ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಒಟ್ಟು 5.24 ಲಕ್ಷ ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಯಾವ ದರ್ಜೆಯಲ್ಲಿ ಎಷ್ಟು ವಿದ್ಯಾರ್ಥಿಗಳು ಪಾಸ್?
ಡಿಸ್ಟಿಂಕ್ಷನ್: 1,09,509
ಪ್ರಥಮ ದರ್ಜೆ: 2,47,315
ದ್ವಿತೀಯ ದರ್ಜೆ: 90,014
ತೃತೀಯ ದರ್ಜೆ: 77,371
ಕಲಾ ವಿಭಾಗದಲ್ಲಿ 2,20,305 ವಿದ್ಯಾರ್ಥಿಗಳ ಪೈಕಿ 1,34,876 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ.61.22ರಷ್ಟು ಫಲಿತಾಂಶ ದಾಖಲಾಗಿದೆ. ವಾಣಿಜ್ಯ ವಿಭಾಗದಲ್ಲಿ 2,40,146 ವಿದ್ಯಾರ್ಥಿಗಳ ಪೈಕಿ 1,82,246 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಶೇ.75.89ರಷ್ಟು ಫಲಿತಾಂಶ ದಾಖಲಾಗಿದೆ. ವಿಜ್ಞಾನ ವಿಭಾಗದಲ್ಲಿ 2,41,616 ವಿದ್ಯಾರ್ಥಿಗಳ ಪೈಕಿ 2,07,087 ವಿದ್ಯಾರ್ಥಿಗಳು ಪಾಸ್ ಆಗಿ ಶೇ.85.71ರಷ್ಟು ಫಲಿತಾಂಶ ದಾಖಲಾಗಿದೆ.
Also read: ದ್ವಿತೀಯ ಪಿಯುಸಿ ಫಲಿತಾಂಶ: ದಕ್ಷಿಣ ಕನ್ನಡ ಫಸ್ಟ್, ಯಾದಗಿರಿ ಲಾಸ್ಟ್
ಈ ಬಾರಿ 42 ಸರಕಾರಿ ಕಾಲೇಜುಗಳು ಮತ್ತು 10 ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ.100 ಫಲಿತಾಂಶ ಬಂದಿದೆ. ಒಟ್ಟು 78 ಸರಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. 264 ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ 100 ಫಲಿತಾಂಶ ಬಂದಿದೆ.
ಕಲಾ ವಿಭಾಗದ ಟಾಪರ್’ಗಳು
ತಬಸ್ಸಮ್ ಶಾಹಿಕ್ – 593 ಪ್ರಥಮ ರ‍್ಯಾಂಕ್- NMKRV ಜಯನಗರ
ಕುಶ ನಾಯ್ಕ್ -592- ಎರಡನೇ ರ‍್ಯಾಂಕ್ ಇಂದು ಇನೋವೇಟಿವ್ ಪಿಯು ಕಾಲೇಜು, ಬಳ್ಳಾರಿ
ದಡ್ಡಿ ಕರೀಬಸಮ್ಮ- 592 ಎರಡನೇ ರ‍್ಯಾಂಕ್ ಇಂದು ಇನೋವೇಟಿವ್ ಪಿಯು ಕಾಲೇಜು, ಬಳ್ಳಾರಿ
ಸಹನಾ- 591- ಮೂರನೇ ರ‍್ಯಾಂಕ್ ಸರ್ಕಾರಿ ಪಿಯು ಕಾಲೇಜು ಬೆಳಗಾವಿ
ವಾಣಿಜ್ಯ ವಿಭಾಗದ ಟಾಪರ್’ಗಳು
ಅನನ್ಯಾ – 600 – ಪ್ರಥಮ ರ‍್ಯಾಂಕ್ ಅಳ್ವಾಸ್ ಪಿಯು ಕಾಲೇಜು ಮೂಡುಬಿದರೆ
ಅನ್ವಿತ ಡಿಎನ್ 596 – ಎರಡನೇ ರ‍್ಯಾಂಕ್ – ವಿಕಾಸ್ ಕಾಂಪೋಸಿಟ್ ಪಿಯು ಕಾಲೇಜು
ಶುಭಶ್ರೀ ಎಂ- 595 – ಮೂರನೇ ರ‍್ಯಾಂಕ್ ರಾಜಾಜಿನಗರ ಎಎಸ್ ಸ್ಸಿ ಪಿಯು ಕಾಲೇಜು
ವಿಜ್ಞಾನ ವಿಭಾಗದ ಟಾಪರ್’ಗಳು
ಎಸ್.ಎಂ. ಕೌಶಿಕ್ 596 – ಪ್ರಥಮ ರ‍್ಯಾಂಕ್ ಕೋಲಾರ, ಗಂಗೋತ್ರಿ ಪಿಯು ಕಾಲೇಜು
ಕಟ್ಟೋಜು ಜೈಶಿಕ್ – 595 – ಎರಡನೇ ರ‍್ಯಾಂಕ್- Rv Pu ಕಾಲೇಜು ಬೆಂಗಳೂರು ಜಯನಗರ
ಹರ್ಷಿತ ಆರ್ -594 – ಮೂರನೇ ರ‍್ಯಾಂಕ್ ನಾರಾಯಣ ಪಿಯು ಕಾಲೇಜು ಬೆಂಗಳೂರು

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















