ಮನುಷ್ಯನಿಗೆ ಪ್ರಪಂಚದಲ್ಲಿ ಎಲ್ಲವೂ ತನ್ನದೇ ಎಂದುಕೊಂಡಿದ್ದಾನೆ. ಆದರೆ ಕ್ರಿಮಿ ಕೀಟಗಳೂ ಸೇರಿದಂತೆ ಎಲ್ಲಾ ಜೀವಿಗಳಿಗೂ ಪರಿಸರದ ಮೇಲೆ ಹಕ್ಕಿದೆ. ಪರಿಸರ ರಕ್ಷಣೆ ಕಾರ್ಯಕ್ರಮಗಳು ಪ್ರೇರಣಾ ಶಕ್ತಿ ನೀಡುತ್ತವೆ ಎಂದು ಸಂಸದ ಬಿ.ವೈ. ರಾಘವೇಂದ್ರ MPRagavendra ಹೇಳಿದ್ದಾರೆ.
ಅವರು ಇಂದು ನಗರದ ಅಶ್ವತ್ಥ ನಗರದ ಸ್ವಾಮಿ ವಿವೇಕಾನಂದ ಪಾರ್ಕಿನಲ್ಲಿ ಜೆಸಿಐ ಶಿವಮೊಗ್ಗ ವಿವೇಕ್, ವಿವೇಕ್ ಫೌಂಡೇಷನ್, ಇ. ವಿಶ್ವಾಸ್, ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ, ಪರಿವರ್ತನ ಸೇವಾಬಳಗ, ಸರ್ಜಿ ಫೌಂಡೇಷನ್, ಹೋಟೆಲ್ ಶುಭಂ, ಕಾಟನ್ ಜಾವಾ ವಲ್ರ್ಡ್, ಚೈತನ್ಯ ರೂರಲ್ ಡೆವಲಪ್‍ಮೆಂಟ್ ಸೊಸೈಟಿ, ಶುಭಂ ಶೈಕ್ಷಣಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ. ಎಲ್‍ಬಿಎಸ್ ಮತ್ತು ಅಶ್ವತ್ಥ ನಗರ ನಿವಾಸಿಗಳ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದ ಪಾರ್ಕಿನ ವಿವಿಧ ಕಾಮಗಾರಿ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಪರಿಸರ ಚಿತ್ರಕಲಾ ಸ್ಪರ್ಧೆ, ನಮ್ಮ ಶಿವಮೊಗ್ಗ ನಮ್ಮ ಹೆಮ್ಮೆ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪರಿಸರವನ್ನು ನಾವು ಹಾಳು ಮಾಡಿದರೆ ಸೊಳ್ಳೆಗಳು ಉತ್ಪತ್ತಿಯಾಗಿ ಅವು ನಮ್ಮನ್ನು ಸಾಯಿಸುತ್ತವೆ. ಮಾನವ ಪರಿಸರದ ಮೇಲೆ ನಿರಂತರವಾಗಿ ದಬ್ಬಾಳಿಕೆ ಮಾಡುತ್ತಾ ಬಂದಿದ್ದಾನೆ. ಆರೋಗ್ಯಯುಕ್ತ ಸಮಾಜಕ್ಕಾಗಿ ಪ್ರಧಾನಿ ಮೋದಿಯವರು ಅನೇಕ ಪರಿಸರ ಪೂರಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ. ಪೆಟ್ರೋಲ್ ಡೀಸೆಲ್ ಮುಕ್ತ ಪರಿಸರ ಪ್ರೇಮಿ ವಾಹನಗಳಿಗೆ ಉತ್ತೇಜನ ನೀಡುತ್ತಿದ್ದಾರೆ. ಇಲ್ಲಿ ಸಾರ್ವಜನಿಕರ ಸಹಾಯದಿಂದ ಒತ್ತುವರಿ ಆಗುತ್ತಿದ್ದ ಭೂಮಿಯಲ್ಲಿ ಸುಂದರ ಪಾರ್ಕ್ ನಿರ್ಮಾಣಗೊಂಡಿದೆ. ಇದೊಂದು ಮಾದರಿ ಕಾರ್ಯವಾಗಿದ್ದು ಎಲ್ಲರಿಗೂ ಪ್ರೇರಣೆ ಆಗಲಿ ಎಂದರು.
Also read: ಮದುವೆಯಾಗಲು ಹೆಣ್ಣು ಸಿಗದೆ ಮನನೊಂದು ಯುವಕ ಆತ್ಮಹತ್ಯೆ
ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ,, ಪರಿಸರ ರಕ್ಷಣೆ ಜೀವನದ ಒಂದು ಅವಿಭಾಜ್ಯ ಅಂಗ. ಪರಿಸರವೇ ನಮ್ಮ ಉಸಿರು. ಈ ದಿಕ್ಕಿನಲ್ಲಿ ಎಲ್ಲಾ ನಾಗರಿಕರು ಆಲೋಚನೆ ಮಾಡಬೇಕು. ಮಕ್ಕಳಲ್ಲು ಕೂಡ ಪರಿಸರ ಜಾಗೃತಿ ಮೂಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ಪಾಲಿಕೆ ಸದಸ್ಯ ಇ. ವಿಶ್ವಾಸ್ ಅವರ ಜನ್ಮದಿನದ ಅಂಗವಾಗಿ ರಕ್ತದಾನ ಶಿಬಿರವನ್ನು ಕೂಡ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ವಾಕಿಂಗ್ ಪಾಥ್ ಉದ್ಘಾಟನೆ, ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಓಪನ್ ಜಿಮ್‍ಉದ್ಘಾಟನೆ, 58 ಬಾರಿ ರಕ್ತದಾನ ಮಾಡಿದ ಕಾರ್ಪೊರೇಟರ್ ವಿಶ್ವಾಸ್ ಅವರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿತ್ತು. ನೂರಾರು ಮಕ್ಕಳು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಶಾಸಕರಾದ ಎಸ್.ರುದ್ರೇಗೌಡ, ಡಿ.ಎಸ್ ಅರುಣ್, ಜೆಸಿಐ ಶಿವಮೊಗ್ಗ ಅಧ್ಯಕ್ಷ ಶ್ರೀಧರ್ ಹೆಗ್ಡೆ, ಅನುಷ್ ಗೌಡ, ಜ್ಯೋತಿಪ್ರಕಾಶ್, ನಾಗರಾಜ್, ಡಾ.ಧನಂಜಯ ಸರ್ಜಿ, ತಾಯಿಮನೆ ಸುದರ್ಶನ್, ಹರ್ಷ ಕಾಮತ್, ಉದಯ ಕಡಂಬ, ವಕೀಲ ಸತ್ಯನಾರಾಯಣ ಎಂ. ಆರ್., ಕಾಟನ್ ಜಗದೀಶ್, ಸತೀಶ್, ಪರಿಸರ ನಾಗರಾಜ್, ಮತ್ತಿತರರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















