ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೇಡಿಯೋ ಶಿವಮೊಗ್ಗ 90.8 ಎಫ್’ಎಂ ಸಮುದಾಯ ಬಾನುಲಿಯಲ್ಲಿ ಜುಲೈ 17ರ ಸೋಮವಾರದಂದು ಬೆಳಗ್ಗೆ 10 ಗಂಟೆಯಿAದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸದಸ್ಯ ಬಿ.ವೈ. ರಾಘವೇಂದ್ರ MP Raghavendra ಅವರೊಂದಿಗೆ ನೇರ ಸಂವಾದ, ಫೋನ್ ಇನ್ ಕಾರ್ಯಕ್ರಮ ಆಯೋಜಿಸಲಾಗಿದೆ.
ಬೆಳಗ್ಗೆ 10:30ರಿಂದ ಸಾರ್ವಜನಿಕರ ಕರೆಗಳನ್ನು ಸ್ವೀಕರಿಸಲಿದ್ದು, ಕಾರ್ಯಕ್ರಮದ ಅವಧಿಯಲ್ಲಿ ರೇಡಿಯೋ ಶಿವಮೊಗ್ಗದ ಸ್ಟುಡಿಯೋ ಸಂಖ್ಯೆ (ಮೊ: 96860 96279) ಗೆ ಕರೆ ಮಾಡಬಹುದಾಗಿದೆ. ನಿಮ್ಮ ಅಹವಾಲು, ಸಲಹೆಗಳಿಗೆ ಮುಕ್ತ ಸ್ವಾಗತವಿರುತ್ತದೆ.
ರೇಡಿಯೋ ಶಿವಮೊಗ್ಗ ಮೊಬೈಲ್ ಆಪ್’ನಲ್ಲಿ ಕೂಡಾ ಲಭ್ಯವಿದೆ. ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್ ಸ್ಟೋರ್’ನಲ್ಲಿ ಡೌನ್ ಲೋಡ್ ಮಾಡಿಕೊಂಡು ಕೇಳಬಹುದಾಗಿದೆ. ಆಪ್’ನಲ್ಲಿ 24 ಗಂಟೆಯ ಪ್ರಸಾರವಿದೆ.
Also read: ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಪೂರ್ವಸಭೆ: ರಘುಪತಿ ಭಟ್ ಭಾಗಿ
ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೇಳುಗರು ಕರೆ ಮಾಡಿ, ಭಾಗವಹಿಸಿಬೇಕೆಂದು ನಿಲಯ ನಿರ್ದೇಶಕ ಜಿ.ಎಲ್. ಜನಾರ್ದನ್ ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post