ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ನವದೆಹಲಿ ಸೇರಿದಂತೆ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಭಾರೀ ಮಳೆಯಿಂದಾಗಿ ನದಿಗಳು ರುದ್ರನರ್ತನ ಮಾಡುತ್ತಿದ್ದು, ಪರಿಣಾಮವಾಗಿ ಇಂದು ಮುಂಜಾನೆಯವರೆಗೂ 88ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತಂತೆ ಹಿಮಾಚಲ ಪ್ರದೇಶದ ಹಂಗಾಮಿ ಪೊಲೀಸ್ ಮಹಾನಿರ್ದೇಶಕರು ರಾಷ್ಟ್ರೀಯ ಮಾಧ್ಯಮಗಳಿಗೆ ಮಾಹಿತಿ ಬಿಡುಗಡೆ ಮಾಡಿದ್ದು, ಕುಲು ಜಿಲ್ಲೆಯ ಬಿಯಾಸ್ ನದಿಯಿಂದ 13 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಆದರೆ, ಗುರುತು ಪತ್ತೆಯಾಗಿಲ್ಲ. ಮರಣೋತ್ತರ ಪರೀಕ್ಷೆಯ ನಂತರವಷ್ಟೆ ಗುರುತು ಸಿಗಲಿದೆ. ತಮ್ಮವರು ಕಾಣೆಯಾದ ಕುರಿತಾಗಿ ಬಹಳಷ್ಟು ಮಂದಿ ಈಗಾಗಲೇ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಿದ್ದಾರೆ ಎಂದರು.
ವಿವಿಧ ಸ್ಥಳಗಳಲ್ಲಿ ಸಿಲುಕಿದ್ದ ಸುಮಾರು 1500 ಮಂದಿಯನ್ನು ಹಾಗೂ 40 ವಿದೇಶಿ ಪ್ರಜೆಗಳನ್ನು ರಕ್ಷಣೆ ಮಾಡಲಾಗಿದೆ. ಕುಲು ಜಿಲ್ಲೆಯ ಕಸೋಲ್ ಪ್ರದೇಶದಿಂದ 2,000 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಹಿಮಾಚಲ ಪ್ರದೇಶದಲ್ಲಿ ಮಳೆಯಿಂದಾಗಿ ಈವರೆಗೂ 88 ಜನರು ಮೃತಪಟ್ಟಿದ್ದು, 16 ಜನರು ನಾಪತ್ತೆಯಾಗಿದ್ದಾರೆ. 100 ಜನರು ಗಾಯಗೊಂAಡಿದ್ದು, 492 ಜಾನುವಾರುಗಳು ಸಾವನ್ನಪ್ಪಿವೆ ಎಂದು ವರದಿಯಾಗಿದೆ.
Also read: ಜಿ-20 ಸಂಸ್ಕೃತಿ ಸಭೆ: ವಿದೇಶಿ ಅತಿಥಿಗಳಿಂದ ವಾಸ್ತುಶಿಲ್ಪ ವೈಭವದ ಶ್ಲಾಘನೆ
ಇನ್ನು, ನವದೆಹಲಿಯಲ್ಲಿಯೂ ಸಹ ಮಳೆಯಿಂದಾಗಿ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಈ ಮೂಲಕ 45 ವರ್ಷಗಳ ದಾಖಲೆಯನ್ನು ಮುರಿದಿದೆ. ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post