ಕಲ್ಪ ಮೀಡಿಯಾ ಹೌಸ್ | ವಿಜಯವಾಡ(ಆಂಧ್ರಪ್ರದೇಶ) |
ಕಳೆದ 40 ವರ್ಷಗಳಿಂದ ಸರಿಸಾಟಿಯಿಲ್ಲದ ಬ್ರಾಂಡ್ ಆಗಿ ಹೊರಹೊಮ್ಮಿರುವ ರಾಮರಾಜ್ ಕಾಟನ್ #RamRajCotton ತನ್ನ ಸಾಂಸ್ಕೃತಿಕ, ಪಾರಂಪರಿಕ ಪಯಣದಲ್ಲಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ.
ಹೌದು…ದೇಸಿ ಸಂಸ್ಕೃತಿ, ಅತ್ಯುತ್ತಮ ಗುಣಮಟ್ಟದ ಮತ್ತು ವಿಶ್ವಾಸಾರ್ಹದ ಮೂಲಕ ದಕ್ಷಿಣ ಭಾರತದಾದ್ಯಂತ ಮನೆಮಾತಾಗಿರುವ ಬ್ರಾಂಡ್ ಎನಿಸಿರುವ ರಾಮರಾಜ್ ಕಾಟನ್ ಈಗ ತನ್ನ 250ನೆಯ ಶೋ ರೂಂ ಅನ್ನು ಆಂಧ್ರಪ್ರದೇಶದ ವಿಜಯವಾಡದಲ್ಲಿ ಜೂನ್ 11ರ ನಾಳೆ ಆರಂಭವಾಗಲಿದೆ. ತೆಲುಗಿನ ವರ್ಚಸ್ವಿ ಹಾಗೂ ಸ್ಟೈಲಿಶ್ ನಟ ವಿಕ್ಟರಿ ವೆಂಕಟೇಶ್ #ActorVenkatesh ನೂತನ ಮಳಿಗೆಯನ್ನು ಉದ್ಘಾಟಿಸಲಿದ್ದು, ಈ ಮೂಲಕ ಹೊಸ ಇತಿಹಾಸವನ್ನು ಬರೆಯಲಿದೆ.
ದಕ್ಷಿಣ ಭಾರತದಾದ್ಯಂತ ಮನೆ ಮಾತಾಗಿರುವ ರಾಮರಾಜ್ ಬ್ರಾಂಡ್, ಧೋತಿಗಳ #Dothi ಬಗ್ಗೆ ಇದ್ದ ಗ್ರಹಿಕೆಯನ್ನು ಬದಲಾಯಿಸಿದ್ದಲ್ಲದೇ ಅದಕ್ಕೊಂದು ಹೊಸ ರೂಪಕೊಟ್ಟು ಮೌಲ್ಯವನ್ನು ಅಸಾಧಾರಣ ಎತ್ತರಕ್ಕೆ ಏರಿಸಿದೆ. ಅದರಲ್ಲೂ ವಿಶೇಷವಾಗಿ ಯುವಕರು ಇಷ್ಟಪಡುವ ಸ್ಟೈಲ್ ಟೆಂಡ್ ಆಗಿಸಿದೆ. ಹಿರಿಮೆ-ಗರಿಮೆಯನ್ನು ಹೊಂದಿರುವ ರಾಮರಾಜ್ ಕಾಟನ್ ಇತ್ತೀಚೆಗೆ 40ನೆಯ ವಾರ್ಷಿಕೋತ್ಸವದ ಸಂಭ್ರಮವನ್ನು ಮುಟ್ಟಿದೆ. ದೇಶದಾದ್ಯಂತ 250 ಕಂಪೆನಿ ಮಾಲಿಕತ್ವದ ಮಳಿಗೆಗಳನ್ನು ಹೊಂದಿರುವ ಕೆಲವೇ ಬ್ರಾಂಡ್ ರಾಮರಾಜ್ ಕಾಟನ್ #RamRajCotton ಕೂಡಾ ಇಂದು ಗುರುತಿಸಿಕೊಳ್ಳುವ ಮೂಲಕ ಹೊಸ ಇತಿಹಾಸ ಬರೆದಿದೆ.
ರಾಮರಾಜ್ ನಡೆದುಬಂದ ಹಾದಿ
ಅಪ್ಪಟ ದೇಶಿ ಚಿಂತನೆಯೊಂದಿಗೆ ಸ್ವದೇಶಿ ಬ್ರಾಂಡ್ 1983ರಲ್ಲಿ ತನ್ನ ಪಯಣ ಆರಂಭಿಸಿತು. ಸಂಸ್ಕೃತಿ ಸಂಪ್ರದಾಯ, ನಾವೀನ್ಯತೆ ಮತ್ತು ಥರಹೇವಾರಿ ಉತ್ಪನ್ನಗಳ ಸಮ್ಮಿಳಿತದೊಂದಿಗೆ ಜವಳಿ ಉದ್ಯಮಕ್ಕೊಂದು ಹೊಸ ರೂಪ ಕೊಟ್ಟಿದೆ. ದಕ್ಷಿಣ ಭಾರತದಲ್ಲಿ ಧೋತಿ, ಶರ್ಟ್, ಇನ್ನರ್ ವೇರ್(ಒಳ ಉಡುಪು), ನೀಟ್ ವೇರ್, ಫ್ಯಾಬ್ರಿಕ್ಸ್, ಕಿಡ್ಸ್ ಮತ್ತು ವುಮೆನ್ಸ್ ವೇರ್’ನ ಅತಿದೊಡ್ಡ ತಯಾರಕ, ಪೂರೈಕೆದಾರ ಮತ್ತು ರಫ್ತುದಾರರಲ್ಲಿ ಒಂದೆನಿಸಿಕೊಂಡಿರುವ ರಾಮರಾಜ್ ಜವಳಿ ಉದ್ಯಮದಲ್ಲಿ ಅತ್ಯುನ್ನತ ಮಾನದಂಡವನ್ನು ಹುಟ್ಟುಹಾಕಿದೆ. ಸಾಂಪ್ರದಾಯಿಕ ಧೋತಿಗಳನ್ನು ಉತ್ಪಾದಿಸುತ್ತಿದೆ. ಅಲ್ಲದೇ, ಸ್ಥಳೀಯ ಅಪ್ಪಟ ಸಂಸ್ಕೃತಿ ಮತ್ತು ಜನರ ಉಡುಗೆಗಳನ್ನು ಉತ್ತೇಜಿಸುವ ಅತಿದೊಡ್ಡ ಬ್ರಾಂಡ್ ಆಗಿದೆ. ರಾಮರಾಜ್ ಕಾಟನ್, ಕಾಲಾನುಕ್ರಮದಲ್ಲಿ ಅನೇಕ ಪುರಸ್ಕಾರಗಳನ್ನು ಹಾಗೂ ಲಕ್ಷಾಂತರ ಗ್ರಾಹಕರ ಹೃದಯ ಗೆದ್ದಿದೆ.
ವರ್ಷಗಳು ಕಳೆದಂತೆ, ರಾಮರಾಜ್ ಕೇವಲ ಜನರ ಸಾಮಾನ್ಯ ಉಡುಪುಗಳಿಗಷ್ಟೇ ಅಲ್ಲದೇ, ಹೆಚ್ಚು ಆದ್ಯತೆಯ ಬ್ರಾಂಡ್ ಆಗಿಯೂ ಗಮನ ಸೆಳೆದಿದೆ. ಸಾಂಪ್ರದಾಯಿಕ ಧೋತಿಗಳನ್ನು ತಯಾರಿಸುವಲ್ಲಿ ಮುಂಚೂಣಿ ಸಂಸ್ಥೆ ಎನಿಸಿಕೊಂಡಿರುವ ರಾಮರಾಜ್ ಕಾಟನ್ ಇಂದು ವೈವಿಧ್ಯಮಯ ಉತ್ಪನ್ನಗಳ ಸಂಗ್ರಹ ಹೊಂದಿದೆ. ರಾಮರಾಜ್ ಮಳಿಗೆಯು ಪ್ರತಿದಿನ ಧರಿಸುವ ಕಾಟನ್ ಧೋತಿಗಳಿಂದ ಉತ್ಪನ್ನಗಳ ಸಂಗ್ರಹ ಹೊಂದಿದೆ. ರಾಮರಾಜ್ ಮಳಿಗೆಯು ಪ್ರತಿದಿನ ಧರಿಸುವ ಕಾಟನ್ ಧೋತಿಗಳಿಂದ ಹಿಡಿದು ಪ್ರೀಮಿಯಂ ರೇಷ್ಮೆ #Silk ಧೋತಿಗಳು, ಕಾಟನ್, ಲೆನಿನ್ #Lenin ಮತ್ತು ಶುದ್ಧ ರೇಷ್ಮೆ ಶರ್ಟ್’ಗಳು ಹಾಗೂ ಎಲ್ಲಾ ವಯಸ್ಸಿನವರ ಅಗತ್ಯಕ್ಕೆ ತಕ್ಕ ಕುರ್ತಾಗಳು, ಪುರುಷರು ಮತ್ತು ಮಹಿಳೆಯರಿಗೆ ಒಳ ಉಡುಪುಗಳು ಹೀಗೆ ವೈವಿಧ್ಯಮಯ ಉತ್ಪನ್ನಗಳ ಆಗರವೆನಿಸಿದೆ. 20ಕ್ಕೂ ಹೆಚ್ಚು ಬ್ರಾಂಡ್ ವಿಸ್ತರಣೆಗಳೊಂದಿಗೆ ಬಾತ್ ಟವೆಲ್ ಸೇರಿದಂತೆ ಬಾತ್ರೂಮ್ ಪರಿಕರಗಳೂ ಸಿಗುತ್ತವೆ.
ವಿನಮ್ರ ಭಾವದೊಂದಿಗೆ ಶುರುವಾದ ರಾಮರಾಜ್ ಕಾಟನ್ ಸಂಸ್ಥೆಯು ತಳಮಟ್ಟದ ಶ್ರಮದ ಮೂಲಕ ಇಂದಿನ ಕ್ರಿಯಾತ್ಮಕ ಮತ್ತು ಸ್ಪಧಾತ್ಮಕ ವ್ಯವಸ್ಥೆಯಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿದೆ. ಸರಿಸಟಿಯಿಲ್ಲದ ಪ್ರಬಲ ಬ್ರಾಂಡ್ ಆಗಿದೆ. ಇದೆಲ್ಲವೂ ಸಾಧ್ಯವಾಗಿಸಿದ್ದು, ದೂರದೃಷ್ಠಿಯುಳ್ಳ ಶ್ರೀಯುತ ಕೆ.ಆರ್. ನಾಗರಾಜನ್ ಅವರ ಕನಸುಗಳು ಮತ್ತು ಸಾಧಿಸಬೇಕೆಂಬ ಅದಮ್ಯ ಆಕಾಂಕ್ಷೆ. ಅವರು ಯುಶಸ್ವಿ ಉದ್ಯಮಿ ಮಾತ್ರವಲ್ಲ, ಭಾರತದ ಮೊಟ್ಟಮೊದಲ `ಸಾಂಸ್ಕೃತಿಕ ಉದ್ಯಮಿ’. ಎಲ್ಲ ಬ್ರಾಂಡ್’ಗಳಂತೆ ರಾಮರಾಜ್ ಕಾಟನ್ ಕೂಡ ಕೇವಲ ಹೆಸರು, ಖ್ಯಾತಿ ಮತ್ತು ವ್ಯವಹಾರವಷ್ಟೇ ಅಲ್ಲದೇ ಅದಕ್ಕೂ ಮೀರಿದ ದೂರದೃಷ್ಠಿ ಮತ್ತು ಪ್ರಯತ್ನಗಳೊಂದಿಗೆ ತನ್ನ ಪ್ರಯಾಣ ಆರಂಭಿಸಿತು. ನೇಕಾರರು #weaver ಮತ್ತು ಅವರ ಕುಟುಂಬಗಳ ಯೋಗಕ್ಷೇಮ ಮತ್ತು ಉನ್ನತಿಯನ್ನು ಸದಾ ಬಯಸಿದೆ. 4 ದಶಕಗಳ ಸುದೀರ್ಘ ಪಯಣದ ನಂತರವೂ ಸಂಸ್ಥೆಯು 50,000ಕ್ಕೂ ಅಧಿಕ ನೇಕಾರ ಕುಟುಂಬಗಳ ಹಿತಾಸಕ್ತಿಗಳನ್ನು ರಕ್ಷಿಸುವ ಮೂಲಕ ಎತ್ತರಕ್ಕೇರಿದೆ. ರಾಮರಾಜ್ ಸಂಸ್ಥೆಯು, ದಕ್ಷಿಣ ಭಾರತದಾದ್ಯಂತ 15,000ಕ್ಕೂ ಹೆಚ್ಚು ಕುಟುಂಬಗಳಿಗೆ ಉದ್ಯೋಗ ಅವಕಾಶಗಳನ್ನು ನೀಡಿದೆ.
ರಾಮರಾಜ್ ಬ್ರಾಂಡ್ ಖ್ಯಾತಿ ದಿನೇದಿನೇ ವೃದ್ಧಿಯಾಗಲು ನಂಬಿಕೆ ಮತ್ತು ಬೆಳವಣಿಗೆಯ ಬಲವಾದ ನೆಟ್ ವರ್ಕ್ ಪ್ರಮುಖ ಕಾರಣವಾಗಿದೆ. ದಕ್ಷಿಣ ಭಾರತದ ಮಾರುಕಟ್ಟೆಗಳಲ್ಲಿ ಬಲವಾದ ಹೆಜ್ಜೆಗುರುತನ್ನು ಹೊಂದಿರುವ ಈ ಬ್ರಾಂಡ್ ನೇರವಾಗಿ ಮತ್ತು ಕಂಪನಿಯು ದಕ್ಷಿಣ ಭಾರತದ ರಾಜ್ಯಗಳ ಹೆಚ್ಚಿನ ನಗರಗಳು ಮತ್ತು ಉಪನಗರಗಳಲ್ಲಿ ಮಳಿಗೆಗಳು ಮತ್ತು ಶೋರೂಂಗಳೊಂದಿಗೆ 250 ವಿಶೇಷ ಬ್ರಾಂಡ್ ರೀಟೇಲ್ ಔಟ್ ಲೆಟ್’ಗಳನ್ನು ನಿರ್ವಹಿಸುತ್ತದೆ. ಧೋತಿ ಮತ್ತು ಜನರಲ್ಲಿ ಸಾಂಪ್ರದಾಯಿಕ ಉಡುಪುಗಳ ಬಗೆಗಿರುವ ಸದಭಿರುಚಿಯ ಸಂಸ್ಕೃತಿಯನ್ನು ಉತ್ತೇಜಿಸುವ ಮತ್ತು ಪರಿಸರ ಸ್ನೇಹಿ ಕ್ರಮಗಳ ಅಳವಡಿಕೆ ಮೂಲಕ ರಾಮರಾಜ್ ದಕ್ಷಿಣ ಭಾರತದಾದ್ಯಂತ ಸಾವಿರಾರು ಜನರಿಗೆ ಉದ್ಯೋಗವಕಾಶಗಳನ್ನು ಒದಗಿಸಿದ್ದು, ಶ್ವೇತವರ್ಣದ ವೀರ ಯೋಧನಂತೆ ಕಂಗೊಳಿಸುತ್ತಿದೆ.
ದೂರದೃಷ್ಠಿಯುಳ್ಳ ಉದ್ಯಮಿ ಹಾಗೂ ಸಂಸ್ಥಾಪಕರೂ ಆಗಿರುವ ಅಧ್ಯಕ್ಷ ಶ್ರೀಯುತ ಕೆ.ಆರ್. ನಾಗರಾಜನ್ ಅವರ ಆಶ್ರಯದಲ್ಲಿ ಬೆಳೆದುಬಂದ ರಾಮರಾಜ್ ಕಾಟನ್’ನ ಈ ಯಶಸ್ಸಿನ ಹಿಂದೆ 4 ದಶಕಗಳ ಅಚಲ ಸಮರ್ಪಣೆ ಮತ್ತು ಸರಿಸಾಟಿಯಿಲ್ಲದ ಬದ್ದತೆ ಮತ್ತು ಮಾರುಕಟ್ಟೆ ನೈಪುಣ್ಯತೆಯ ಶ್ರಮವಿದೆ. ಸಿಬ್ಬಂದಿಯ ಅಚಲ ಬೆಂಬಲದಿಂದ ಈ ಮಟ್ಟಿಗೆ ಬೆಳೆದುಬಂದಿರುವ ರಾಮರಾಜ್ ಕಾಟನ್ ವಿಜಯವಾಡದಲ್ಲಿ ಹೆಗ್ಗುರುತಿನ 250ನೆಯ ಶೋರೂಂ ಉದ್ಘಾಟನೆಯೊಂದಿಗೆ ಇತಿಹಾಸ ಬರೆದಿದೆ. ದೇಸಿ ಸೊಗಡಿನ ಸಂಸ್ಕೃತಿಯನ್ನು ಉತ್ತೇಜಿಸುತ್ತಿರುವ ಮತ್ತು ತನ್ನ ಎಲ್ಲಾ ಉತ್ಪನ್ನಗಳಲ್ಲಿ ಸಂಪ್ರದಾಯವನ್ನು ಮಿಳಿತಗೊಳಿಸುತ್ತಿರುವ ರಾಮರಾಜ್ ಬ್ರಾಂಡ್ ಪಯಣದಲ್ಲಿ ಇದೊಂದು ಐತಿಹಾಸಿಕ ಕ್ಷಣವಾಗಿದೆ. ಹೆಮ್ಮೆಯ 250ನೆಯ ಮಳಿಗೆಯನ್ನು ನಟ ವಿಕ್ಟರಿ ವೆಂಕಟೇಶ್ ಅವರು ಉದ್ಘಾಟಿಸುತ್ತಿರುವುದು ವಿಶೇಷ. ಬಹುಮುಖ ಪ್ರತಿಭೆಯ ವೆಂಕಟೇಶ್ ಅವರು ವಿಭಿನ್ನ ಪಾತ್ರಗಳ ಮೂಲಕ ಹೆಸರು ಮಾಡಿದವರು. ಇವರು ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ರಾಮರಾಜ್ ಧೋತಿ ಮತ್ತು ಶರ್ಟ್’ಗಳ ಬ್ರಾಂಡ್ ಅಂಬಾಸಿಡರ್.
ಈ ಸಾಧನೆಯ ಮೈಲುಗಲ್ಲು ರಾಮರಾಜ್ ಕಾಟನ್’ನ ಭವಿಷ್ಯವನ್ನು ಇನ್ನಷ್ಟು ಭರವಸೆದಾಯಕವಾಗಿಸಿದೆ. ದಕ್ಷಿಣ ಭಾರತದಲ್ಲಿ ಈ ಬ್ರಾಂಡ್, ಮುಂಚೂಣಿ ನಾಯಕನಾಗಿ ಹೊರಹೊಮ್ಮಿದೆ. ಈತ ತನ್ನ ವೈವಿಧ್ಯಮಯ ಅಸಾಧಾರಣ ಉತ್ಪನ್ನಗಳೊಂದಿಗೆ ಪ್ಯಾನ್-ಇಂಡಿಯಾ ಉಪಸ್ಥಿತಿಯ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಉತ್ಪಾದನೆ ಹೆಚ್ಚಳ, ತಂತ್ರಜ್ಞಾನದಲ್ಲಿ ಸುಧಾರಣೆ, ನಿರಂತರವಾದ ಮಾರಾಟ ಜಾಲ ವಿಸ್ತರಣೆ, ಜಾಹೀರಾತು ನೀಡುವಿಕೆ ಹೀಗೆ ಎಲ್ಲ ಬಗೆಯಲ್ಲೂ ಸಂಸ್ಥೆಯು ತನ್ನ ಪ್ರಯತ್ನಗಳನ್ನು ಮುಂದುವರೆಸಿದೆ. ಇಂದಿನ ಕ್ರಿಯಾತ್ಮಕ ಮಾರುಕಟ್ಟೆಗೆ ಸೂಕ್ತವಾದ ದೃಷ್ಠಿಕೋನದೊಂದಿಗೆ ದೇಶದಾದ್ಯಂತ ಗ್ರಾಹಕರನ್ನು ಸೆಳೆದು ಅವರ ಅಗತ್ಯಗಳನ್ನು ಪೂರೈಸಲು ಇರುವ ಯಾವುದೇ ಅವಕಾಶವನ್ನು ರಾಮರಾಜ್ ಕಾಟನ್ ಮಿಸ್ ಮಾಡಿಕೊಳ್ಳುವುದಿಲ್ಲ. ಮಾರುಕಟ್ಟೆಯಲ್ಲಿ ಅಧಿಪತ್ಯ ಸ್ಥಾಪಿಸಲು ಮತ್ತು ವಿಜಯದ ಹೊಸ ಪುಟಗಳನ್ನು ತೆರೆಯಲು ಸಜ್ಜಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post