ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಯುವಾಬ್ರಿಗೇಡ್ ಶಿಕಾರಿಪುರ ವತಿಯಿಂದ ಶ್ರೀ ಹುಚ್ಚರಾಯ ಸ್ವಾಮಿ ದೇವಸ್ಥಾನದ Huchurayaswamy Temple ಆವರಣವನ್ನು ಯುವ ಬ್ರಿಗೇಡ್ ಕಾರ್ಯಕರ್ತರು ಸ್ವಚ್ಚಗೊಳಿಸಿದರು.
ತಾಲೂಕು ಸಂಚಾಲಕ ನವೀನ್ ಮಾತನಾಡಿ, 500 ವರ್ಷಗಳ ಕದನದ ಬಳಿಕ ಜನವರಿಯಲ್ಲಿ ರಾಮಮಂದಿರ ಲೋಕಾರ್ಪಣೆಯಾಗಲಿದೆ. ಹನುಮ ನಾಡಿನ ನಾವು ಒಂದು ಸಂಕಲ್ಪ ಕೈಗೊಳ್ಳುತ್ತಿದ್ದೇವೆ ಯುವಾಬ್ರಿಗೇಡ್ ವತಿಯಿಂದ ಈ ಭಾನುವಾರ ಶಿಕಾರಿಪುರದ ಶ್ರೀ ಹುಚ್ಚರಾಯ ಸ್ವಾಮಿ ದೇವಸ್ಥಾನವನ್ನು ಸ್ವಚ್ಛಗೊಳಿಸಿ ಮೃತ್ತಿಕೆ ಸಂಗ್ರಹಿಸಿ ನಂತರ ಮೃತ್ತಿಕೆಯನ್ನು ಅಯೋಧ್ಯೆಯ ರಾಮ ಮಂದಿರಕ್ಕೆ ತಲುಪಿಸಲಿದ್ದೇವೆ ಎಂದರು.
ಈ ವೇಳೆ ರಾಮ ಮಂದಿರಕ್ಕೆ ಹನುಮ ನಾಡಿನ ಮೃತ್ತಿಕೆ ಕಳುಹಿಸುವ ಕಾರ್ಯಕ್ರಮ ನಡೆಸಿದ್ದು ಶ್ರೀ ಹುಚ್ಚರಾಯ ಸ್ವಾಮಿ ಸನ್ನಿದಾನದಲ್ಲಿ ಮೃತ್ತಿಕೆ (ಪವಿತ್ರ ಮಣ್ಣು) ಸಂಗ್ರಹ ಮಾಡಿ ಪೂಜೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಯುವಾ ಬ್ರಿಗೇಡ್ ನ ತಾಲೂಕ್ ಸಂಚಾಲಕ ನವೀನ್, ಸದಸ್ಯರಾದ ಡಾ. ಮಹೇಂದ್ರ, ಚಂದ್ರು, ವಿಶ್ವನಾಥ್, ತುಕರಾಮ್, ಸಂತೋಷ್, ಗಿರೀಶ್ ಇದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















