ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕುವೆಂಪು ವಿಶ್ವವಿದ್ಯಾಲಯ ಆಯೋಜಿಸಿದ್ದ ಅಂತರ ಕಾಲೇಜು ಫುಟ್ಬಾಲ್ ಪಂದ್ಯಾವಳಿಯಲ್ಲಿ ನಗರದ ಪ್ರತಿಷ್ಠಿತ ಪಿಇಎಸ್’ಐಎಎಂಎಸ್ ಕಾಲೇಜು ತಂಡ ದ್ವಿತೀಯ ಬಹುಮಾನವನ್ನು ಪಡೆದಿದೆ.
ಎರಡು ದಿನಗಳ ಕಾಲ ಆಯೋಜಿಸಲಾಗಿದ್ದ ಪಂದ್ಯಾವಳಿಯಲ್ಲಿ ಸುಮಾರು 9 ತಂಟಗಳು ಭಾಗವಹಿಸಿದ್ದವರು. ಇದರಲ್ಲಿ ಪ್ರತಿಷ್ಠಿತ ಪಿಇಎಸ್’ಐಎಂಎಸ್ ಫುಟ್ಬಾಲ್ ತಂಡವು ದ್ವಿತೀಯ ಬಹುಮಾನವನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಬಹುಮಾನಿತ ತಂಡಕ್ಕೆ ಪ್ರೇರಣಾ ಎಜ್ಯುಕೇಷನಲ್ ಅಂಡ್ ಸೋಷಿಯಲ್ ಟ್ರಸ್ಟಿನ ಆಡಳಿತ ಮಂಡಳಿರವರು, ಮುಖ್ಯ ಆಡಳಿತಾಧಿಕಾರಿ ಡಾ.ನಾಗರಾಜಆರ್ ಮತ್ತು ಪ್ರಾಂಶುಪಾಲರಾದ ಡಾ. ಅರುಣ ಎ ಅವರುಗಳು ಶುಭ ಕೋರಿದ್ದಾರೆ.
Also read: ಗಿನ್ನಿಸ್ ದಾಖಲೆ ಮಾಡುವತ್ತ ‘ದೇವರ ಆಟ ಬಲ್ಲವರಾರು’
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post