ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಜನಸಮೂಹದ ನಾಡಿಮಿಡಿತವನ್ನು ಅರಿಯುವ ತಮ್ಮ ಅಸಾಮಾನ್ಯ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿರುವ ಬಿಜೆಪಿಯ ವರಿಷ್ಠ ನಾಯಕ ಅಮಿತ್ ಶಾರವರು, ಈ ವರ್ಷದ ಕೊನೆಯಲ್ಲಿ ನಡೆಯಲಿರುವ ರಾಜಸ್ಥಾನದ ವಿಧಾನಸಭಾ ಚುನಾವಣೆಯಲ್ಲಿ ಜನರು ಗೆಹ್ಲೋಟ್‌ರ “3D” ಸರ್ಕಾರವನ್ನು ಕಿತ್ತೊಗೆಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇತ್ತೀಚೆಗೆ ರಾಜಸ್ಥಾನದಲ್ಲಿ ಬೃಹತ್ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಗೃಹ ಸಚಿವರು, ನರೇಂದ್ರ ಮೋದಿಯವರು PM Narendra Modi 2024 ರಲ್ಲಿ ಮೂರನೇ ಬಾರಿಗೆ ಪ್ರಧಾನಿಯಾಗಿ ಮರು ಆಯ್ಕೆಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರ್ಯಾಲಿಯಲ್ಲಿ ನೆರೆದಿದ್ದ ಅಪಾರ ಪ್ರಮಾಣದ ಜನಸಮೂಹದಿಂದ ಉತ್ಸಾಹಗೊಂಡ ಶಾ, “ಗೆಹ್ಲೋಟ್‌ರವರೇ, ನಿಮ್ಮ ಈ ಇಳಿ ವಯಸ್ಸಿನಲ್ಲಿ ನೀವು ಯಾಕೆ ಅಧಿಕಾರಕ್ಕಾಗಿ ಅಲ್ಲಿ ಇಲ್ಲಿ ಓಡುತ್ತಿದ್ದೀರಿ? ಯಾರಾದರು ಈ ಸಭೆಯ ವಿಡಿಯೋವನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಿರಿ. ಅವರ ಸರ್ಕಾರದ ಕೌಂಟ್‌ಡೌನ್ ಆರಂಭವಾಗಿದೆ ಎಂದು ಅವರಿಗೆ ತಿಳಿಯಲಿದೆ. 2023 ಮತ್ತು 2024ರ ಚುನಾವಣೆಗಳಲ್ಲಿ ಬಿಜೆಪಿ ಸಂಪೂರ್ಣವಾಗಿ ಗೆಲುವು ಸಾಧಿಸಲಿದೆ’ ಎಂದು ಎಂದಿನಂತೆ ತಮ್ಮ ನಿರಂಕುಶ ಶೈಲಿಯಲ್ಲಿ ಹೇಳಿದರು.

ಹಾಡು ಹಗಲೇ ಅಕ್ರಮ ಗಣಿಗಾರಿಕೆ ಚಟುವಟಿಕೆಗಳು ನಡೆಯುತ್ತಿವೆ. ರಾಜ್ಯ ಸಚಿವಾಲಯದಿಂದ ಅಪಾರ ಪ್ರಮಾಣದ ಲೆಕ್ಕಕ್ಕೆ ಸಿಗದ ನಗದು ಮತ್ತು ಒಂದು ಕಿಲೋಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ. ಗೆಹ್ಲೋಟ್ 2018ರ ಚುನಾವಣಾ ಪೂರ್ವದಲ್ಲಿ ತಮ್ಮ ಪಕ್ಷ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ರೈತರ ಸಾಲ ಮನ್ನಾ ಆಗಿಲ್ಲ, ಸಾಲ ಮರುಪಾವತಿ ಮಾಡದ 19 ಸಾವಿರ ರೈತರ ಜಮೀನು ವಶಪಡಿಸಿಕೊಳ್ಳಲಾಗಿದೆ. ಯುವಜನರಿಗೆ ಉದ್ಯೋಗ ದೊರೆಯುತ್ತಿಲ್ಲ. ರಾಜ್ಯವು ನಿರುದ್ಯೋಗ ಮತ್ತು ಮಹಿಳೆಯರ ಮೇಲಿನ ಅತ್ಯಾಚಾರ ವಿಷಯದಲ್ಲಿ ಅಗ್ರಸ್ಥಾನದಲ್ಲಿದೆ.

“ಕನ್ಹಯ್ಯಾ ಲಾಲ್‌ಗೆ ಭದ್ರತೆ ಒದಗಿಸುವಲ್ಲಿ ವಿಫಲರಾದವರು ಯಾರು? ಪೊಲೀಸರು ಮೌನಕ್ಕೆ ಶರಣಾಗಲು ಕಾರಣವೇನು? ಭಯೋತ್ಪಾದಕರನ್ನು ಹಿಡಿಯಲು ರಾಜಸ್ಥಾನ ಪೊಲೀಸರಿಗೆ ಇಷ್ಟವಿರಲಿಲ್ಲ. ಎನ್‌ಐಎ(ರಾಷ್ಟ್ರೀಯ ತನಿಖಾ ದಳ) ಅವರನ್ನು ಬಂಧಿಸಿದೆ,” ಎಂದ ಶಾ, “ಶಂಕಿತರ ವಿರುದ್ಧ ಯಾವುದೇ ಆರೋಪಪಟ್ಟಿ ಸಲ್ಲಿಸಿಲ್ಲ” ಎಂದು ಮುಖ್ಯಮಂತ್ರಿಗಳು ಸುಳ್ಳು ವದಂತಿಗಳನ್ನು ಹರಡಬಾರದು ಎಂದು ಹೇಳಿದರು. “ಡಿಸೆಂಬರ್ 22, 2022 ರಂದು ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ತನ್ನ ಮತ-ಬ್ಯಾಂಕ್ ರಾಜಕೀಯದ ಬಗ್ಗೆ ಕಾಂಗ್ರೆಸ್ ನಾಚಿಕೆಪಡಬೇಕು” ಎಂದು ಕಠಿಣ ಪದಗಳಲ್ಲಿ ಕಾಂಗ್ರೆಸ್‌ನ್ನು ಟೀಕಿಸದರು.
ರಾಜಸ್ಥಾನ ಸರ್ಕಾರ, ರಾಜ್ಯದಲ್ಲಿ ನಿಷೇಧಿತ ಪೀಪಲ್ಸ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ)ಗೆ ಮುಕ್ತ ಸ್ವಾತಂತ್ರ್ಯ ನೀಡಿದೆ ಎಂದು ಆರೋಪಿಸಿದ ಶಾ, “ಮೋದಿಯವರು ಪಿಎಫ್‌ಐ ಅನ್ನು ನಿಷೇಧಿಸಿದ್ದರು, ಆದರೆ ಗೆಹ್ಲೋಟ್ ಆಳ್ವಿಕೆಯಲ್ಲಿ, ಪಿಎಫ್‌ಐ ಕೋಟಾದಲ್ಲಿ ರ್ಯಾಲಿ ನಡೆಸಿತು. ವಸುಂಧರಾ ರಾಜೇಯವರು ಇಲ್ಲಿನ ಮುಖ್ಯಮಂತ್ರಿಯಾಗಿದ್ದಾಗ, ನಾವು ಭಯೋತ್ಪಾದನೆಗೆ ಕಠಿಣ ಲಗಾಮು ಹಾಕಿದ್ದೆವು” ಎಂದು ತಮ್ಮ ಪಕ್ಷದ ಭಯೋತ್ಪಾದನಾ ವಿರೋಧಿ ನಿಲುವನ್ನು ಸ್ಪಷ್ಟಪಡಿಸಿದರು.












Discussion about this post