪಕಾರಂ ತಂಡದ ವತಿಯಿಂದ ಶಿಕಾರಿಪುರದ ಮೈತ್ರಿ ಶಾಲೆಯಲ್ಲಿ 200ನೇ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ನೇತ್ರದಾನ ನೋಂದಣಿ ಅಭಿಯಾನ ಹಾಗೂ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಎಲೆ ಮರೆಯ ಕಾಯಿಯಂತೆ ದುಡಿಯುತ್ತಿರುವವರಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮರಣಾನಂತರ ಅಂಗ ದಾನದಿಂದ ಮುಂದಿನ ಜನ್ಮದಲ್ಲಿ ಅಂಗವಿಕಲತೆ ಉಂಟಾಗುತ್ತದೆ, ಆತ್ಮಕ್ಕೆ ಶಾಂತಿ ದೊರೆಯುವುದಿಲ್ಲ ಎಂಬ ಭಾವನೆ ಇದೆ. ಅಲ್ಲದೆ ಜನಮಾನಸದಲ್ಲಿ ವಿವಿಧ ಮೂಢನಂಬಿಕೆಗಳೂ ಬಲವಾಗಿ ಬೇರೂರಿವೆ. ಇದರಿಂದಾಗಿ ಬಹುತೇಕರು ಅಂಗ ದಾನಕ್ಕೆ ಹಿಂದೇಟು ಹಾಕುತ್ತಾರೆ. ಆದ್ದರಿಂದ ಅಂಗಾಂಗ ದಾನಕ್ಕೆ ವಯಸ್ಸು, ಲಿಂಗ, ಜನಾಂಗ ಅಥವಾ ಧರ್ಮದ ಅಪ್ರಸ್ತುತತೆ ಬಗ್ಗೆ ಜನರ ಭಾವನೆಯನ್ನು ಬದಲಾಯಿಸಿ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.

ನಿಕಟಪೂರ್ವ ತಹಸೀಲ್ದಾರ್ ಕವಿರಾಜ್, ಇನ್ಸ್‌ಪೆಕ್ಟರ್ ಬಸವರಾಜ್, ಶಿಕಾರಿಪುರ ಪರೋಪಕಾರಂ ತಂಡದ ಕೆ.ಹೆಚ್. ಲಕ್ಷ್ಮಣ್, ಮಧುಕೇಶ್ವರ, ಲಯನ್ಸ್ ಪ್ರಶಾಂತ್, ಮಹೇಶ್ವರ ಸ್ವಾಮಿ, ಆನಂದ ಕೃ? ಮತ್ತಿತರರು ಉಪಸ್ಥಿತರಿದ್ದರು.

ನೇತ್ರದಾನ ನೋಂದಣಿ ಅಭಿಯಾನದಲ್ಲಿ 198 ಮಂದಿ ನೇತ್ರ ದಾನಕ್ಕೆ ಹೆಸರು ನೋಂದಾಯಿಸಿದರು. ಕಾಶಿಬಾಯಿ ಸ್ವಾಗತಿಸಿ, ದೈಹಿಕ ಶಿಕ್ಷಕ ಮಂಜುನಾಥ್ ಸ್ವಾಗತಿಸಿ, ಡಿ.ಡಿ.ಶಿವಕುಮಾರ್ ವಂದಿಸಿದರು.









Discussion about this post