ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಶಿಕಾರಿಪುರದಲ್ಲಿ ಬಿಜೆಪಿ ಶಾಸಕರು ಮತ್ತು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ BYVijayendra ಗೆಲ್ಲದಂತೆ ವಾಮಾಚಾರ ನಡೆಸಲಾಗಿದೆ ಎಂದು ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಿಕಾರಿಪುರ ತಾಲೂಕಿನ ಬಂಡಿಬೈರನಹಳ್ಳಿ ಮಜಿರೆ ಸಿದ್ದಾಪುರ ಗ್ರಾಮದಲ್ಲಿರುವ ಸರ್ವೆನಂಬರ್ 36 ರಲ್ಲಿರುವ ಯಡಿಯೂರಪ್ಪನವರ ಅಡಿಕೆ ತೋಟದಲ್ಲಿ ಕಾಡು ಪ್ರಾಣಿಯನ್ನ ಕೊಂದು ವಾಮಾಚಾರ ನಡೆಸಲಾಗಿದೆ ಎಂದು ತೋಟ ನೋಡಿಕೊಳ್ಳುವ ಎಸ್. ಕೆ. ರಮೇಶ್ ದೂರು ದಾಖಲಿಸಿದ್ದಾರೆ.

Also read: ಪಿಇಎಸ್ ಕಾಲೇಜಿನಲ್ಲಿ ಒಂದು ದಿನದ ರಾಷ್ಟ್ರಮಟ್ಟದ ಸಮ್ಮೇಳನ ಸಂಪನ್ನ
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ BYRaghavendra ಅವರು ಸಹ ಸ್ಪಷ್ಟನೆ ನೀಡಿದ್ದು, ಪುನುಗು ಬೆಕ್ಕನ್ನ ಹೂತು ಹಾಕಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಕೊಳ್ಳೆಗಾಲದಂತಹ ಭಾಗಗಳಲ್ಲಿ ಈ ಬೆಕ್ಕುಗಳು ಪತ್ತೆಯಾಗಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post