ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕರಾಟೆ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ಮಲೆನಾಡು ಓಪನ್ ಕರಾಟೆ ಪಂದ್ಯಾವಳಿಯನ್ನು ಶಿವಮೊಗ್ಗ ಆಡಿಷನಲ್ ಎಸ್‌ಪಿ ಅನಿಲ್ ಕುಮಾರ್ ಬೂಮರೆಡ್ಡಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾವೂ ಸಹ ಕರಾಟೆಪಟುವಾಗಿದ್ದು ತಮ್ಮಬಾಲ್ಯದ ದಿನಗಳಲ್ಲಿ ಗದಗದಲ್ಲಿ ಅಭ್ಯಾಸ ಮಾಡಿದ ಬಗ್ಗೆ ಹಾಗೂ ತಮ್ಮ ಗುರುಗಳ ಜೊತೆಗಿನ ಒಡನಾಟದ ನೆನಪುಗಳನ್ನು ಮೆಲಕು ಹಾಕಿದರು.
ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಕರಾಟೆ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಶಿವಮೊಗ್ಗ ವಿನೋದ್ ಸೇರಿದಂತೆ ಪದಾಧಿಕಾರಿಗಳಾದ ರಾಘವೇಂದ್ರ, ಸಚಿನ್, ನರಸಿಂಹಸ್ವಾಮಿ, ಜಸ್ಟಿನ್, ಸೈಯದ್ ರಿಯಾಜ್ ಆರಿಫ್, ಪಂಚಪ್ಪ, ಶ್ರೇಯಸ್, ಹರ್ಷಿತ್, ವೆಂಕಟೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
Also read: ಭದ್ರಾವತಿ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ಬ್ರಹ್ಮರಥೋತ್ಸವ ಸಂಭ್ರಮ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















