ಕಲ್ಪ ಮೀಡಿಯಾ ಹೌಸ್ | ಲಕ್ನೋ |
10 ವರ್ಷದ ಬಾಲಕನನ್ನು ಕುಟುಂಬದವರೇ ನರಬಲಿ ನೀಡಿದ ಆರೋಪದ ಮೇಲೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಪಾರ್ಸಾ ಗ್ರಾಮದ ಕೃಷ್ಣ ವರ್ಮಾ ಅವರ ಪುತ್ರ ವಿವೇಕ್ ಗುರುವಾರ ರಾತ್ರಿ ನಾಪತ್ತೆಯಾಗಿದ್ದ. ಬಳಿಕ ಬಾಲಕನಿಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಆದರೆ ಅದೇ ದಿನ ರಾತ್ರಿ ಬಾಲಕ ಶವವಾಗಿ ಸಿಕ್ಕಿದ್ದ. ಬಾಲಕನ ಕತ್ತು ಸೀಳಿದ ಶವ ಗದ್ದೆಯಲ್ಲಿ ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ತನಿಖೆ ವೇಳೆ ಬಾಲಕನ ಕುಟುಂಬದವರೇ ಆದ ಅನೂಪ್ ಮೇಲೆ ಸಂಶಯ ವ್ಯಕ್ತಪಡಿಸಿದ್ದಾರೆ. ಅನೂಪ್‌ಗೆ 2 ವರ್ಷದ ಮಗುವಿದ್ದು, ಆತ ಮಾನಸಿಕ ಅಸ್ವಸ್ಥನಾಗಿದ್ದ. ಆತನಿಗೆ ಯಾವುದೇ ಚಿಕಿತ್ಸೆ ಸಕಾರಾತ್ಮಕ ಫಲಿತಾಂಶ ನೀಡದಿದ್ದಾಗ ಅನೂಪ್ ವಾಮಾಚಾರದ ಮೊರೆ ಹೋಗಿದ್ದಾನೆ ಎಂದು ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ.
Also read: ಸಾವರ್ಕರ್ ಅವರನ್ನು ಅವಮಾನಿಸಿದರೆ ಸಹಿಸುವುದಿಲ್ಲ: ಉದ್ಧವ್ ಠಾಕ್ರೆ ಎಚ್ಚರಿಕೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post