No Result
View All Result
KRCS Shikaripura Achieves 100% Result in CBSE Class X Board Exams
English Articles

KRCS Shikaripura Achieves 100% Result in CBSE Class X Board Exams

by ಕಲ್ಪ ನ್ಯೂಸ್
April 16, 2026
0

Kalpa Media House  |  Shikaripura | Kumadvathi Residential Central School (KRCS), Shikaripura, has achieved a 100% pass result in the...

Read moreDetails
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

April 13, 2026
Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

April 13, 2026
  • Advertise With Us
  • Grievances
  • About Us
  • Contact Us
Saturday, April 18, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಈಶಾನ್ಯ ರಾಜ್ಯಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ರೂಪಿಸುತ್ತಿರುವ ಅಮಿತ್ ಶಾ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
April 24, 2023
in Special Articles
0
ಈಶಾನ್ಯ ರಾಜ್ಯಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ರೂಪಿಸುತ್ತಿರುವ ಅಮಿತ್ ಶಾ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ನವದೆಹಲಿ  |

ಇಂದು ಗೃಹಮಂತ್ರಿ ಅಮಿತ್ ಶಾರವರ Amith Shah ಸಮ್ಮುಖದಲ್ಲಿ ಈಶಾನ್ಯ ರಾಜ್ಯಗಳಾದ ಅಸ್ಸಾಂ ಮತ್ತು ಅರುಣಾಚಲ ಪ್ರದೇಶಗಳ ಮುಖ್ಯಮಂತ್ರಿಗಳು ಅಂತರರಾಜ್ಯ ಗಡಿ ಸಂಘರ್ಷ ವಿರಾಮಕ್ಕೆ ಸಹಿ ಹಾಕಿದರು. ಈ ಒಪ್ಪಂದದ ಅಡಿಯಲ್ಲಿ 123 ಹಳ್ಳಿಗಳ ಕುರಿತಾದ ಹಳೆಯ ಗಡಿ ವಿವಾದಕ್ಕೆ ಅಂತಿಮ ತೆರೆ ಎಳೆಯಲಾಯಿತು. “ಈ ಐತಿಹಾಸಿಕ ಒಪ್ಪಂದ ಬಹು ದೊಡ್ಡ ಸಾಧನೆ. ಈಶಾನ್ಯ ರಾಜ್ಯಗಳನ್ನು ಶಾಂತಿಯುತ, ಅಭಿವೃದ್ದಿಯುತ ಮತ್ತು ಸಂಘರ್ಷ ರಹಿತ ರಾಜ್ಯಗಳನ್ನಾಗಿ ಮಾಡಬೇಕೆಂದು ನಮ್ಮ ಪ್ರಮುಖ ಗುರಿ” ಎಂದು ಅಮಿತ್ ಶಾ ಉಚ್ಚರಿಸಿದರು.

ಸುಮಾರು 800 ಕಿ.ಮೀ ಉದ್ದದ ವಿಸ್ತಾರ ಹೊಂದಿರುವ ಅಸ್ಸಾಂ-ಅರುಣಾಚಲ ಪ್ರದೇಶದ ಅಂತರರಾಜ್ಯ ಗಡಿ ಒಪ್ಪಂದವು ಎರಡು ನೆರೆಯ ರಾಜ್ಯಗಳ ನಡುವೆ ದೀರ್ಘಾವಧಿಯ ಒಪ್ಪಂದವನ್ನು ಖಚಿತಪಡಿಸುವುದಲ್ಲದೇ, ಕೆಲವು ವರ್ಷಗಳಿಂದ ಕಳೆದುಹೋಗಿದ್ದ ವೈಭವವನ್ನು ಮರಳಿ ಪಡೆಯಲು, ಮತ್ತು ಇಡೀ ಈಶಾನ್ಯ ಪ್ರದೇಶದ ಪ್ರಗತಿಗೆ ಮತ್ತಷ್ಟು ಉತ್ತೇಜನ ನೀಡಲಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾರವರ ಕನಸಿನ ಕೂಸಾದ ಈ ಒಪ್ಪಂದವು, ಯಾವುದೇ ಪ್ರದೇಶ ಅಥವಾ ಗ್ರಾಮಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಉಭಯ ರಾಜ್ಯಗಳ ನಡುವೆ ಯಾವುದೇ ಭವಿಷ್ಯದಲ್ಲಿ ಭಿನ್ನಾಭಿಪ್ರಾಯವನ್ನು ಹೆಚ್ಚಿಸುವ ಅವಕಾಶವನ್ನು ಶಾಶ್ವತವಾಗಿ ತೆಗೆದುಹಾಕುತ್ತದೆ. ಕಳೆದ ನಾಲ್ಕು ವರ್ಷಗಳಲ್ಲಿ ಈಶಾನ್ಯ ರಾಜ್ಯಗಳಲ್ಲಿ ಮಾಡಿದ ಎಂಟನೇ ಒಪ್ಪಂದವಾಗಿದ್ದು, ಆರ್ಥಿಕ ಅಭಿವೃದ್ಧಿಗೆ ಅಗಾಧವಾದ ಸಾಮರ್ಥ್ಯವನ್ನು ಹೊಂದಿರುವ ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಶಾಶ್ವತಗೊಳಿಸುವ ಗುರಿಯನ್ನು ಹೊಂದಿದೆ.

ತಮ್ಮ ಕಠಿಣ ನಿಲುವುಗಳಿಂದ ಆಧುನಿಕ ಉಕ್ಕಿನ ಮನುಷ್ಯ ಎಂದೇ ಕರೆಯಿಸಿಕೊಳ್ಳುವ ಅಮಿತ್ ಶಾರವರು ಗೃಹ ಇಲಾಖೆಯ ಅಧಿಕಾರ ವಹಿಸಿಕೊಂಡ ನಂತರ ಈಶಾನ್ಯ ರಾಜ್ಯಗಳ ಗಡಿ ಸಂಘರ್ಷಕ್ಕೆ ನಿಗದಿತ ಸಮಯದ ಪರಿಮಿತಿ ಅಳವಡಿಸಿದರು. ರಾಜ್ಯದಲ್ಲಿ ಶಾಂತಿಯಲ್ಲಿದೇ ಯಾವುದೇ ಅಭಿವೃದ್ಧಿಯಾಗದು ಎಂದು ನಂಬುವ ಶಾರವರು ‘ಕೈಯಲ್ಲಿ ಆಯುಧಗಳನ್ನು ಹಿಡಿದು ನಿಮಗೆ ಶಿಕ್ಷಣ, ಆರೋಗ್ಯ, ಉದ್ಯೋಗ, ಮನೆ ಮುಂತಾದ ಸೌಲಭ್ಯಗಳು ಬೇಕೆಂದರೆ ಅಸಾಧ್ಯ. ಅಸಹಕಾರತೆಯಿಂದ ಅಭಿವೃದ್ಧಿಯಾಗದು ಎಂಬುದು ಶಾರವರ ಅಭಿಪ್ರಾಯ.
ಈ ಸಂದರ್ಭದಲ್ಲಿ ಮಾತನಾಡಿದ ಶಾ, ಹಿಂದಿನ ಸರ್ಕಾರಗಳ ನಿಷ್ಕ್ರಿಯ ಕುರಿತು ಟೀಕಿಸುತ್ತಾ, ಅವರು ಈ ರೀತಿ ನಿರುತ್ಸಾಹ ತೋರಿಸದಿದ್ದರೆ ಇಂತಹ ವಿವಾದಗಳು ಯಾವಾಗಲೋ ಅಂತ್ಯಗೊಳ್ಳುತ್ತಿದ್ದವು. ಆದಾಗ್ಯೂ, ಅಸ್ಸಾಂ-ಅರುಣಾಚಲ ಒಪ್ಪಂದವು ಖಂಡಿತವಾಗಿಯೂ ಈ ಇಡೀ ಪ್ರದೇಶದ ಭವಿಷ್ಯದ ಅಭಿವೃದ್ಧಿಗೆ ದಾರಿ ಮಾಡಿಕೊಡಲಿದೆ ಎಂದು ಶಾ ಹೇಳಿದರು.

ಒಂದು ಕಾಲದಲ್ಲಿ ಅಭಿವೃದ್ಧಿ ಹೊಂದುತ್ತಿರುವ ವ್ಯಾಪಾರ ಮತ್ತು ಆರ್ಥಿಕ ಕೇಂದ್ರವಾಗಿ, ಅಷ್ಟಲಕ್ಷ್ಮಿ (ಎಂಟು ರಾಜ್ಯಗಳು) ಎಂದೇ ಕರೆಯಲ್ಪಡುವ ಈಶಾನ್ಯ ಪ್ರದೇಶವು ಆಂದೋಲನ, ಜನಾಂಗೀಯ ಸಂಘರ್ಷ, ಅಶಾಂತಿ, ಉಗ್ರಗಾಮಿತ್ವ ಮತ್ತು ಪ್ರತ್ಯೇಕತಾವಾದಗಳಿಂದ ಸಂಕಷ್ಟಕ್ಕೆ ಸಿಲುಕಿತ್ತು. 2014 ರಲ್ಲಿ ಅಧಿಕಾರ ವಹಿಸಿಕೊಂಡ ತಕ್ಷಣ, ತನ್ನ “ಆಕ್ಟ್ ಈಸ್ಟ್ ಪಾಲಿಸಿ” ಅಡಿಯಲ್ಲಿ ಈ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯ ಶಾಶ್ವತ ವಾತಾವರಣವನ್ನು ತರುವ ಕಾರ್ಯವನ್ನು ಭಾಜಪ ಸರ್ಕಾರ ಮಾಡಿತು.
ಅಮಿತ್ ಶಾ ಅವರ ನೇತೃತ್ವದಲ್ಲಿ, ಗೃಹ ಸಚಿವಾಲಯವು ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಉತ್ತೇಜಿಸಲು ಶ್ರದ್ಧೆಯಿಂದ ಕೆಲಸ ಮಾಡಿದೆ, ಮತ್ತು “ಪೂರ್ಣ ಸರ್ಕಾರದ” ವಿಧಾನದೊಂದಿಗೆ ಪ್ರದೇಶದ ಘನತೆ, ಸಂಸ್ಕೃತಿ, ಭಾಷೆ, ಸಾಹಿತ್ಯ ಮತ್ತು ಸಂಗೀತಕ್ಕೆ ಮಹತ್ವ ನೀಡಿದೆ. ಬಹಳ ಸಮಯದಿಂದ ದೆಹಲಿಯ ನಿರ್ಲಕ್ಷ್ಯ ಮತ್ತು ಮಲತಾಯಿ ಧೋರಣೆಗೆ ಬಲಿಯಾದ ಈಶಾನ್ಯವು ಈಗ ಹಿಂಸಾಚಾರ ಮತ್ತು ಉಗ್ರಗಾಮಿತ್ವವನ್ನು ದೂರವಿಟ್ಟು ಅಭಿವೃದ್ಧಿಯ ಮುಖ್ಯವಾಹಿನಿಗೆ ಮರಳಲು ಪ್ರಾರಂಭಿಸಿದೆ.
ಪ್ರಸ್ತುತ ಸರ್ಕಾರವು ಈ ಪ್ರದೇಶದಲ್ಲಿ ಆರ್ಥಿಕ ಅಭಿವೃದ್ಧಿಗೆ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಬಜೆಟ್ ಬೆಂಬಲವನ್ನು ದೊಡ್ಡ ರೀತಿಯಲ್ಲಿ ಹೆಚ್ಚಿಸುವುದರ ಜೊತೆಗೆ ಈಶಾನ್ಯ ಕೇಂದ್ರಿತ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದರ ಹೊರತಾಗಿ, ಸರ್ಕಾರವು ಇತ್ತೀಚೆಗೆ ಈ ಪ್ರದೇಶಕ್ಕಾಗಿ ರೂ 4,800 ಕೋಟಿ ವೆಚ್ಚದಲ್ಲಿ ವೈಬ್ರೆಂಟ್ ವಿಲೇಜ್ ಪ್ರೋಗ್ರಾಂ (ವಿವಿಪಿ) ಅನ್ನು ಪ್ರಾರಂಭಿಸಿದೆ. ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮಕ್ಕೆ 2.66 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ‘ಈಶಾನ್ಯ ಪ್ರದೇಶಾಭಿವೃದ್ಧಿ ಸಚಿವಾಲಯದ’ (ಆoಓಇಖ) ಬಜೆಟ್ ಅನ್ನು ಕೂಡ ಸಹ ಗಣನೀಯವಾಗಿ ಹೆಚ್ಚಿಸಲಾಗಿದೆ.

Also read: ಮತದಾರರು ಬಿಜೆಪಿ ಪರವಾಗಿದ್ದಾರೆ, 125ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಖಚಿತ: ಬಿಎಸ್‌ವೈ

2014 ಕ್ಕೆ ಹೋಲಿಸಿದರೆ, 2022 ರಲ್ಲಿ ಹಿಂಸಾಚಾರದ ಘಟನೆಗಳು 67% ರಷ್ಟು ಕಡಿಮೆಯಾಗಿದೆ. ಅದೇ ಅವಧಿಯಲ್ಲಿ, ಭದ್ರತಾ ಪಡೆಗಳಲ್ಲಿನ ಸಾವುನೋವುಗಳು 60% ರಷ್ಟು ಕಡಿಮೆಯಾಗಿದೆ, ನಾಗರಿಕರ ಸಾವುಗಳು 85% ರಷ್ಟು ಕಡಿಮೆಯಾಗಿದೆ ಮತ್ತು 8,000 ಉಗ್ರಗಾಮಿಗಳು ಮುಖ್ಯವಾಹಿನಿಗೆ ಬಂದು ಶರಣಾಗಿದ್ದಾರೆ. ಅಂತೆಯೇ, ಈಶಾನ್ಯದಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ (ಂಈSPಂ) ಪರಿಧಿಯನ್ನು ಕಡಿಮೆ ಮಾಡಲಾಗಿದೆ ಮತ್ತು ತೊಂದರೆಗೊಳಗಾದ ಪ್ರದೇಶಗಳು ಈಗ ಮಹತ್ವಾಕಾಂಕ್ಷೆಯ ವಲಯಗಳಾಗಿ ಬದಲಾಗುತ್ತಿವೆ.

ಈಶಾನ್ಯ ರಾಜ್ಯಗಳ ಅಭಿವೃದ್ಧಿ ನರೇಂದ್ರ ಮೋದಿ ಸರ್ಕಾರದ ಪ್ರಮುಖ ಆದ್ಯತೆಗಳಲ್ಲೊಂದಾಗಿದೆ. ‘ಪೂರ್ವೋದಯ’ ಕನಸನ್ನು ಬಿತ್ತಿದ ಮೋದಿಯವರು ಈ ರಾಜ್ಯಗಳಿಗೆ ಅಷ್ಟಲಕ್ಷ್ಮಿ ಎಂದೇ ಕರೆದಿದ್ದಾರೆ. ಪೂರ್ಣ ಸರ್ಕಾರದ ನೀತಿಯೊಂದಿಗೆ ಸ್ಥಳೀಯ ಭಾಷೆ, ಸಂಸ್ಕೃತಿ, ಸಾಹಿತ್ಯ ಮತ್ತು ಸಂಗೀತ ನೃತ್ಯಗಳಿಗೆ ಪೋಷಣೆ ನೀಡುತ್ತಾ, ಈ ರಾಜ್ಯಗಳಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡಲು, ಅಮಿತ್ ಶಾ ನೇತೃತ್ವದಲ್ಲಿ ಗೃಹ ಇಲಾಖೆ ಹಲವಾರು ಕಾರ್ಯಕ್ರಮ ಮತ್ತು ಯೋಜನೆಗಳನ್ನು ಹಮ್ಮಿಕೊಂಡಿದೆ.
Kalahamsa Infotech private limitedಸ್ವಾತಂತ್ರ್ಯಾನಂತರ, ಹಲವಾರು ವರ್ಷಗಳವರೆಗೆ ದೆಹಲಿ ಸರ್ಕಾರದ ಉದಾಸೀನತೆ ಮತ್ತು ಕ್ಷುಲಕ ರಾಜಕಾರಣಗಳಿಂದ ಈಶಾನ್ಯ ರಾಜ್ಯಗಳು ಅಭಿವೃದ್ಧಿ ವಂಚಿತವಾಗಿದ್ದವು. ಇದ್ದರಿಂದ ರೋಷಿಹೋಗಿದ್ದ ಅಲ್ಲಿನ ಹಲವು ಸ್ಥಳೀಯರು ಹಿಂಸಾ ಮಾರ್ಗದ ಜೊತೆಗೆ ಪ್ರತ್ಯೇಕತೆ ಕೂಗನ್ನು ಹೊರಡಿಸತೊಡಗಿದ್ದರು. 2014 ರ ನಂತರ ದೆಹಲಿಯ ಚುಕ್ಕಾಣಿ ಹಿಡಿದ ಮೋದಿ ಸರ್ಕಾರ ‘ಆಕ್ಟ್ ಈಸ್ಟ್ ಯೋಜನೆ’ ಅಳವಡಿಸಿಕೊಂಡಿತು. ಅಮಿತ್ ಶಾ ನೇತೃತ್ವದಲ್ಲಿ ಈ ಸಮಸ್ಯೆಗಳ ಪರಿಹಾರಕ್ಕಾಗಿ ತ್ರಿಸೂತ್ರಗಳನ್ನು ಅಳವಡಿಸಿಕೊಂಡರು. ಮೊದಲನೆಯದಾಗಿ ಸ್ಥಳೀಯ ಆಡುಭಾಷೆಗಳು, ನೃತ್ಯ, ಸಂಗೀತ, ಆಹಾರ ಮತ್ತು ಸಂಸ್ಕೃತಿಗಳನ್ನು ಕಾಪಾಡುವುದು ಮತ್ತು ಅವುಗಳನ್ನು ಭಾರತದಾದ್ಯಂತ ಪ್ರಚಾರ ಮಾಡುವುದು. ಎರಡನೇಯದಾಗಿ ಈಶಾನ್ಯ ರಾಜ್ಯಗಳಲ್ಲಿನ ಎಲ್ಲಾ ಸಂಘರ್ಷಗಳಿಗೆ ಅಂತ್ಯ ಹಾಡಿ, ಅಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಹೆಚ್ಚಿಸುವುದು. ಮೂರನೇಯದು ಈ ರಾಜ್ಯಗಳ ಸಮಗ್ರ ಅಭಿವೃದ್ಧಿ.

ಈ ನೀತಿಗಳ ಫಲಸ್ವರೂಪವೆಂಬತೆ, 2014 ನಂತರ ಈ ರಾಜ್ಯಗಳಿ ಶಾಂತಿಪಥದತ್ತ ಸಾಗುತ್ತಿವೆ; ಪ್ರತ್ಯೇಕತಾವಾದಿಗಳು ಮುನ್ನೆಲೆಗೆ ಬರುವುದರ ಜೊತೆಗೆ ಗಡಿ ಸಂಘರ್ಷಗಳು ಅಂತ್ಯಗೊಳ್ಳುತ್ತಿವೆ. ಹಾಗೇ ಜನಾಂಗೀಯ ಸಂಘರ್ಷಗಳು ಕೂಡ ಕಡಿಮೆಯಾಗುತ್ತಿದ್ದು, ಹಾಗೇ ಅಭಿವೃದ್ಧಿಯ ಹೊಸ ಪಥಗಳು ತೆರೆದುಕೊಳ್ಳುತ್ತಿವೆ. ಹೀಗೆ ಹಲವು ಗಡಿ ಒಪ್ಪಂದಗಳ ಮೂಲಕ 8000ಕ್ಕೂ ಹೆಚ್ಚು ಯುವಕರು ತಮ್ಮ ಶಸ್ತ್ರಾಸ್ತ್ರಗಳನ್ನು ತೊರೆದು ಮುಖ್ಯವಾಗಿ ಬಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Amith ShahKannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadaNewDelhiNewsinKannadaNewsKannadaಅಮಿತ್ ಶಾನವದೆಹಲಿ
Share197Tweet123Send
Previous Post

ಮತದಾರರು ಬಿಜೆಪಿ ಪರವಾಗಿದ್ದಾರೆ, 125ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಖಚಿತ: ಬಿಎಸ್‌ವೈ

Next Post

ಶಿವಮೊಗ್ಗ | ಕಾಲು ಜಾರಿ ನದಿಗೆ ಬಿದ್ದು ರೈತ ಸಾವು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಸೋಂಕಿಗೆ ಮಗ ಬಲಿಯಾದ ವಿಷಯ ತಿಳಿದು ಖಿನ್ನತೆಯಿಂದ ವೃದ್ದ ತಂದೆ ಸಾವು

ಶಿವಮೊಗ್ಗ | ಕಾಲು ಜಾರಿ ನದಿಗೆ ಬಿದ್ದು ರೈತ ಸಾವು

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ನಾರಿಶಕ್ತಿ ವಂದನಾ ಕಾಯ್ದೆ ವಿರುದ್ಧ ಮತಚಲಾವಣೆ ಮಹಿಳೆಗೆ ಮಾಡಿದ ಅಪಮಾನ: ಶಾಸಕ ಚನ್ನಬಸಪ್ಪ

ನಾರಿಶಕ್ತಿ ವಂದನಾ ಕಾಯ್ದೆ ವಿರುದ್ಧ ಮತಚಲಾವಣೆ ಮಹಿಳೆಗೆ ಮಾಡಿದ ಅಪಮಾನ: ಶಾಸಕ ಚನ್ನಬಸಪ್ಪ

April 18, 2026
ಸಿಬಿಎಸ್‍ಇ 10th Result | ಪೋದಾರ್ ಶಾಲೆಗೆ ಶೇ.100ರಷ್ಟು ಫಲಿತಾಂಶ

ಸಿಬಿಎಸ್‍ಇ 10th Result | ಪೋದಾರ್ ಶಾಲೆಗೆ ಶೇ.100ರಷ್ಟು ಫಲಿತಾಂಶ

April 18, 2026
ಭದ್ರಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದ KSRP ಸಿಬ್ಬಂದಿ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ

ಭದ್ರಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದ KSRP ಸಿಬ್ಬಂದಿ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ

April 18, 2026
ಗಮನಿಸಿ! ಈ ಎರಡು ದಿನ ಮೈಸೂರು-ಶಿವಮೊಗ್ಗ ರೈಲು ಸಂಚಾರದಲ್ಲಿ ಬದಲಾವಣೆ

ಹುಬ್ಬಳ್ಳಿ-ಅಲಿಪುರ್ ದ್ವಾರ್ ನಡುವೆ ವಿಶೇಷ ರೈಲು ಸೇವೆ ಮತ್ತೆ ವಿಸ್ತರಣೆ | ಇಲ್ಲಿದೆ ಡೀಟೇಲ್ಸ್

April 18, 2026
ರಾಜ್ಯ ಸರ್ಕಾರಿ ನೌಕರರಿಗೂ ಕೇಂದ್ರ ವೇತನ ಆಯೋಗದ ವರದಿ ಜಾರಿ? ಸಿಎಸ್ ಷಡಾಕ್ಷರಿ ಹೇಳಿದ್ದೆನು?

ರಾಜ್ಯ ಸರ್ಕಾರಿ ನೌಕರರಿಗೂ ಕೇಂದ್ರ ವೇತನ ಆಯೋಗದ ವರದಿ ಜಾರಿ? ಸಿಎಸ್ ಷಡಾಕ್ಷರಿ ಹೇಳಿದ್ದೆನು?

April 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL