ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಮಿತಿಮೀರಿದ ರಾಸಾಯನಿಕ ಔಷಧಿ ಮತ್ತು ಗೊಬ್ಬರಗಳ ಬಳಕೆಯಿಂದಾಗಿ ಪ್ರತಿನಿತ್ಯ ತರಕಾರಿ ಪದಾರ್ಥಗಳಲ್ಲಿ ವಿಷಕಾರಕ ವಸ್ತುಗಳು ಹೆಚ್ಚಾಗುತ್ತಿದ್ದು, ಈ ಬಗೆಗೆ ಗಂಭೀರವಾದ ಚಿಂತನೆ ನಡೆಸುವ ತುರ್ತು ಅಗತ್ಯವಿದೆ ಎಂದು ಶಿರಸಿಯ ಪ್ರಾಧ್ಯಾಪಕ ಮತ್ತು ಪರಿಸರ ಪರ ಸಂಶೋಧಕ ಅಮಿತ್ ಹೆಗಡೆಯವರು ಅಭಿಪ್ರಾಯಿಸಿದರು.
ಭದ್ರಾವತಿಯ ಸರ್. ಎಂ.ವಿ. ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಸಹ್ಯಾದ್ರಿ ಪರ್ವತ ಶ್ರೇಣಿಯ ಅರಣ್ಯಗಳಲ್ಲಿ ವಾಸಿಸುತ್ತಿರುವ ವಿವಿಧ ತಳಿಯ ಕಪ್ಪೆಗಳ ಜೀವನ ಕ್ರಮ ವೈಶಿಷ್ಟ್ಯತೆಯ ಬಗ್ಗೆ ತಾವು ಸಂಶೋಧಿಸಿ ಸಿದ್ಧಪಡಿಸಿದ ಕಪ್ಪೆ ಹೇಳುವ ಕಥೆಗಳು ಸಾಕ್ಷ್ಯಚಿತ್ರಗಳನ್ನು ಈ ಸಂದರ್ಭದಲ್ಲಿ ಅವರು ಪ್ರದರ್ಶಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಮೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ಲಾಸ್ಟಿಕನ್ನು ಅತಿಯಾದ ಬಳಕೆಯ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಿದೆ. ನಿತ್ಯದ ಬಳಕೆಯಲ್ಲಿ ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದರ ಮೂಲಕ ಪರಿಸರವನ್ನು ಸಂರಕ್ಷಿಸುವ ಕಡೆಗೆ ಎಲ್ಲರೂ ಗಮನವಹಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಐಕ್ಯೂಎಸಿ ವಿಭಾಗದ ಸಂಚಾಲಕ ಡಾ. ಜಿ.ಎಸ್. ಸಿದ್ದೇಗೌಡ, ಎನ್‌ಎಸ್‌ಎಸ್ ಅಧಿಕಾರಿ ಡಾ. ಅರಸಯ್ಯ, ಪ್ರಾಧ್ಯಾಪಕ ಪ್ರೊ. ರಘುನಾಥ್ ಸ್ವಾಗತಿಸಿದರು. ಪ್ರೊ. ವಸಂತಕುಮಾರ್ ಪ್ರಾಸ್ತಾವಿಕ ಮಾತನಾಡಿ, ಅತಿಥಿಗಳನ್ನು ಪರಿಚಯಿಸಿದರು. ಸಾಗರ್ ಪ್ರಾರ್ಥಿಸಿದರು. ಡಾ. ಅರಸಯ್ಯ ವಂದಿಸಿ, ರುಕಯ್ಯ ನಿರೂಪಿಸಿದರು.
ರೋವರ್ಸ್ ಘಟಕದ ಡಾ. ಶಿಲ್ಪಾ, ರೇಂಜರ್ಸ್ ಘಟಕದ ಅಧಿಕಾರಿ ಮೊಹಮದ್ ಅಜ್ಮಲ್, ಅಧ್ಯಾಪಕರುಗಳಾದ ದೀಪಿಕಾ, ಪ್ರವೀಣ್ ಮೊದಲಾದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post