ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ(ಸೊರಬ) |
ತಾಲೂಕಿನ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಶ್ರೀ ರೇಣುಕಾಂಬ ದೇಗುಲಕ್ಕೆ ಭಕ್ತರಿಂದ ಹರಕೆ ರೂಪದಲ್ಲಿ ಬಂದಂತಹ ವಸ್ತ್ರಗಳನ್ನು ಬಹಿರಂಗ ಹರಾಜು ಹಾಕಲಾಗಿದ್ದು, ಇದರಿಂದಾಗಿ ಒಟ್ಟು 4.90 ಲಕ್ಷ ರೂ. ಆದಾಯ ಸಂಗ್ರಹವಾಗಿದೆ.
ಎರಡು ವರ್ಷಗಳಿಂದ ಸಂಗ್ರಹವಾಗಿದ್ದ ಸೀರೆ ಮತ್ತು ರವಿಕೆ ವಸ್ತ್ರಗಳನ್ನು ಚಂದ್ರಗುತ್ತಿ ಪ್ರಭಾರ ಉಪ ತಹಶೀಲ್ದಾರ್ ಹಾಗೂ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ವಿ.ಎಲ್ ಶಿವಪ್ರಸಾದ್ ಅವರ ಸಮ್ಮುಖದಲ್ಲಿ ಹರಾಜು ಮಾಡಲಾಯಿತು. ಹರಾಜಿನಿಂದ ಒಟ್ಟು 4,90 ಲಕ್ಷ ರೂ. ಆದಾಯ ಸಂಗ್ರಹವಾಗಿದೆ.
2021 ಜನವರಿ ತಿಂಗಳಲ್ಲಿ ಸೀರೆ ಮತ್ತು ರವಿಕೆ ವಸ್ತçಗಳನ್ನು ಹರಾಜು ಮಾಡಿದಾಗ 4,70 ಲಕ್ಷ ರೂ. ಸಂಗ್ರವಾಗಿತ್ತು. 2023 ಜುಲೈ ತಿಂಗಳಿನಲ್ಲಿ ಹರಾಜು ಮಾಡಿದಾಗ 4,90 ಲಕ್ಷ ರೂ. ಸಂಗ್ರಹವಾಗಿದೆ.
Also read: ಹಿಂದುಳಿದ ವರ್ಗ ವಿದ್ಯಾರ್ಥಿಗಳು ಶುಲ್ಕ ಮರುಪಾವತಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಹರಾಜು ಪ್ರಕ್ರಿಯೆಯಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಸನ್ನ ಶೇಟ್, ಸದಸ್ಯರಾದ ಶಿವಶಂಕರ್ ಗೌಡ್ರು, ವೆಂಕಟೇಶ್, ಪ್ರಮುಖರಾದ ಪರಶುರಾಮ್ ಬೋವಿ, ಗಣೇಶ್ ಮರಡಿ, ಸದಾನಂದ ಕಾಮತ್, ದಿನೇಶ್ ಅಂಚೆ, ಸಿಬ್ಬಂದಿ ಚಂದನ್, ಸೇರಿದಂತೆ ಗ್ರಾಮ ಲೆಕ್ಕಗಳು, ದೇವಸ್ಥಾನದ ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು,
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post