ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕುಂಸಿ ರೈಲ್ವೆ ವಿಭಾಗದಲ್ಲಿ ತಾಂತ್ರಿಕ ನಿರ್ವಹಣೆ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಜುಲೈ 7ರಂದು ಶಿವಮೊಗ್ಗ-ತಾಳಗುಪ್ಪ ನಡುವಿನ ಒಂದು ರೈಲು ಸಂಚಾರವನ್ನು ರದ್ದು ಮಾಡಲಾಗಿದೆ.
ಈ ಕುರಿತಂತೆ ರೈಲ್ವೆ ಇಲಾಕೆ ಪ್ರಕಟಣೆ ಹೊರಡಿಸಿದ್ದು, ಜುಲೈ 7ರಂದು ಬೆಳಗ್ಗೆ 11.30ರಿಂದ 3.30ರವರೆಗೂ ಕಾಮಗಾರಿ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ರೈಲು ಸಂಚಾರ ಇರುವುದಿಲ್ಲ.
Also read: ಕೋವಿಡ್-19 ಕೋರ್ಬಿವ್ಯಾಕ್ಸ್ ಲಸಿಕೆ ಹಾಕಿಸಿಕೊಳ್ಳಲು ಮನವಿ
ಕಾಮಗಾರಿ ಹಿನ್ನೆಲೆಯಲ್ಲಿ ಶಿವಮೊಗ್ಗ ಟೌನ್ – ತಾಳಗುಪ್ಪ – ಶಿವಮೊಗ್ಗ ಟೌನ್ (07349-07350) ರೈಲನ್ನು ಈ ಮಾರ್ಗದಲ್ಲಿ ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post