ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಾಂಗ್ರೆಸ್ ಸರ್ಕಾರವು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ ಭರವಸೆಗಳನ್ನು ಈಡೇರಿಸಲು ಪೂಕರವಾದ ಬಜೆಟ್ ಮಂಡನೆ ಮಾಡಿದೆ. ರಸ್ತೆ, ಮೆಟ್ರೊ ರೈಲು ನಿಲ್ದಾಣ, ವಿಮಾನ ನಿಲ್ದಾಣ ಕಾಮಗಾರಿಗೆ ಹಣ ಮೀಸಲಿರಿಸುವ ಮುಖಾಂತರ ಮೂಲಸೌಕರ್ಯಕ್ಕೆ ಒತ್ತು ನೀಡಲಾಗಿದೆ. ಕೈಗಾರಿಕಾ ವಸಾಹತುಗಳನ್ನು ಹೊಸದಾಗಿ ಪ್ರಾರಂಭಿಸಲು ಹಣ ತೆಗೆದಿರಿಸಿರುವುದು ಸ್ವಾಗತಾರ್ಹ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ಹೇಳಿದ್ದಾರೆ.
ಹಿಂದೆಯು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಜಾರಿಗೆ ತಂದಿದ್ದ ಹಲವಾರು ಭಾಗ್ಯಗಳನ್ನು ಮತ್ತೆ ಜಾರಿಗೊಳಿಸುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಲು ಮುಂದಾಗಿದ್ದಾರೆ. ಆದರೆ ಸರ್ವರಿಗೂ ಸಮಪಾಲು ಆಶಯದಂತೆ ಶಿವಮೊಗ್ಗ ಜಿಲ್ಲೆಗೆ ಅವಶ್ಯಕತೆ ಇರುವ ಯೋಜನೆಗಳನ್ನು ಜಾರಿಗೆ ತರಲು ಹಣ ಮೀಸಲು ಇಡದೇ ಇರುವುದು ವಿಷಾಧನೀಯ ಎಂದು ತಿಳಿಸಿದ್ದಾರೆ.
ಟ್ರಕ್ ಟರ್ಮಿನಲ್, ಆಯುಷ್ ವಿಶ್ವವಿದ್ಯಾಲಯ, ಕೈಗಾರಿಕಾ ಕಾರಿಡಾರ್, ಪ್ರವಾಸೋದ್ಯಮ ಮತ್ತು ಗುಡಿ ಕೈಗಾರಿಕಾ ನಿಗಮ ಸ್ಥಾಪನೆ ಆಗಬೇಕಿತ್ತು. ರಾಜ್ಯದ ಐದು ಕೈಗಾರಿಕಾ ವಸಾಹತುಗಳಲ್ಲಿ ಆದ್ಯತೆ ಮೇರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ಕೈಗಾರಿಕಾ ವಸಾಹತು ನಿರ್ಮಿಸುವ ಮೂಲಕ ಜಿಲ್ಲೆಗೆ ನ್ಯಾಯ ಒದಗಿಸಬೇಕು ಎಂದು ಜನರ ಪರವಾಗಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಆಗ್ರಹಿಸಿದೆ.
Also read: ಆರೋಗ್ಯವಂತರಾಗಿರುವ ಪ್ರತಿಯೊಬ್ಬರು ರಕ್ತದಾನ ಮಾಡಬೇಕು: ಪ್ರಭುಗೌಡ ಕರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post