ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ದೇಶದಲ್ಲಿ ಡೆಬಿಟ್ #Credit ಹಾಗೂ ಕ್ರೆಡಿಟ್ ಕಾರ್ಡ್ #DebitCard ಬಳಕೆದಾರರಿಗೆ ಮಹತ್ವ ಸಂದೇಶ ನೀಡಿರುವ ಕೇಂದ್ರ ಸರ್ಕಾರ ಯಾವುದೇ ಸ್ಥಳದಲ್ಲಿ ಪಿನ್(ಗುಪ್ತಸಂಖ್ಯೆ) #PIN ಹಾಕುವಾಗಿ ಎಚ್ಚರಿಕೆಯಿಂದಿರಿ ಎಂದು ಸೂಚನೆ ನೀಡಿದೆ.
ಈ ಕುರಿತಂತೆ ಕೇಂದ್ರ ಗೃಹ ಸಚಿವಾಲಯವು ಮಹತ್ವದ ಟ್ವೀಟ್ ಮಾಡಿದ್ದು, ನವದೆಹಲಿಯ #NewDelhi ವಸಂತ್ ಕುಂಜ್’ನಲ್ಲಿರುವ ಮಾಲ್ ಒಂದರಲ್ಲಿನ ಅಡಿಡಾಸ್ ಅಂಗಡಿಯ ಚಿತ್ರವನ್ನು ಹಂಚಿಕೊಂಡಿದೆ.
ಖರೀದಿದಾರರು ತಮ್ಮ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ವಹಿವಾಟಿನ ಬಗ್ಗೆ ಜಾಗರೂಕರಾಗಿರಿ ಎಂದು ಎಚ್ಚರಿಸಿದ್ದು, ಪಿಒಎಸ್ ಯಂತ್ರದ #POS_Machine ಮೇಲೆ ನೇರವಾಗಿ ಇರಿಸಲಾಗಿರುವ ಕ್ಯಾಮೆರಾವನ್ನು ಚಿತ್ರ ಗುರುತಿಸಿ ನಾಗರಿಕರಿಗೆ ಎಚ್ಚರಿಕೆ ನೀಡಲಾಗಿದೆ.
ಈ ಚಿತ್ರದಿಂದ, ಕ್ಯಾಮೆರಾವು ಖರೀದಿದಾರನ ಪಿನ್ ಅನ್ನು ರೆಕಾರ್ಡ್ ಮಾಡಲು ಸಮರ್ಥವಾಗಿ ಸಾಧ್ಯವಾಗುತ್ತದೆ ಎಂದು ಹೇಳಲಾಗಿದ್ದು, ಇದರಿಂದಾಗಿ ಗ್ರಾಹಕರ ಸಂಪತ್ತು ಕಳ್ಳತನವಾಗುವ ಅಪಾಯವನ್ನು ಉಂಟುಮಾಡುತ್ತದೆ ಎಂದು ಹೇಳಿದೆ.
ಕ್ಯಾಮೆರಾ ಪರೀಕ್ಷಿಸಿ
ನಿಮ್ಮ ಹಣವನ್ನು ರಕ್ಷಿಸಿಕೊಳ್ಳಲು ನಿಮ್ಮ ಪಿನ್ ಅನ್ನು ಸಂರಕ್ಷಿಸಿ ಎಂದು ಉಲ್ಲೇಖಿಸಿರುವ ಕೇಂದ್ರ ಸರ್ಕಾರ, ಯಾವುದೇ ಸ್ಥಳದಲ್ಲಿ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಪಿನ್ ಹಾಕುವ ಮುನ್ನ ಆ ಸ್ಥಳದಲ್ಲಿರಬಹುದಾದ ಕ್ಯಾಮೆರಾಗಳನ್ನು ಮೊದಲ ಗಮನಿಸಿ. ನವದೆಹಲಿಯ ವಸಂತ್ ಕುಂಜ್’ನಲ್ಲಿರುವ ಅಡಿಡಾಸ್ ಅಂಗಡಿಯ ಬಿಲ್ಲಿಂಗ್ ಕೌಂಟರ್ ಮೇಲ್ಭಾಗ ಕ್ಯಾಮೆರಾ ಹೊಂದಿದೆ. #SpyCamera #StaySafeOnline #Digital #CyberSafety @RBI @NPCI_NPCI” ಎಂದು ಹ್ಯಾಶ್ ಟ್ಯಾಗ್ ಮಾಡಿ ಟ್ವೀಟ್ ಮಾಡಿದೆ.
Protect your PIN to protect #money. Look for nearby cameras before entering your PIN or OTP in ATM or POS machine. @adidas store in DLF Mall Vasant Kunj, New Delhi has a camera right above the billing counter. #SpyCamera #StaySafeOnline #Digital #CyberSafety @RBI @NPCI_NPCI pic.twitter.com/iIxU5py6Zz
— Cyber Dost (@Cyberdost) April 11, 2023
ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಬ್ಯಾಂಕ್ ಖಾತೆಯಿಂದ ಹಣವನ್ನು ಹಿಂಪಡೆಯಲು ವೈಯಕ್ತಿಕ ಗುರುತಿನ ಸಂಖ್ಯೆ ಅಥವಾ ಪಿನ್ ಪ್ರಮುಖವಾಗಿದೆ.
ಈ ಕ್ಯಾಮೆರಾವನ್ನು ಗಮನಿಸಿದರೆ ಪ್ರತಿ ಕಾರ್ಡ್’ನ ವಹಿವಾಟಿನ ಪಿನ್ ಸಂಖ್ಯೆಯನ್ನು ರೆಕಾರ್ಡ್ ಮಾಡುವ ಉದ್ದೇಶದಿಂದಲೇ ಅಳವಡಿಸಲಾಗಿದೆ ಎಂಬ ಅನುಮಾನ ಮೂಡುತ್ತದೆ. ಇಂತಹ ಸಂಭಾವ್ಯಗಳು ಗ್ರಾಹಕರ ಖಾತೆಗೆ ಕನ್ನ ಹಾಕುವ ಸಾಧ್ಯತೆಯನ್ನೂ ಸಹ ತಳ್ಳಿ ಹಾಕುವಂತಿಲ್ಲ ಎಂದಿದೆ
ಅಲ್ಲದೇ ಎಟಿಎಂನಲ್ಲಿ #ATM ಹಣವನ್ನು ತೆಗೆಯುವಾಗಲೂ ಸಹ ನಿಮ್ಮ ವೈಯಕ್ತಿಯ ಗುಪ್ತ ಮಾಹಿತಿಗಳ ಬಗ್ಗೆ ಜಾಗ್ರತೆ ವಹಿಸಿ ಎಂದು ಹೇಳಿದೆ.
2021ರಲ್ಲಿ ಎಷ್ಟು ವಂಚನೆ ನಡೆದಿದೆ?
ಇನ್ನು, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಹಿವಾಟುಗಳ ವಂಚನೆಯ ಪ್ರಕರಣಗಳು 2021 ರಲ್ಲಿ ಏರಿಕೆಯಾಗಿದೆ. ಆದರೆ ಎಟಿಎಂ ಸಂಬಂಧಿತ ವಂಚನೆ ಕಡಿಮೆಯಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್’ಸಿಆರ್’ಬಿ) #NCRB ವರದಿ ಹೇಳಿದೆ
ಇದೇ ವೇಳೆ ಕಳೆದ ವರ್ಷಕ್ಕಿಂತ ವಂಚನೆ ಮತ್ತು ನಕಲಿ ಪ್ರಕರಣಗಳ ಸಂಖ್ಯೆ ಸುಮಾರು ಶೇ.16ರಷ್ಟು ಹೆಚ್ಚಾಗಿದೆ ಎಂದು ವರದಿ ಹೇಳಿದೆ.
2021 ರಲ್ಲಿ ಒಟ್ಟು 52,974 ಸೈಬರ್ ಅಪರಾಧ #CyberCrime ಪ್ರಕರಣಗಳು ವರದಿಯಾಗಿವೆ ಎಂದು ವರದಿಯಾಗಿದೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post