ಕಲ್ಪ ಮೀಡಿಯಾ ಹೌಸ್ | ಸೊರಬ |
11ಕೆವಿ ಫೀಡರ್‌ಗಳ ತುರ್ತು ನಿರ್ವಹಣಾ ಕಾಮಗಾರಿ ನಡೆಸಲು ಉದ್ದೇಶಿಸಿರುವುದರಿಂದ 110/11ಕೆವಿ ಸೊರಬ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಕೆಲವು ಫೀಡರ್‌ಗಳಿಗೆ ಏ.20ರಂದು ಬೆಳಿಗ್ಗೆ 10 ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಎಫ್-2 ಸಾರೇಕೊಪ್ಪ, ಎಫ್-3 ಬಳ್ಳಿಬೈಲು, ಎಫ್-4 ಓಟೂರು, ಎಫ್-5 ಚಿಕ್ಕಾವಲೀ, ಎಫ್-15 ಕಲ್ಲಂಬಿ ಎನ್‌ಜೆಐ, ಎಫ್-16 ಕಡಸೂರು ಎನ್‌ಜೆವೈ, ಎಫ್-17 ಯಲವಳ್ಳಿ ಎನ್‌ಜೆವೈ, ಎಫ್-9 ಬಿಳಾಗಿ, ಎಫ್-11 ಮಂಚಿ, ಎಫ್-21 ಸೊರಬ ಪಟ್ಟಣ, ಎಫ್-23 ತಾವರೇಹಳ್ಳಿ, ಎಫ್-24 ಕರಡಿಗೆರೆ ಮತ್ತು ಎಫ್-25 ನಡಹಳ್ಳಿ ಫೀಡರ್‌ಗಳ ವ್ಯಾಪ್ತಿಗೊಳಪಡುವ ಸೊರಬ ಪಟ್ಟಣ ಸೇರಿದಂತೆ, ಎಲ್ಲಾ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.
Also read: ಮೇ 7ರಂದು ಪ್ರಧಾನಿ ಮೋದಿ ಶಿವಮೊಗ್ಗಕ್ಕೆ ಹಿನ್ನೆಲೆ: ಸಮಾವೇಶ ಸ್ಥಳದ ಭೂಮಿಪೂಜೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post