ಕಲ್ಪ ಮೀಡಿಯಾ ಹೌಸ್ | ಸೊರಬ |
ಪಟ್ಟಣದ ದಂಡಾವತೀ ನದೀ ತಟದಲ್ಲಿರುವ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಹಾಗೂ ವರುಣನ ಕೃಪೆಗಾಗಿ ಪ್ರಾರ್ಥಿಸಿ ಪರ್ಜನ್ಯ ನಡೆಯಿತು.
ಪರ್ಜನ್ಯ ಎಲ್ಲಾ ಈಶ್ವರ ದೇವಸ್ಥಾನದಲ್ಲಿಯೂ ಮಾಡಲು ಬರುವುದಿಲ್ಲ. ದೇವಸ್ಥಾನ ನದೀ ತಟದಲ್ಲಿ ಇರಬೇಕು. ದೇವಸ್ಥಾನದ ಹೊಸಿಲಿಗಿಂತ ಕೆಳಗೆ ಈಶ್ವರ ಲಿಂಗ ಇರಬೇಕು. ಆಗ ಮಾತ್ರ ಹೊಸ್ತಿಲವರೆಗೆ ನೀರು ನಿಲ್ಲಿಸುವ ಮೂಲಕ ಈಶ್ವರ ಲಿಂಗವನ್ನು ನೀರಿನಲ್ಲಿ ಮುಳುಗಿಸಲಾಗುತ್ತದೆ. ಆಗ ಪರಮೇಶ್ವರನು ಸಂಪ್ರೀತನಾಗಿ ಜನರ ಅಪೇಕ್ಷೆ ಈಡೇರಿಸುತ್ತಾನೆ ಎಂಬ ಪ್ರತೀತಿ ಇದೆ. ಈ ನಿಮಿತ್ತ ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ಪರ್ಜನ್ಯ ಮಾಡುವ ವಾಡಿಕೆ ಇದೆ ಎಂದು ಪಟ್ಟಣದ ಶ್ರೀ ರಾಮಚಂದ್ರ ದೇವಸ್ಥಾನದ ಅರ್ಚಕ ಶ್ರೀ ಸತ್ಯನಾರಾಣ ತಿಳಿಸಿದರು.

Also read: ಶಿವಮೊಗ್ಗ-ಬೆಂಗಳೂರು ನಡುವೆ ಒಂದೇ ಭಾರತ ರೈಲು ಸೇವೆ ಆರಂಭಿಸುವಂತೆ ಸಂಸದ ರಾಘವೇಂದ್ರ ಒತ್ತಾಯ










Discussion about this post