ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮಧ್ವಮತ ಎಂಬುದು ಪ್ರಾಯೋಗಿಕ ವಿಜ್ಞಾನ (ಪ್ರಾಕ್ಟಿಕಲ್ ಸೈನ್ಸ್) ಪ್ರಣೀತ ಸಿದ್ಧಾಂತದ ಅನುಸರಣೆಯಾಗಿದೆ ಎಂದು
ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಹೇಳಿದರು.
ಅವರು ಚಾಮರಾಜ ಜೋಡಿ ರಸ್ತೆಯ ವೆಂಕಟಾಚಲ ಧಾಮದಲ್ಲಿ ಶ್ರೀಮಠ ಆಯೋಜಿಸಿರುವ ವಿದ್ಯಾಮಾನ್ಯತೀರ್ಥರ ಆರಾಧನೋತ್ಸವದ ವಿಶೇಷ ಕಾರ್ಯಕ್ರಮ ಸರಣಿಯಲ್ಲಿ ಗುರುವಿಜಯ ಗೀತೆ- ಗಾಯನ ಮತ್ತು ಪ್ರವಚನಕ್ಕೆ ಸೋಮವಾರ ಬೆಳಗಿನ ಅವಧಿಯಲ್ಲಿ ಮಂಗಳ ಹಾಡಿ ಆಶೀರ್ವಚನ ನೀಡಿದರು.
ಆಚಾರ್ಯ ಮಧ್ವರ ಮಹಿಮೆಗಳಿಗೆ ಮಿತಿಯೇ ಇಲ್ಲ. ಅವರು ಸಾಕ್ಷಾತ್ ಹನುಮ-ಭೀಮರ ಅವತಾರ ಎಂಬುದು ಅನೇಕ ನಿದರ್ಶನಗಳಿಂದ ಸಾಬೀತಾಗಿದೆ ಎಂದರು.
ದಿನನಿತ್ಯದ ಆಚರಣೆಗಳಾದ ಸ್ನಾನ-ಪೂಜೆ ಇತ್ಯಾದಿಗಳಿಗೆ ಸಮಯ ನಿಗದಿಯಾಗಿದೆ. ಆದರೆ ಜ್ಞಾನಕಾರ್ಯವಾದ ಪಾಠ- ಪ್ರವಚನಗಳಿಗೆ ಯಾವ ಮಿತಿಗಳೂ ಇಲ್ಲ. ಮಧ್ಯರಾತ್ರಿಯೂ ಅಧ್ಯಯನ-ಅಧ್ಯಾಪನಗಳನ್ನು ನಡೆಸಬಹುದು. ಆ ಮೂಲಕ ಜ್ಞಾನ ಸಂಪಾದನೆಗೆ ಜೀವನದ ಬಹುತೇಕ ಸಮಯವನ್ನು ಮೀಸಲಿಟ್ಟು ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂಬುದನ್ನು ಮಧ್ವಾಚಾರ್ಯರು ಲೋಕಕ್ಕೆ ತೋರಿಸಿಕೊಟ್ಟರು ಎಂದು ಅವರು ಹೇಳಿದರು.
ಕಲಿಗಾಲದಲ್ಲಿ ವೇದ- ಶಾಸ್ತçಗಳನ್ನು ಕಡೆಗಣಿಸುವುದು ಹೆಚ್ಚಾದ ಕಾರಣ ಆಚಾರ್ಯ ಮಧ್ವರು ಸೂಕ್ತವಾದ ಜ್ಞಾನವನ್ನು ಹರಡಲು
ಸಂಕಲ್ಪಿಸಿದರು. ಸಜ್ಜನರಿಗೆ ಆನಂದವನ್ನೇ ಕೊಡಬೇಕು. ಜ್ಞಾನ ವಿಕಾಸವಾಗಬೇಕು, ಅದು ಭಗವಾನ್ ಶ್ರೀ ವೇದವ್ಯಾಸರಿಗೂ ಸಮ್ಮತ ಆಗಬೇಕು ಎಂಬುದು ಆಚಾರ್ಯರ ಮಹತ್ತರ ಉದ್ದೇಶವಾಗಿತ್ತು. ಹಾಗಾಗಿಯೇ ಅವರು ಮಹಾಭಾರತಕ್ಕೆ ತಾತ್ಪರ್ಯ ನಿರ್ಣಯ ಇತ್ಯಾದಿ 47 ಗ್ರಂಥ ರಚಿಸಿ ವೇದಾಂತ ಲೋಕಕ್ಕೆ ಹೊಸ ಬೆಳಕು ಚೆಲ್ಲಿದರು ಎಂದು ಶ್ರೀ ವಿದ್ಯೇಶತೀರ್ಥರು ಹೇಳಿದರು.
ಗಂಗಾ ಸನ್ನಿಧಾನ:
ಆಚಾರ್ಯ ಮಧ್ವರು ಮತ್ತು ಮಧ್ವ ಸಿದ್ಧಾಂತ ಇದ್ದಲ್ಲಿ ಪವಿತ್ರವಾದ ಗಂಗೆಯ ಸನ್ನಿಧಾನ ಇರುತ್ತದೆ. ಹಸ್ತಿನಾಪುರದಲ್ಲಿ ಚಾತುರ್ಮಾಸ್ಯ ವ್ರತಾಚರಣೆ ಮಾಡುವಾಗ ಇದನ್ನು ಸಾಕ್ಷಾತ್ ಆಚಾರ್ಯರೇ ತೋರಿಸಿಕೊಟ್ಟ ನಿದರ್ಶನವಿದೆ. ಹಾಗಾಗಿ ನಾವೆಲ್ಲರೂ ಪವಿತ್ರ ಗಂಗೆಯಂತಿರುವ ಮಧ್ವಶಾಸ್ತ್ರವನ್ನು ನಂಬಿ, ಅನುಸರಿಸಿ ಬದುಕಬೇಕು ಎಂದು ಸ್ವಾಮೀಜಿ ಕರೆ ನೀಡಿದರು.
ಬದುಕಿನಲ್ಲಿ ಮೌಲ್ಯ ಮತ್ತು ಮೋಕ್ಷ ಗಳಿಸಲು ಇರುವ ಏಕೈಕ ಮಾರ್ಗ ಎಂದರೆ ಅದು ಶ್ರೀ ಮಧ್ವಾಚಾರ್ಯರ ಗ್ರಂಥಗಳ ನಿರಂತರ ಅಧ್ಯಯನ ಎಂದು ಪ್ರತಿಪಾದಿಸಿದ ಶ್ರೀ ವಿದ್ಯೇಶ ತೀರ್ಥರು, ಗುರುಮಹಿಮೆ ತಿಳಿದರೆ ಮಾನವ ಜನ್ಮ ಸಾರ್ಥಕ ಎಂದರು.
ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ವಿರಚಿತ ಗೀತೆಗಳನ್ನು ಗಾಯಕಿ ದೀಪಿಕಾ ಪಾಂಡುರAಗಿ ಹಾಡಿ ರಂಜಿಸಿದರು.
ಗುರು ವಿಜಯ ಗೀತೆ
ಚಾಮರಾಜ ಜೋಡಿ ರಸ್ತೆಯ ವೆಂಕಟಾಚಲ ಧಾಮದಲ್ಲಿ ಭಂಡಾರಕೇರಿ ಮಠ ಆಯೋಜಿಸಿದ್ದ ಗುರುವಿಜಯ ಗೀತೆ- ಗಾಯನ ಮತ್ತು ಪ್ರವಚನ ಕಾರ್ಯಕ್ರಮದಲ್ಲಿ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ದೀಪಿಕಾ ಪಾಂಡುರAಗಿ ಅವರು ವಿದ್ಯೇಶತೀರ್ಥರ ಕೃತಿಗಳನ್ನು ಹಾಡಿ ರಂಜಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post