ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕರ್ನಾಟಕ ಜೀವವೈವಿಧ್ಯ ಮಂಡಳಿಯ ವಿಶೇಷ ಸಭೆಯಲ್ಲಿ ಜೀವವೈವಿಧ್ಯ ಮಾದರಿ ಯೋಜನೆಗಳ ಯಶೋಗಾಥೆ ಬಿಂಬಿಸುವ ವಿಶೇಷ ವರದಿ, ಪತ್ರಿಕೆಯನ್ನು ಮಂಡಳಿಯ ಅಧ್ಯಕ್ಷ ನಾಪಂಡ ರವಿಕಾಳಪ್ಪ ಬಿಡುಗಡೆ ಮಾಡಿದರು.
ಶಿವಮೊಗ್ಗ ಮತ್ತು ಉತ್ತರಕನ್ನಡ ಜಿಲ್ಲಿಗಳಲ್ಲಿ ಜಾರಿಯಾದ ಮಾದರಿ ಯೋಜನೆ ರಾಜ್ಯದ ಎಲ್ಲಾ ತಾಲೂಕುಗಳಗೂ ವಿಸ್ತಾರವಾಗಲಿ ಎಂದರು.
ಜೀವವೈವಿಧ್ಯ ಮಂಡಳಿ ಸದಸ್ಯ ಕೆ. ವೆಂಕಟೇಶ್ ರವರು ಸಾಗರ ಹಾಗೂ ಸೊರಬ ತಾಲ್ಲುಕು ಪಂಚಾಯಿತಿ ಜೀವವೈವಿಧ್ಯ ಸಮಿತಿ ಮೂಲಕ ವಿನಾಶದ ಅಂಚಿನ ದೇವರಕಾಡು, ಕಾನು, ಸೀತಾ ಅಶೋಕ ವನ, ಮಿರಿಸ್ಟಿಕಾ, ಪುರಾತನ ಕೆರೆಗಳ ಉಳವಿಗೆ ವಿಶೇಷ ಅಭಿಯಾನ ನಡೆಸಿದ್ದೇವೆ. ಮಂಡಳಿಯ ನಿಕಟ ಪೂರ್ವ ಅಧ್ಯಕ್ಷರಾದ ಅನಂತ ಹೆಗಡೆ ಅಶೀಸರ ಅವರ ಸಂಪೂರ್ಣ ಮಾರ್ಗದರ್ಶನದಿಂದ ಪಂಚಾಯಿತಿ ಜೀವವೈವಿಧ್ಯ ಸಮಿತಿಗಳು ಸಕ್ರಿಯವಾಗಿವೆ. ಕಾಯಿದೆ ಅನುಷ್ಠಾನ ಮಾಡಿದ್ದೇವೆ ಎಂದರು.
ಮಂಡಳಿಯ ಸದಸ್ಯ ಕಾರ್ಯದರ್ಶಿ ಅನಿತ ಅರೇಕಲ್, ಆಯುಷ್ ಕಮಿಷರ್ನ ಜೆ. ಮಂಜುನಾಥ್, ಸದಸ್ಯರಾದ ಡಾ.ಪ್ರಕಾಶ್ ಮೇಸ್ತ, ಡಾ. ಕುಶಾಲಪ್ಪ, ಕೆ.ಎ. ಪವಿತ್ರ, ಉಪ ನಿರ್ದೇಶಕರು ಹಾಗೂ ಎಂ.ಜೆ. ಗೋವರ್ಧನ್ ಸಿಂಗ್ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮುಂತಾದವರು ಪಾಲ್ಗೊಂಡಿದ್ದರು.
ಸೊರಬ, ಸಾಗರ ತಾಲೂಕಿನ ಗ್ರಾಮಗಳ ನೈಸರ್ಗಿಕ ಸಂರಕ್ಷಣೆಗೆ ಗ್ರಾಮಪಂಚಾಯಿತಿಗಳು ವಿಶೇಷ ಗಮನ ನೀಡಿದ್ದನ್ನು ವರದಿ ಎತ್ತಿ ಹೇಳಿದೆ.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post