No Result
View All Result
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ
English Articles

Shivamogga SIR | District Achieves 81% e-Form Distribution

by kalpa News
July 8, 2026
0

Kalpa Media House  | Shivamogga | As part of the Election Commission of India’s statewide Special Summary Revision of the...

Read moreDetails
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
Culture & Tradition Shine as Rudraksham Marks Milestone Achievement

Culture & Tradition Shine as Rudraksham Marks Milestone Achievement

July 8, 2026
MEIL Completes Historic Largest Concrete Pour for PHWR at Kaiga

MEIL Completes Historic Largest Concrete Pour for PHWR at Kaiga

July 6, 2026
SPARSH RR Nagar Launches 5 Plastic Surgery Clinics of Excellence

SPARSH RR Nagar Launches 5 Plastic Surgery Clinics of Excellence

July 4, 2026
  • Advertise With Us
  • Grievances
  • About Us
  • Contact Us
Wednesday, July 8, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ನಾಲ್ಕು ತಲೆಮಾರಿನ ಕಾಂಗ್ರೆಸ್ ಆಡಳಿತಕ್ಕಿಂತ, ಮೋದಿಯವರ ಒಂಬತ್ತು ವರ್ಷಗಳ ಆಡಳಿತ ಬಡವರಿಗೆ ಹೆಚ್ಚಿನ ಒಳಿತನ್ನು ಮಾಡಿದೆ: ಅಮಿತ್ ಶಾ

kalpa News by kalpa News
June 12, 2023
in Special Articles
0
ನಾಲ್ಕು ತಲೆಮಾರಿನ ಕಾಂಗ್ರೆಸ್ ಆಡಳಿತಕ್ಕಿಂತ, ಮೋದಿಯವರ ಒಂಬತ್ತು ವರ್ಷಗಳ ಆಡಳಿತ ಬಡವರಿಗೆ ಹೆಚ್ಚಿನ ಒಳಿತನ್ನು ಮಾಡಿದೆ: ಅಮಿತ್ ಶಾ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ವಿಶೇಷ ಲೇಖನ  |

ಕೇಂದ್ರದ ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಬಡತನವನ್ನು ನಿವಾರಿಸುವಲ್ಲಿ ವಿಫಲವಾಗಿವೆ ಎಂದು ಕಟುವಾಗಿ ವಾಗ್ದಾಳಿ ನಡೆಸಿದ ಗೃಹ ಸಚಿವ ಅಮಿತ್ ಶಾ, Amith Shah ಕಳೆದ ಒಂಬತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಬಡವರಿಗೆ ಹಿಂದಿನ ನಾಲ್ಕು ತಲೆಮಾರಿನ ಕಾಂಗ್ರೆಸ್ ಆಡಳಿತಕ್ಕಿಂತ ಹೆಚ್ಚಿನ ಒಳಿತನ್ನು ಮಾಡಿದ್ದಾರೆ ಎಂದು ಶನಿವಾರ ಹೇಳಿದ್ದಾರೆ.

ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಒಂಬತ್ತು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಬಿಜೆಪಿಯ ಪ್ರಚಾರ ಕಾರ್ಯಕ್ರಮದ ಭಾಗವಾಗಿ ಮಹಾರಾಷ್ಟ್ರದ ನಾಂದೇಡ್‌ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಶಾ, ಗಾಂಧಿ ಕುಟುಂಬದ ಆಳ್ವಿಕೆಯಲ್ಲಿ ಬಡವರಿಗೆ ವಸತಿ ಘಟಕಗಳು, ಶೌಚಾಲಯಗಳು, ಅಡುಗೆ ಅನಿಲ ಮತ್ತು ಇತರ ಮೂಲಭೂತ ಅಗತ್ಯಗಳು ಬಹುಕಾಲದವರೆಗೆ ಕನಸಿನ ಮಾತಾಗಿತ್ತು. ಕಾಂಗ್ರೆಸ್ ಮಾತ್ರ ದೇಶದ ಬಡತನವನ್ನು ಮುದುವರೆಸುತ್ತಾ ಬಂತು.
“ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಳೆದ 9 ವರ್ಷಗಳು ಭಾರತದ ಹೆಮ್ಮೆಯ ವರ್ಷಗಳು, ಭಾರತದ ಅಭಿವೃದ್ಧಿ ಮತ್ತು ಭಾರತವು ಬಡವರ ಕಲ್ಯಾಣವನ್ನು ಖಾತ್ರಿಪಡಿಸಿದ ವರ್ಷಗಳು. ಸೋನಿಯಾ-ಮನಮೋಹನ್ ಆಳ್ವಿಕೆ ಕೊನೆಗೊಂಡ ನಂತರ, ಮೋದಿಯವರು ಅಧಿಕಾರ ವಹಿಸಿಕೊಂಡ ನಂತರ ಭಾರತವು ಪ್ರಗತಿ ಸಾಧಿಸಿತ್ತಾ ಅಭಿವೃದ್ಧಿ ಪಥದತ್ತ ಮುನ್ನೆಡೆಯಲು ಆರಂಭಿಸಿತು ಎಂದು ಶಾ ಹೇಳಿದರು.

10 ವರ್ಷಗಳ ಸೋನಿಯಾ-ಮನಮೋಹನ್ ಆಡಳಿತ ಅತ್ಯಂತ ಭ್ರಷ್ಟವಾಗಿತ್ತು. ಅವರ ಕಡಿವಾಣವಿಲ್ಲದ ಭ್ರಷ್ಟಾಚಾರ ಸುಮಾರು 12 ಲಕ್ಷ ಕೋಟಿ ರೂ. ದಾಟಿತ್ತು. ಮತ್ತೊಂದೆಡೆ, ಮೋದಿ ನೇತೃತ್ವದ ಕಳೆದ ಒಂಬತ್ತು ವರ್ಷಗಳಲ್ಲಿ ಪ್ರಸ್ತುತ ಆಡಳಿತದ ವಿರುದ್ಧ ಭ್ರಷ್ಟಾಚಾರದ ಆರೋಪವನ್ನು ಮಾಡುವ ಯಾವುದೇ ಸಂದರ್ಭ ಪ್ರತಿಪಕ್ಷಗಳಿಗೆ ದೊರಕಿಲ್ಲ.
ಮೋದಿಯವರ ಆಡಳಿತದಲ್ಲಿ, ಆರ್ಥಿಕತೆ, ಭದ್ರತೆ, ರಕ್ಷಣೆ, ತಂತ್ರಜ್ಞಾನ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಬಹುಮೂಲಾಗ್ರವಾಗಿ ಸುಧಾರಣೆ ಕಂಡುಬಂದಿದೆ. ಮೋದಿಯವರು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದು ಮಾತ್ರವಲ್ಲದೇ, ಅವರು ವಿಶ್ವದಾದ್ಯಂತ ಎಲ್ಲರೂ ಗೌರವಿಸುವ ವಿಶ್ವ ನಾಯಕರಾಗಿ ಹೊರಹೊಮ್ಮಿದ್ದಾರೆ.

ಮಾಜಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ತಮ್ಮ ಇತ್ತೀಚಿನ ಅಮೇರಿಕಾ ಭೇಟಿಯ ಸಂದರ್ಭದಲ್ಲಿ ನೀಡಿದ ಹೇಳಿಕೆಗಳ ಬಗ್ಗೆ ಮಾತನಾಡುತ್ತಾ, ದೇಶದ ಮರ್ಯಾದೆಯನ್ನು ಹೊರಗಡೆ ಹಾಳು ಮಾಡಿದ್ದಕ್ಕಾಗಿ ರಾಹುಲ್ ವಿರುದ್ಧ ಶಾ ತೀಕ್ಷ್ಣ ವಾಗ್ದಾಳಿ ನಡೆಸಿ, ಅವರ ಈ ನಿಂದನೀಯ ಕೃತ್ಯವನ್ನು ದೇಶವಾಸಿಗಳು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು. ನಾಂದೇಡ್ ಮತ್ತು ಮಹಾರಾಷ್ಟ್ರದ ಜನರು 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಪರವಾಗಿ 45 ಕ್ಕಿಂತ ಹೆಚ್ಚು ಸ್ಥಾನಗಳನ್ನು ನೀಡುವ ಮೂಲಕ ಸೂಕ್ತವಾದ ಉತ್ತರವನ್ನು ನೀಡಲಿದ್ದಾರೆ ಎಂದರು.
ಬಿಜೆಪಿಯ ಪ್ರಮುಖ ಚುನಾವಣಾ ತಂತ್ರಗಾರರಾಗಿರುವ ಅಮಿತ್ ಶಾ ಉದ್ಧವ್ ಠಾಕ್ರೆ ಕಡೆ ತಮ್ಮ ಮಾತಿನ ದಾಳಿ ತಿರುಗಿಸುತ್ತಾ “2019 ರಲ್ಲಿ ಸಭೆಯಲ್ಲಿ ಉದ್ಧವ್ ಠಾಕ್ರೆ, ಎನ್‌ಡಿಎ ಅಧಿಕಾರಕ್ಕೆ ಬಂದರೆ ದೇವೇಂದ್ರ ಫಡ್ನವಿಸ್ ಸಿಎಂ ಆಗುತ್ತಾರೆ ಎಂದಾಗ ಒಪ್ಪಿಕೊಂಡಿದ್ದರು. ಆದರೆ ಅಧಿಕಾರ ಮತ್ತು ಮುಖ್ಯಮಂತ್ರಿ ಹುದ್ದೆಗಾಗಿ ಉದ್ಧವ್ ಠಾಕ್ರೆ ಕಾಂಗ್ರೆಸ್-ಎನ್‌ಸಿಪಿ ಜೊತೆ ಮೈತ್ರಿ ಮಾಡಿಕೊಂಡರು” ಎಂದು ಹೇಳಿದರು.

ಉದ್ಧವ್ ಠಾಕ್ರೆ ವಿರುದ್ಧ ಪ್ರಶ್ನೆಗಳ ಸುರಿಮಳೆಗೈಯುತ್ತಾ ಶಾ “ಉದ್ಧವ್ ಠಾಕ್ರೆ ಅವರು ಯೂನಿಫಾರ್ಮ್ ಸಿವಿಲ್ ಕೋಡ್ ಬಗ್ಗೆ ತಮ್ಮ ಪಕ್ಷದ ನಿಲುವನ್ನು ಸ್ಪಷ್ಟಪಡಿಸಬೇಕೆಂದು ನಾವು ಬಯಸುತ್ತೇವೆ. ಅವರು ಕಾಂಗ್ರೆಸ್ಸಿನ ವೀರ್ ಸಾವರ್ಕರ್ ವಿರೋಧಿ ನಿಲುವಿಗೆ ಚಂದಾದಾರರಾಗುತ್ತಾರೆಯೇ? ಉದ್ಧವ್ ಠಾಕ್ರೆ ಅವರು ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆಗೂಡಿದ ನಂತರ ಔರಂಗಾಬಾದ್, ಒಸ್ಮಾನಾಬಾದ್ ಮತ್ತು ಅಹಮದ್‌ನಗರಗಳ ಮರುನಾಮಕರಣವನ್ನು ಬೆಂಬಲಿಸುತ್ತಾರಾ? ಅವರು ಸಂವಿಧಾನಕ್ಕೆ ವಿರುದ್ಧವಾದ ಮುಸ್ಲಿಂ ಮೀಸಲಾತಿಯನ್ನು ಬೆಂಬಲಿಸುತ್ತಾರೆಯೇ?” ಎಂದು ಸ್ಪಷ್ಟಪಡಿಸಬೇಕು ಎಂದು ಹೇಳಿದರು.
ಬಿಸಿಗಾಳಿಯ ಉಷ್ಣ ವಾತಾವರಣವನ್ನು ಲೆಕ್ಕಿಸದೇ ರ್ಯಾಲಿಯಲ್ಲಿ ಭಾಗವಹಿಸಿದ್ದ ಸಾವಿರಾರು ಬೆಂಬಲಿಗರಿಗೆ, ನಿಮಗೆ ನರೇಂದ್ರ ಮೋದಿ ಪ್ರಧಾನಿಯಾಗಬೇಕೋ ಅಥವಾ ರಾಹುಲ್ ಗಾಂಧಿ ಪ್ರಧಾನಿಯಾಗಬೇಕೋ ಎಂದು ಶಾ ಕೇಳಿದಾಗ, ನೆರೆದಿದ್ದ ಜನಸಮೂಹ “ಮೋದಿ, ಮೋದಿ” ಘೋಷಣೆಯೊಂದಿಗೆ ಮತ್ತೊಮ್ಮೆ ಘರ್ಜಿಸಿತು.

ರ್ಯಾಲಿಯಲ್ಲಿ ಮಾತನಾಡುವ ಮೊದಲು, ಅಮಿತ್ ಶಾ ತಾಖತ್ ಸಚ್‌ಖಂಡ್ ಶ್ರೀ ಹಜೂರ್ ಅಬ್‌ಚಲ್‌ನಗರ ಸಾಹಿಬ್ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಿದರು.

http://kalpa.news/wp-content/uploads/2023/05/VID-20230516-WA0005-1.mp4

 

ಇದಕ್ಕೂ ಮುನ್ನ ಗುಜರಾತ್‌ನ ಪಟಾನ್‌ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶಾ ಅಲ್ಲಿಯೂ ರಾಹುಲ್ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡು, ”ಬೇಸಿಗೆಯ ತಾಪದಿಂದ ಪಾರಾಗಲು ರಾಹುಲ್ ಬಾಬಾ ರಜೆಯ ಮೇಲೆ ವಿದೇಶಕ್ಕೆ ತೆರಳಿದ್ದಾರೆ. ಅಲ್ಲಿ ದೇಶವನ್ನುಸದಾ ಟೀಕಿಸುತ್ತಲೇ ಇರುತ್ತಾರೆ. ರಾಹುಲ್ ಗಾಂಧಿ ಅವರು ತಮ್ಮ ಪೂರ್ವಜರನ್ನು ನೋಡಿ ಕಲಿಯಲು ನಾನು ಸಲಹೆ ನೀಡಬಯಸುತ್ತೇನೆ ಎಂದರು.

“ಯಾವುದೇ ದೇಶಭಕ್ತರು ಭಾರತದ ರಾಜಕೀಯದ ಬಗ್ಗೆ ಭಾರತದೊಳಗೆ ಚರ್ಚಿಸಬೇಕು. ವಿದೇಶಕ್ಕೆ ಹೋಗಿ ದೇಶದ ರಾಜಕೀಯದ ಬಗ್ಗೆ ಚರ್ಚಿಸಿ ದೇಶವನ್ನು ಟೀಕಿಸುವುದು ಯಾವುದೇ ಪಕ್ಷದ ನಾಯಕರಿಗೆ ಶೋಭೆ ತರುವುದಿಲ್ಲ. ಇದನ್ನು ದೇಶದ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂಬುದನ್ನು ರಾಹುಲ್ ಬಾಬಾ ನೆನಪಿಟ್ಟುಕೊಳ್ಳಬೇಕು” ಎಂದು ರಾಹುಲ್‌ ಗಾಂಧಿಯವರ ಬಾಲಿಶತನವನ್ನು ಟೀಕಿಸಿದರು.
Kalahamsa Infotech private limitedಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Amith ShahKannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadaNewsinKannadaNewsKannadaಅಮಿತ್ ಶಾವಿಶೇಷ ಲೇಖನ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ರಚನಾತ್ಮಕ ಕಾರ್ಯಕ್ರಮದ ಮೂಲಕ ಜನ್ಮದಿನ ಆಚರಣೆ ಶ್ಲಾಘನೀಯ: ಬೆಕ್ಕಿನಕಲ್ಮಠ ಶ್ರೀ

Next Post

ಜನರ ಸಂಕಷ್ಟ ತಗ್ಗಿಸುವುದೇ ನಮ್ಮ ಗುರಿ: ಮುಖ್ಯಮಂತ್ರಿ ಸಿದ್ದರಾಮಯ್ಯ

kalpa News

kalpa News

Next Post
ಜನರ ಸಂಕಷ್ಟ ತಗ್ಗಿಸುವುದೇ ನಮ್ಮ ಗುರಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಜನರ ಸಂಕಷ್ಟ ತಗ್ಗಿಸುವುದೇ ನಮ್ಮ ಗುರಿ: ಮುಖ್ಯಮಂತ್ರಿ ಸಿದ್ದರಾಮಯ್ಯ

Leave a Reply Cancel reply

Your email address will not be published. Required fields are marked *

No Result
View All Result
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ
English Articles

Shivamogga SIR | District Achieves 81% e-Form Distribution

by kalpa News
July 8, 2026
0

Kalpa Media House  | Shivamogga | As part of the Election Commission of India’s statewide Special Summary Revision of the...

Read moreDetails
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
Culture & Tradition Shine as Rudraksham Marks Milestone Achievement

Culture & Tradition Shine as Rudraksham Marks Milestone Achievement

July 8, 2026
MEIL Completes Historic Largest Concrete Pour for PHWR at Kaiga

MEIL Completes Historic Largest Concrete Pour for PHWR at Kaiga

July 6, 2026
SPARSH RR Nagar Launches 5 Plastic Surgery Clinics of Excellence

SPARSH RR Nagar Launches 5 Plastic Surgery Clinics of Excellence

July 4, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL