ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯ ಪ್ರವಾಸದಲ್ಲಿದ್ದ ಕೇಂದ್ರ ಸಚಿವ ಅಮಿತ್ ಶಾ Union Minister Amith Shah ಭದ್ರತೆಯಲ್ಲಿ ವೈಫಲ್ಯ ಉಂಟಾಗಿದ್ದು, ಅಮಿತ್ ಶಾ ಹೆಚ್‌ಎಎಲ್‌ಗೆ ತೆರಳುತ್ತಿದ್ದಾಗ ಅವರ ಭದ್ರತಾ ವಾಹನಗಳನ್ನು 2 ಬೈಕರ್ಸ್‌ಗಳು ಬೆನ್ನಟ್ಟಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
ಭಾನುವಾರ ತಡರಾತ್ರಿ 11 ಗಂಟೆ ಸುಮಾರಿಗೆ ಬಿಜೆಪಿ ಕೋರ್ ಸಮಿತಿಯ ಸಭೆ ನಡೆಸಿ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಿಂದ ಹೆಚ್‌ಎಎಲ್‌ಗೆ ಅಮಿತ್ ಶಾ ತೆರಳುತ್ತಿದ್ದಾಗ ಇಬ್ಬರು ಬೈಕರ್ಸ್‌ಗಳು ಏಕಾಏಕಿ ಭದ್ರತಾ ವಾಹನಗಳ ಹಿಂದಿನಿಂದ ಬಂದಿದ್ದು, ಶಫಿನ್ ಫ್ಲಾಜಾದಿಂದ ಮಣಿಪಾಲ್ ಸೆಂಟರ್ ವರೆಗೆ ಅವರ ಭದ್ರತಾ ವಾಹನಗಳ ಹಿಂದೆ 2 ಬೈಕ್‌ಗಳು ಬಂದಿವೆ. ಸುಮಾರು 300 ಮೀ. ವರೆಗೆ ಬೈಕರ್ಸ್‌ಗಳು ಭದ್ರತಾ ವಾಹನಗಳ ಜೊತೆಯೇ ಬಂದಿದ್ದಾರೆ.
ತಕ್ಷಣವೇ ಭಾರತೀನಗರದ ಪೊಲೀಸರು ಬೈಕ್‌ನಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅವರಿಬ್ಬರೂ ವಿದ್ಯಾರ್ಥಿಗಳು ಎಂದು ತನಿಖೆ ವೇಳೆ ತಿಳಿದುಬಂದಿದ್ದು, ಉದ್ದೇಶಪೂರ್ವಕವಾಗಿ ಬಂದಿಲ್ಲ ಎಂದು ತಿಳಿಸಿದ್ದಾರೆ. ಭಾರತೀನಗರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಿಸಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post